ಬೆಂಗಳೂರು;- ಬೈಕ್ ನಂಬರ್ಪ್ಲೇಟ್ಗೆ ಮಾಸ್ಕ್ ತೊಡಿಸಿದ್ದ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿ ದಂಡದಿಂದ ತಪ್ಪಿಸಿಕೊಳ್ಳಲು ಬೈಕ್ನ ಹಿಂಭಾಗದ ನಾಮಫಲಕಕ್ಕೆ ಮಾಸ್ಕ್ ಹಾಕಿ ಚಲಾಯಿಸುತ್ತಿದ್ದ. ಇಂಥ ಕೆಲಸಕ್ಕೆ ಕೈ ಹಾಕಿ ಇದೀಗ ಮಹದೇವಪುರ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದಂಡದಿಂದ ನುಣುಚಿಕೊಳ್ಳಲು ಬೈಕ್ ಸವಾರ ಲಕ್ಷ್ಮಣ್ ಎಂಬವನು, ಹಿಂಭಾಗದ ನಂಬರ್ಪ್ಲೇಟ್ಗೆ ಮಾಸ್ಕ್ ಹಾಕಿ ಓಡಾಡುತ್ತಿದ್ದ. ಸಾರ್ವಜನಿಕರೊಬ್ಬರು ನಾಮಫಲಕಕ್ಕೆ ಮಾಸ್ಕ್ ಹಾಕಿರುವ ಫೋಟೋವನ್ನು ಸಂಚಾರ ವಿಭಾಗದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ಆಧರಿಸಿ ಮಹದೇವಪುರ ಸಂಚಾರ ಪೊಲೀಸರು ಬೈಕ್ ಸವಾರರನನ್ನು ಪತ್ತೆ ಹಚ್ಚಿದ್ದಾರೆ.
ವಾಹನ ಪರಿಶೀಲನೆಯ ಸಂದರ್ಭದಲ್ಲಿ ಈ ಬೈಕ್ ಮೇಲೆ 26 ಟ್ರಾಫಿಕ್ ಕೇಸ್‌ಗಳು ದಾಖಲಾಗಿರುವುದನ್ನು ಕಂಡುಕೊಂಡಿದ್ದಾರೆ. ಬೈಕ್ ಜಪ್ತಿ ಮಾಡಿ, ಮಹದೇವಪುರ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ಒಪ್ಪಿಸ, ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸವಾರನ ವಿಚಾರಣೆ ನಡೆಸಿದಾಗ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಹಾಕಿಕೊಂಡಿದ್ದಾಗಿ ಹೇಳಿದ್ದಾನೆ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದರು.
The post ಬೈಕ್ ನಂಬರ್ಪ್ಲೇಟ್ಗೆ ಮಾಸ್ಕ್ ಹಾಕಿ ಸಂಚಾರ- ಸವಾರನ ವಿರುದ್ಧ FIR ದಾಖಲು appeared first on Ain Live News.