Home Uncategorized ಬ್ರಿಟಿಷರಿಗೆ ಭಾರತ ಉಚ್ಚಾರಣೆ ಕಷ್ಟ ಆಗುತ್ತಿತ್ತು, ಹೀಗಾಗಿ ಇಂಡಿಯಾ ಎಂದರು: ಆರಗ ಜ್ಞಾನೇಂದ್ರ

ಬ್ರಿಟಿಷರಿಗೆ ಭಾರತ ಉಚ್ಚಾರಣೆ ಕಷ್ಟ ಆಗುತ್ತಿತ್ತು, ಹೀಗಾಗಿ ಇಂಡಿಯಾ ಎಂದರು: ಆರಗ ಜ್ಞಾನೇಂದ್ರ

49
0

ಬ್ರಿಟಿಷರಿಗೆ ಭಾರತ ಉಚ್ಚಾರಣೆ ಕಷ್ಟ ಆಗುತ್ತಿತ್ತು. ಹೀಗಾಗಿ ಭಾರತವನ್ನು ಇಂಡಿಯಾ ಎಂದು ಕರೆದರು. ಅದಕ್ಕೆ ಮಹತ್ವ ಇಲ್ಲ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಅವರು ಬುಧವಾರ ಹೇಳಿದ್ದಾರೆ. ಶಿವಮೊಗ್ಗ: ಬ್ರಿಟಿಷರಿಗೆ ಭಾರತ ಉಚ್ಚಾರಣೆ ಕಷ್ಟ ಆಗುತ್ತಿತ್ತು. ಹೀಗಾಗಿ ಭಾರತವನ್ನು ಇಂಡಿಯಾ ಎಂದು ಕರೆದರು. ಅದಕ್ಕೆ ಮಹತ್ವ ಇಲ್ಲ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಅವರು ಬುಧವಾರ ಹೇಳಿದ್ದಾರೆ.

ಇಂಡಿಯಾ, ಭಾರತ ಹೆಸರಿನಲ್ಲಿ ವಿವಾದ, ಚರ್ಚೆ ಶುರು ಆದ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಂಡಿಯಾ ಎನ್ನುವ ಹೆಸರಿಗೆ ಯಾವ ಹಿನ್ನಲೆಯೂ ಇಲ್ಲ. ಇಂಡಸ್ ವ್ಯಾಲ್ಯೂ ಇರುವ ಕಾರಣಕ್ಕೆ ಇಂಡಿಯಾ ಎಂಬ ಹೆಸರು ಬಂದಿದೆ. ಭಾರತ ಎಂದು ಉಚ್ಚಾರ ಮಾಡಲು ಬರದೇ ಇರುವ ಬ್ರಿಟೀಷರು ಕರೆದಿರುವ ಹೆಸರು ಅದು. ಅದಕ್ಕೆ ಮಹತ್ವ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಿಸಬೇಕಾದರೆ ಏನು ಮಾಡಬೇಕು, ಕಾನೂನು ಏನು ಹೇಳುತ್ತದೆ, ತಜ್ಞರು ಏನಂತಾರೆ?

ಬ್ರಿಟೀಷರು ಹಾಗೂ ಮೊಘಲರ ಕಾಲದಲ್ಲಿ ಪರಿವರ್ತನೆ ಆಗಿತ್ತು. ಅದನ್ನು ಸರಿಪಡಿಸುವುದರ ಕುರಿತು ಇಂದು ಚರ್ಚೆಯಾಗುತ್ತಿದೆ. ಈಗಾಗಲೇ ಹಲವು ಊರಿನ ಹೆಸರು ಬದಲಾವಣೆ ಆಗಿದೆ. ಮದ್ರಾಸ್ ಈಗ ಚನ್ನೈ, ಬೆಂಗಳೂರ್ ಹೋಗಿ ಬೆಂಗಳೂರು, ಕೂರ್ಗ್ ಹೋಗಿ ಕೊಡಗು ಆಗಿದೆ ಎಂದು ತಿಳಿಸಿದರು.

ನಾವು ಭಾರತ್ ಮಾತಾ ಕಿ ಜೈ ಎನ್ನುತ್ತೇವೆ ಹೊರತು, ಇಂಡಿಯಾ ಮಾತಾ ಕಿ ಜೈ ಎನ್ನುವುದಿಲ್ಲ. ಹಾಗಾಗಿ ಸರ್ಕಾರ ಹೆಸರು ಬದಲಾವಣೆ ಮಾಡುವುದು ಖಂಡಿತ ಒಳ್ಳೆಯದು. ಈ ದೇಶ ಪರದೇಶಿ ಅಲ್ಲ, ಧರ್ಮಛತ್ರ ಅಲ್ಲ. ನಮ್ಮ ಪರಂಪರೆಯಲ್ಲಿ ಬಂದಿರುವ ಹೆಸರು. ಭಾರತ ಎಂಬ ಹೆಸರನ್ನು ಇಟ್ಟರೆ ದೇಶದ ವಿಷಯದಲ್ಲಿ ಭಾವನೆಗಳು ಬೆಳೆಯುತ್ತವೆ ಎಂದರು.

LEAVE A REPLY

Please enter your comment!
Please enter your name here