Home Uncategorized ಬೆಳ್ಳಿತೆರೆಗೆ ಕಿಚ್ಚು ಹಚ್ಚಲು ರೆಡಿಯಾಗ್ತಿದ `ಕೆಂಡ’ ಕಲಾವಿದರು

ಬೆಳ್ಳಿತೆರೆಗೆ ಕಿಚ್ಚು ಹಚ್ಚಲು ರೆಡಿಯಾಗ್ತಿದ `ಕೆಂಡ’ ಕಲಾವಿದರು

30
0

ಕೆಂಡ (Kenda) ಈ ಹೆಸರು ಕೇಳಿದಾಕ್ಷಣ ಕಿವಿ ನೆಟ್ಟಗಾಗುತ್ತವೆ. ಯಾಕಂದ್ರೆ, ಆ ಶೀರ್ಷಿಕೆಯಲ್ಲೇ ಫೈಯರ್ ಪ್ಲಸ್ ಪವರ್ ಎರಡೂ ಇದೆ. ಇಂತಹ ಪವರ್ ಫುಲ್ ಹೆಸರನ್ನಿಟ್ಟುಕೊಂಡು ಕಣಕ್ಕಿಳಿಯುವುದಕ್ಕೆ ಪ್ರತಿಭಾನ್ವಿತರ ತಂಡವೊಂದು ಸಜ್ಜಾಗಿದೆ. ಈಗಾಗಲೇ ನಿಮ್ಮೆಲ್ಲರಿಗೂ ಆ ತಂಡದ ಪರಿಚಯವಿದೆ. ಈ ಹಿಂದೆ ಇದೇ ಬಳಗದ ಸಾರಥಿಗಳಾದ ರೂಪಾ ರಾವ್ (Rupa Rao) ಹಾಗೂ ಸಹದೇವ್ ಕೆಲವಡಿಯವರು (Sahadev Kelavadi) `ಗಂಟುಮೂಟೆ’ ಹೆಸರಿನ ಸಿನಿಮಾದ ಮೂಲಕ ನಿಮ್ಮೆಲ್ಲರನ್ನೂ ಎದುರುಗೊಂಡಿದ್ದರು. ಈಗ `ಕೆಂಡ’ ಸಿನಿಮಾದೊಂದಿಗೆ ಮುಖಾಮುಖಿಯಾಗಲು ಬಯಸಿದ್ದಾರೆ. ಇತ್ತೀಚೆಗಷ್ಟೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ನಾವು `ಕೆಂಡ’ದಂತಾ ಸಿನಿಮಾ ಮಾಡಿದ್ದೇವೆ. ನಿಮ್ಮ ಮುಂದೆ ಬರಲು ಸಜ್ಜಾಗುತ್ತಿದ್ದೇವೆ ಎಂದು ಸುಳಿವು ಕೊಟ್ಟಿದ್ದರು. ಈಗ `ಕೆಂಡ’ ಕಲಾವಿದರನ್ನು ಪರಿಚಯಿಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಯಸ್, ಕನ್ನಡ ಸಿನಿಮಾ ಪ್ರೇಕ್ಷಕರಿಗೆ `ಕೆಂಡ’ ಕಲಾವಿದರ ದರ್ಶನವಾಗಿದೆ. ಗಂಟುಮೂಟೆ ಚಿತ್ರ ಬಿಡುಗಡೆಗೊಂಡು 4 ವರ್ಷ ಪೂರೈಸಿದರ ಸಂಭ್ರಮಕ್ಕೆ ಸಾಕ್ಷಿಯಾಗಿ `ಕೆಂಡ’ ಕ್ಯಾರೆಕ್ಟರ್ ಇಂಟ್ರುಡಕ್ಷನ್ ಟೀಸರ್ ಹೊರಬಿದ್ದಿದೆ. ಒಬ್ಬೊಬ್ಬ ಕಲಾವಿದನೂ ಕೂಡ ಬೆಂಕಿನುಂಡೆಯಂತಿದ್ದು, ಬೆಳ್ಳಿತೆರೆಗೆ ಕಿಚ್ಚು ಹಚ್ಚೋದು ಗ್ಯಾರಂಟಿ ಎನ್ನುವ ಸೂಚನೆ ಮೊದಲ ನೋಟದಲ್ಲೇ ಕಾಣಸಿಗ್ತಿದೆ. ಲೋಕೇಶ್ ಹೆಸರಿನ ಪಾತ್ರಕ್ಕೆ ಸಚ್ಚಾ, ಜಯರಾಮ್ ಕ್ಯಾರೆಕ್ಟರ್ ಗೆ ಶರತ್ ಗೌಡ, ವಿನಾಯಕ ರೋಲ್‍ನಲ್ಲಿ ಪ್ರಣವ್ ಶ್ರೀಧರ್, ಕೇಶವನಾಗಿ ಬಿ.ವಿ ಭರತ್ ಅನ್ನೋರು ಬಣ್ಣ ಹಚ್ಚಿದ್ದಾರೆ. ಈ ನಾಲ್ಕು ಕ್ಯಾರೆಕ್ಟರ್ ಕಿಚ್ಚಿಗೆ ಕೆಂಡ ಅಖಾಡ ಧಗಧಗಿಸಿದೆ. ಕಲಾಭಿಮಾನಿಗಳಿಂದ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡು ಪಾತ್ರದಿಂದಲೇ ಈ ನಾಲ್ವರು ಕಲಾವಿದರು ಗುರ್ತಿಸಿಕೊಳ್ಳುವ ಭರವಸೆ ಹೆಚ್ಚಿದೆ.

The post ಬೆಳ್ಳಿತೆರೆಗೆ ಕಿಚ್ಚು ಹಚ್ಚಲು ರೆಡಿಯಾಗ್ತಿದ `ಕೆಂಡ’ ಕಲಾವಿದರು appeared first on Ain Live News.

LEAVE A REPLY

Please enter your comment!
Please enter your name here