Home ಕರ್ನಾಟಕ ಭಾರತದಲ್ಲಿ ವೇತನದಲ್ಲಿ ಬದಲಾವಣೆ ಇಲ್ಲ, ಆದಾಯ ಅಸಮಾನತೆ ಏರಿಕೆ: ವರದಿ

ಭಾರತದಲ್ಲಿ ವೇತನದಲ್ಲಿ ಬದಲಾವಣೆ ಇಲ್ಲ, ಆದಾಯ ಅಸಮಾನತೆ ಏರಿಕೆ: ವರದಿ

65
0

ಹೊಸದಿಲ್ಲಿ: ಬಿಜೆಪಿ ತನ್ನ 2019 ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಕನಿಷ್ಠ ವೇತನದಲ್ಲಿ ಶೇ42ರಷ್ಟು ಏರಿಕೆಯಾಗಿದೆ ಎಂದು ಹೇಳಿತ್ತು. ಆದರೆ ಕರ್ನಾಟಕ ಮೂಲದ ನಾಗರಿಕ ವೇದಿಕೆ- ಬಹುತ್ವ ಕರ್ನಾಟಕ ಹೊರತಂದಿರುವ ವರದಿಯ ಪ್ರಕಾರ 2011 ರಿಂದ 2022ರ ತನಕ ನಿಯಮಿತ ವೇತನದ ಕಾರ್ಮಿಕರು ಮತ್ತು ಸ್ವಉದ್ಯೋಗಿಗಳ ಸಾಪ್ತಾಹಿಕಸರಾಸರಿ ಆದಾಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

2011ರಲ್ಲಿ ಓರ್ವ ಪುರುಷ ನಿಯಮಿತ ವೇತನದ ಕೆಲಸಗಾರ ವಾರಕ್ಕೆ ಸುಮಾರು ರೂ. 3000 ಗಳಿಸುತ್ತಿದ್ದರೆ ಮಹಿಳಾ ಕಾರ್ಮಿಕರು ರೂ. 2000ಕ್ಕಿಂತ ಸ್ವಲ್ಪ ಹೆಚ್ಚು ವೇತನ ಪಡೆಯುತ್ತಿದ್ದರು. 2022ರಲ್ಲಿ ನಿಯಮಿತ ವೇತನದ ಕಾರ್ಮಿಕನ ವಾರದ ವೇತನ ರೂ. 2791 ಆಗಿದ್ದರೆ ಮಹಿಳಾ ಕಾರ್ಮಿಕರ ವೇತನ ರೂ 2135 ಆಗಿದೆ.

ನಗರ ಪ್ರದೇಶದ ಸ್ವಉದ್ಯೋಗಿ ಪುರುಷನ ಸಾಪ್ತಾಹಿಕ ಆದಾಯ 2017ರಲ್ಲಿ ರೂ 2800 ಆಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಈ ಮೊತ್ತ ರೂ 1500 ಆಗಿತ್ತು. ನಗರದ ಸ್ವಉದ್ಯೋಗಿ ಮಹಿಳೆಯರ ಸಾಪ್ತಾಹಿಕ ವೇತನ ರೂ. 1000ಕ್ಕಿಂತ ಸ್ವಲ್ಪ ಹೆಚ್ಚಾಗಿದ್ದರೆ ಗ್ರಾಮೀಣ ಮಹಿಳೆಯರು ವಾರಕ್ಕೆ ರೂ. 500 ಆದಾಯ ಗಳಿಸುತ್ತಿದ್ದಾರೆ.

ಬಹುತ್ವ ವರದಿಯ ಪ್ರಕಾರ ಎರಡು ನಿಯಮಿತ ವೇತನ ಕಾರ್ಮಿಕರ ಪೈಕಿ ಒಬ್ಬರು, 10 ಕ್ಯಾಶುವಲ್‌ ವೇತನ ಕಾರ್ಮಿಕರ ಪೈಕಿ ಒಂಬತ್ತು ಮಂದಿ ಹಾಗೂ ಐದು ಸ್ವಉದ್ಯೋಗಿಗಳ ಪೈಕಿ ಮೂವರು ರಾಷ್ಟ್ರೀಯ ಕನಿಷ್ಠ ವೇತನಕ್ಕಿಂತ ಕಡಿಮೆ ಗಳಿಸುತ್ತಾರೆ.

LEAVE A REPLY

Please enter your comment!
Please enter your name here