ಕೋಲಾರ: ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್.ರವಿ ಕುಮಾರ್ ಅವರ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಇಂದು(ಡಿಸೆಂಬರ್ 04) ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಬೈಕ್ ಸವಾರ ಶಿವನಪುರದ ಗೋಪಾಲ್ಗೆ ಗಾಯಗಳಾಗಿವೆ. ಆದ್ರೆ, ಆಸ್ಪತ್ರೆಗೆ ದಾಖಲಿಸಲು ರವಿ ಕುಮಾರ್ ಹಿಂದೇಟು ಹಾಕಿದ್ದಾರೆ. ಇದರಿಂದ ಕೋಪಗೊಂಡ ಸ್ಥಳೀಯರು ನೀನ್ಯಾವ ಸೀಮೆ MLC ಎಂದು ಎನ್.ರವಿಕುಮಾರ್ಗೆ ಕ್ಲಾಸ್ ತೆಗೆದುಕೊಂಡರು.