Home Uncategorized ಬ್ರಿಟನ್: ಉಪಚುನಾವಣೆಯಲ್ಲಿ ಎಡಪಂಥೀಯ ನಾಯಕ ಗ್ಯಾಲೊವೇಗೆ ಗೆಲುವು

ಬ್ರಿಟನ್: ಉಪಚುನಾವಣೆಯಲ್ಲಿ ಎಡಪಂಥೀಯ ನಾಯಕ ಗ್ಯಾಲೊವೇಗೆ ಗೆಲುವು

10
0

ರಿಚ್ಡೇಲ್ (ಬ್ರಿಟನ್): ಬ್ರಿಟನ್ ಸಂಸತ್ ಗೆ ನಡೆದ ಉಪಚುನಾವಣೆಯಲ್ಲಿ ಬ್ರಿಟನ್ನ ವಿವಾದಾತ್ಮಕ ಎಡಪಂಥೀಯ ನಾಯಕ ಜಾರ್ಜ್ ಗ್ಯಾಲೊವೇ ಅವರು ಶುಕ್ರವಾರ ವಿಜೇತರಾಗಿದ್ದಾರೆ. ಗಾಝಾದ ಮೇಲೆ ಇಸ್ರೇಲ್ ದಾಳಿಯನ್ನು ಪ್ರಧಾನ ವಿಷಯವಾಗಿಸಿಕೊಂಡು ನಡೆದ ಚುನಾವಣೆಯಲ್ಲಿ ಗ್ಯಾಲೊವೇ ಜಯಗಳಿಸಿರುವುದು, ಇಸ್ರೇಲ್ ಬಗ್ಗೆ ಮೃದುಧೋರಣೆ ತಾಳಿರುವ ರಿಶಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಸರಕಾರಕ್ಕೆ ದೊಡ್ಡ ಮುಖಭಂಗವಾಗಿದೆ.

69 ವರ್ಷ ವಯಸ್ಸಿನ ಗ್ಯಾಲೊವೇ ಅವರು 1987ರಲ್ಲಿ ಮೊದಲ ಬಾರಿಗೆ ಬ್ರಿಟಿಶ್ ಸಂಸತ್ ನ ಕೆಳಮನೆಗೆ (ಹೌಸ್ ಆಫ್ ಕಾಮನ್ಸ್) ಆಯ್ಕೆಯಾಗಿದ್ದರು. ಉತ್ತರ ಇಂಗ್ಲೆಂಡ್ನ ರಾಚ್ಡೇಲ್ ಕ್ಷೇತ್ರದಿಂ ಅವರು ಪಕ್ಷೇತರ ಅಭ್ಯರ್ಥಿ ಡೇವಿಡ್ ಟ್ಯುಲ್ಲಿ ವಿರುದ್ಧ ಸುಮಾರು 6 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಲೇಬರ್ ಪಕ್ಷದ ಸಂಸದ ಟೋನಿ ಲಾಯ್ಡ್ ಅವರ ಸಾವಿನ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆದಿದೆ.

ಪ್ರತಿಪಕ್ಷ ಲೇಬರ್ ಪಾರ್ಟಿ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಂಡಿದ್ದುದು ಗ್ಯಾಲೋವೇ ಅವರ ವಿಜಯವನ್ನು ಸುಗಮಗೊಳಿಸಿತು. ಅಕ್ಟೋಬರ್ 7ರಂದು ಹಮಾಸ್ ಹೋರಾಟಗಾರರು ಇಸ್ರೇಲ್ ನೆಲದ ದಾಳಿ ನಡೆಸಲು ಇಸ್ರೇಲ್ ಸರಕಾರವೇ ಅವಕಾಶ ನೀಡಿತ್ತೆಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ತನ್ನ ಅಭ್ಯರ್ಥಿ ಅಝರ್ ಅಲಿಯನ್ನು ಲೇಬರ್ ಪಕ್ಷವು ಚುನಾವಣಾ ಕಣದಿಂದ ಹಿಂತೆಗೆದುಕೊಂಡಿತ್ತು.

ಶೇ.30ರಷ್ಟು ಮುಸ್ಲಿಂ ಮತದಾರರನ್ನು ಹೊಂದಿರುವ ಗಾಲೊವೇ ಕ್ಷೇತ್ರದಲ್ಲಿ ರೊಚ್ಡೇಲ್ ಅವರು ಗಾಝಾ ಸಂಘರ್ಷವನ್ನು ತನ್ನ ಚುನಾವಣಾ ಪ್ರಚಾರದ ಕೇಂದ್ರಬಿಂದುವಾಗಿರಿಸಿದ್ದರು.

ಸ್ಕಾಟ್ಲ್ಯಾಂಡ್ ಮೂಲದ ಗ್ಯಾಲೊಏ ಅವರು ತನ್ನ ಏಳುಬೀಳಿನ ರಾಜಕೀಯ ಬದುಕಿನಲ್ಲಿ ಲೇಬರ್ ಪಾರ್ಟಿ ಸೇರಿದಂತೆ ಹಲವು ಪಕ್ಷಗಳನ್ನು ಪ್ರತಿನಿಧಿಸಿದ್ದರು.

1990ರಲ್ಲಿ ಗ್ಯಾಲೋವೇ ಅವರು ಆಗಿನ ಇರಾಕ್ ನಾಯಕ ಸದ್ದಾಂ ಹುಸೇನ್ ಅವರು ಭೇಟಿಯಾಗುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ಇರಾಕ್ ಯುದ್ಧದ ಕುರಿತ ನಿಲುವವಿಗಾಗಿ ಅವರನ್ನು ಲೇಬರ್ ಪಕ್ಷವು ಪಕ್ಷದಿಂದ ಉಚ್ಛಾಟಿಸಿದ್ದರು

LEAVE A REPLY

Please enter your comment!
Please enter your name here