ಬ್ರಹ್ಮಾವರ, ಜ.19: ಬಸ್ ನಲ್ಲಿ ಕಳುಹಿಸಿದ್ದ ಅಂಚೆ ಕಚೇರಿಗೆ ಸಂಬಂಧಿಸಿದ ಸಾವಿರಾರು ರೂ. ಮೌಲ್ಯದ ಅಂಚೆ ಕಾಗದ ಪತ್ರಗಳು ಕಳವಾಗಿರುವ ಘಟನೆ ಕೊಕ್ಕರ್ಣೆ ಜ.18ರಂದು ಬೆಳಗ್ಗೆ ನಡೆದಿದೆ.
ಕೊಕ್ಕರ್ಣೆ ಅಂಚೆ ಕಚೇರಿಯ ಸಿಬ್ಬಂದಿ ಹರಿಪ್ರಸಾದ್ ಕೊಕ್ಕರ್ಣೆ ಬಸ್ ನಿಲ್ದಾಣದಿಂದ ದುರ್ಗಾಪ್ರಸಾದ್ ಬಸ್ ನಲ್ಲಿ ನಾಲ್ಕೂರು ಮತ್ತು ನಂಚಾರು ಅಂಚೆ ಕಚೇರಿಗೆ ಸಂಬಂಧಪಟ್ಟ ಅಂಚೆಯ ಬ್ಯಾಗನ್ನು ಕಳುಹಿಸಿದ್ದು, ಇದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಬ್ಯಾಗ್ ನಲ್ಲಿ ನಾಲ್ಕೂರು ಅಂಚೆ ಕಛೇರಿಗೆ ಸಂಬಂಧಿಸಿದ 20,000 ರೂ. ನಗದು ಅಂಚೆ ಕಾಗದ ಪತ್ರಗಳು ಹಾಗೂ ನಂಚಾರು ಅಂಚೆ ಕಚೇರಿಗೆ ಸಂಬಂಧಿಸಿದ ಅಂಚೆ ಕಾಗದ ಪತ್ರಗಳಿದ್ದವು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.