Home Uncategorized ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಆರ್​​ಬಿಐ ಮಾಜಿ ಗವರ್ನರ್ ರಘುರಾಮ್​​...

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಆರ್​​ಬಿಐ ಮಾಜಿ ಗವರ್ನರ್ ರಘುರಾಮ್​​ ರಾಜನ್​

34
0

ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಬುಧವಾರ ರಾಜಸ್ಥಾನ ತಲುಪಿದ್ದು ಈ ಯಾತ್ರೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಭಾಗಿಯಾಗಿದ್ದಾರೆ. ಇಂದು ಬೆಳಗ್ಗೆ ಸವಾಯ್ ಮಾದೋಪುರ್ ಭಡೋತಿಯಿಂದ ಯಾತ್ರೆ ಆರಂಭವಾಗಿದ್ದು, ರಾಜನ್ ಸ್ವಲ್ಪ ಹೊತ್ತು ರಾಹುಲ್ ಜತೆ ಹೆಜ್ಜೆ ಹಾಕಿದ್ದಾರೆ. ಮೋದಿ ಸರ್ಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ರಘುರಾಮ್ ರಾಜನ್, ಭಾರತದ ಭವಿಷ್ಯವು ಉದಾರವಾದಿ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಬಲಪಡಿಸುವುದರಲ್ಲಿ ಅಡಗಿದೆ. ಏಕೆಂದರೆ ಅದು ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಅವಶ್ಯಕವಾಗಿದೆ ಎಂದಿದ್ದರು. ನೋಟು ರದ್ದತಿ ನಿರ್ಧಾರ ಬಗ್ಗೆ ಟೀಕಿಸಿದ್ದ ರಾಜನ್, ಆರ್ಥಿಕ ಹಿಂಜರಿತಕ್ಕೆ ಮೋದಿ ಸರ್ಕಾರದ ರಾಜಕೀಯ ಮತ್ತು ಸಾಮಾಜಿಕ ನೀತಿಗಳೇ ಕಾರಣ ಎಂದಿದ್ದರು. ರಾಜನ್ ಟೀಕೆಗೆ ಬಿಜೆಪಿ ಕಟುವಾಗಿಯೇ ಪ್ರತಿಕ್ರಿಯಿಸಿತ್ತು. ಅಂದಹಾಗೆ, ಭಾರತ್ ಜೋಡೋ ಯಾತ್ರೆಯಲ್ಲಿ ರಾಜನ್ ಭಾಗಿಯಾಗಿರುವುದು ಕಾಂಗ್ರೆಸ್ ಗೆ ಸಂಬಂಧಿಸಿದಂತೆ ಅಚ್ಚರಿಯ ಸಂಗತಿ ಏನೂ ಅಲ್ಲ. ದೇಶದಲ್ಲಿನ ಏಕತೆಗಾಗಿ ಎಂಬ ಗುರಿಯೊಂದಿಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ಈ ಭಾರತ್ ಜೋಡೋ ಯಾತ್ರೆಯಲ್ಲಿ ಸಮಾನ ಮನಸ್ಕರು ರಾಹುಲ್ ಜತೆ ಹೆಜ್ಜೆ ಹಾಕಿದ್ದಾರೆ.

#BharatJodoYatra में @RahulGandhi जी के साथ कदम मिलाते RBI के पूर्व गवर्नर श्री रघुराम राजन…

नफ़रत के खिलाफ देश जोड़ने के लिए खड़े होने वालों की बढ़ती संख्या बताती है कि- हम होंगे कामयाब। pic.twitter.com/MFV6izCpcw

— Congress (@INCIndia) December 14, 2022

ಅದೇ ವೇಳೆ ಈ ಯಾತ್ರೆಯ ಮೂಲಕ ಕಾಂಗ್ರೆಸ್ ಜನರೊಂದಿಗೆ ಬೆರೆಯುತ್ತಿದ್ದರೂ, ಪಕ್ಷದೊಳಗಿನ ಬಿಕ್ಕಟ್ಟು ಆಗಾಗ್ಗೆ ತಲೆದೋರುತ್ತಿದೆ. ಈ ಯಾತ್ರೆ ಆರಂಭವಾದಾಗಲೇ ಗುಲಾಂ ನಬೀ ಆಜಾದ್ ಪಕ್ಷ ತೊರೆದು ಹೋದರು, ರಾಜಸ್ಥಾನದಲ್ಲಿ ಪಕ್ಷದ ಆಂತರಿಕ ಕಚ್ಚಾಟಗಳು ಬಹಿರಂಗವಾಗಿದ್ದವು. ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ 10ನೇ ದಿನಕ್ಕೆ ಕಾಲಿಟ್ಟಿದೆ. ಬಮನ್ ವಾಸ್ ವಿಧಾನಸಭಾ ಕ್ಷೇತ್ರದಲ್ಲಿರು ಭಡೋತಿ ಗ್ರಾಮದಿಂದ ಆರಂಭವಾದ ಈ ಯಾತ್ರೆ ಇಂದು ಸುಮಾರು 25 ಕಿಮೀ ಕ್ರಮಿಸಲಿದೆ.

अंधेरे से उजाले की दिशा में लेकर जाने का यज्ञ है #BharatJodoYatra

इस यात्रा के स्वागत के लिए सर्द लहर में इंतजार करते लोग अपनी उपस्थिति से इस यज्ञ में आहुति डाल रहे हैं।

देश बचाने का यज्ञ.. pic.twitter.com/21lE340xjZ

— Congress (@INCIndia) December 14, 2022

ಮೊದಲ ವಿರಾಮದ ನಂತರ ಯಾಕ್ರೆ ದೌಸಾ ಜಿಲ್ಲೆಗೆ ಪ್ರವೇಶಿಸಲಿದ್ದು, ಭಗ್ದಿ ಗ್ರಾಮದಲ್ಲಿ ನಿಲುಗಡೆಯಾಗಲಿದೆ. ಭಾರತ್ ಜೋಡೋ ಯಾತ್ರೆ ಪ್ರವೇಶಿಸುತ್ತಿರುವ ಐದನೇ ಜಿಲ್ಲೆಯಾಗಲಿದೆ ದೌಸಾ. ಈ ಯಾತ್ರೆ ಮುಂದುವರಿದಂತೆ ಗೋವಿಂದ್ ದೋತಸರ, ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತು ಇತರ ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಭಗ್ದಿ ಗ್ರಾಮದಲ್ಲಿ ರಾಹುಲ್ ನುಕ್ಕಡ್ ಸಭಾ ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: Ravi Kishan on Population: ನಾನು ನಾಲ್ಕು ಮಕ್ಕಳನ್ನು ಹೊಂದಿರುವುದಕ್ಕೆ ಕಾಂಗ್ರೆಸ್ ಕಾರಣ: ಬಿಜೆಪಿ ಸಂಸದ ರವಿ ಕಿಶನ್ ನೀಡಿದ ವಿವರಣೆ, ಕಾರಣ ಇಲ್ಲಿದೆ

ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಇಲ್ಲಿಯವರೆಗೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಹಾದು ಹೋಗಿದೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಈ ಯಾತ್ರೆ 17 ದಿನಗಳಲ್ಲಿ 500 ಕಿಮೀ ಕ್ರಮಿಸಲಿದ್ದು, ಡಿಸೆಂಬರ್ 21ಕ್ಕೆ ಹರ್ಯಾಣ ಪ್ರವೇಶಿಸಲಿದೆ.

LEAVE A REPLY

Please enter your comment!
Please enter your name here