Home Uncategorized ಬೈಯ್ಯಪ್ಪನಹಳ್ಳಿ- ಕೆ.ಆರ್. ಪುರ ಮೆಟ್ರೋ ಸಂಚಾರಕ್ಕೆ ಇಂದಿನಿಂದ ಮುಕ್ತ

ಬೈಯ್ಯಪ್ಪನಹಳ್ಳಿ- ಕೆ.ಆರ್. ಪುರ ಮೆಟ್ರೋ ಸಂಚಾರಕ್ಕೆ ಇಂದಿನಿಂದ ಮುಕ್ತ

21
0

ಬೆಂಗಳೂರು;- ಇಂದಿನಿಂದ ಬೈಯ್ಯಪ್ಪನಹಳ್ಳಿ- ಕೆ.ಆರ್. ಪುರ ಮೆಟ್ರೋ ಸಂಚಾರಕ್ಕೆ ಮುಕ್ತವಾಗಲಿದೆ. ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ಬಿಎಂಆರ್‌ಸಿಎಲ್ ಗೆ ಪತ್ರ ಬರೆದು ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಗಳೂರಿನ ಸಂಸದರಾದ ಡಿವಿ ಸದಾನಂದ ಗೌಡ, ಪಿಸಿ ಮೋಹನ್, ತೇಜಸ್ವಿ ಸೂರ್ಯ ಸ್ವಾಗತ ಮಾಡಿದ್ದಾರೆ. ಮಾಧ್ಯಮ ಪ್ರಕಟಣೆ ಹೊರಡಿಸಿ ಬೆಂಗಳೂರು ಜನತೆ ಪರವಾಗಿ ಪ್ರಧಾನಿಯವರಿಗೆ ಧನ್ಯವಾದ ಅರ್ಪಣೆ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ಗ್ರೀನ್‌ಸಿಗ್ನಲ್‌ ಸಿಕ್ಕರೂ BMRCL ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯ ಆಗಿರಲಿಲ್ಲ. ಆದರೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮೆಟ್ರೊ ಸಂಚಾರದ ಗೊಂದಲಕ್ಕೆ ತೆರೆ ಎಳೆದಿದ್ದು, ಇಂದಿನಿಂದ ಎರಡೂ ಮಾರ್ಗದಲ್ಲಿ ಮೆಟ್ರೊ ಸಂಚರಿಸೋದಾಗಿ ಮಾಹಿತಿ ನೀಡಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್‌ ಮಾಹಿತಿ ಬೆನ್ನಲ್ಲೇ BMRCL ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅ.09 ರಿಂದ ಎರಡೂ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸೋದಾಗಿ ಸ್ಪಷ್ಟಪಡಿಸಿದೆ.

The post ಬೈಯ್ಯಪ್ಪನಹಳ್ಳಿ- ಕೆ.ಆರ್. ಪುರ ಮೆಟ್ರೋ ಸಂಚಾರಕ್ಕೆ ಇಂದಿನಿಂದ ಮುಕ್ತ appeared first on Ain Live News.

LEAVE A REPLY

Please enter your comment!
Please enter your name here