Home Uncategorized ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ನಡೆಸಿ, ಶವವನ್ನು ಕಾಡಿಗೆ ಎಳೆದೊಯ್ದ ಕರಡಿ!

ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ನಡೆಸಿ, ಶವವನ್ನು ಕಾಡಿಗೆ ಎಳೆದೊಯ್ದ ಕರಡಿ!

38
0

ಹೊಲದಲ್ಲಿ ಕೆಲಸ ಮಾಡುವಾಗ ಕರಡಿ ದಾಳಿಗೆ ಸಿಲುಕಿ ರೈತ ಸಾವಿಗೀಡಾಗಿರುವ ಘಟನೆ ಸೋಮವಾರ ಬೆಳಗಾವಿ ಜಿಲ್ಲೆಯ ಖಾನಾಪುರ ಸಮೀಪದ ಘೋಶೆ ಬದ್ರುಕ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು 63 ವರ್ಷದ ಭೀಕಾಜಿ ಮಿರಾಶಿ ಎಂದು ಗುರುತಿಸಲಾಗಿದೆ.  ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುವಾಗ ಕರಡಿ ದಾಳಿಗೆ ಸಿಲುಕಿ ರೈತ ಸಾವಿಗೀಡಾಗಿರುವ ಘಟನೆ ಸೋಮವಾರ ಬೆಳಗಾವಿ ಜಿಲ್ಲೆಯ ಖಾನಾಪುರ ಸಮೀಪದ ಘೋಶೆ ಬದ್ರುಕ ಗ್ರಾಮದಲ್ಲಿ ನಡೆದಿದೆ.

ಮೃತ ರೈತನನ್ನು 63 ವರ್ಷದ ಭೀಕಾಜಿ ಮಿರಾಶಿ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕರಡಿ ದಾಳಿ ನಡೆಸಿದೆ. ಈ ವೇಳೆ ಹೊಲದಲ್ಲಿ ಇತರರು ಕೂಡ ಕೆಲಸ ಮಾಡುತ್ತಿದ್ದರು. ಇದನ್ನು ಲೆಕ್ಕಿಸದ ಕರಡಿ ದಾಳಿ ಮಾಡಿ, ರೈತನ ದೇಹವನ್ನು ಎರಡು ಕಿಲೋಮೀಟರ್ ದೂರದವರೆಗೆ ಅರಣ್ಯಕ್ಕೆ ಎಳೆದೊಯ್ದಿದೆ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇತರರ ಸಮ್ಮುಖದಲ್ಲಿಯೇ ಕರಡಿ ರೈತನ ಮೇಲೆ ದಾಳಿ ಮಾಡಿದೆ. ಈ ವೇಳೆ ಅವರು ಗಲಾಟೆ ಮಾಡಿ, ಕಲ್ಲು ಎಸೆದರೂ ಪ್ರಯೋಜನವಾಗಿಲ್ಲ. 

ಭಾನುವಾರ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಹಾಗೂ ಭಯ ಮೂಡಿಸಿದೆ. ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಕಾಡುಪ್ರಾಣಿಗಳು ಗ್ರಾಮಗಳಿಗೆ ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here