Home Uncategorized ಭ್ರಷ್ಟಾಚಾರ ಸೂಚ್ಯಂಕ : ಭಾರತಕ್ಕೆ 93 ನೇ ಸ್ಥಾನ!

ಭ್ರಷ್ಟಾಚಾರ ಸೂಚ್ಯಂಕ : ಭಾರತಕ್ಕೆ 93 ನೇ ಸ್ಥಾನ!

25
0

ಮುಂಬೈ: ಜಾಗತಿಕ ನಾಗರಿಕ ಸಮಾಜವಾದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇಂದು ಬಿಡುಗಡೆ ಮಾಡಿದ 2023ನೇ ಸಾಲಿನ ವಾರ್ಷಿಕ ಸೂಚ್ಯಂಕವಾದ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (ಸಿಪಿಐ) ಪಟ್ಟಿಯಲ್ಲಿ ಭಾರತಕ್ಕೆ 93ನೇ ಸ್ಥಾನ ಸಿಕ್ಕಿದೆ ಎಂದು timesofindia.com ವರದಿ ಮಾಡಿದೆ.

180 ದೇಶಗಳ ಪೈಕಿ ಭಾರತ, ಮಾಲ್ಡೀವ್ಸ್, ಕಝಾಕಿಸ್ತಾನ್ ಮತ್ತು ಲೆಸೊಥೋ ಸೇರಿದಂತೆ ಐದು ದೇಶಗಳು 93 ನೇ ಸ್ಥಾನ ಹಂಚಿಕೊಂಡಿದೆ. 2022 ರಲ್ಲಿ, ಭಾರತವು 85 ನೇ ಸ್ಥಾನದಲ್ಲಿತ್ತು.

ಸಿಪಿಐಯು 180 ದೇಶಗಳು ಮತ್ತು ಪ್ರಾಂತ್ಯಗಳನ್ನು ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಕೆಯ ಮಟ್ಟಗಳ ಮೂಲಕ ಶೂನ್ಯ (ಅತ್ಯಂತ ಭ್ರಷ್ಟ) ದಿಂದ 100 (ಅತ್ಯಂತ ಸ್ವಚ್ಛ) ಅಂಕಗಳಲ್ಲಿ ಶ್ರೇಣೀಕರಿಸುತ್ತದೆ. CPI-2023 ರಲ್ಲಿ, ಡೆನ್ಮಾರ್ಕ್ (90 ಅಂಕಗಳೊಂದಿಗೆ) ಸತತ ಆರನೇ ವರ್ಷಕ್ಕೆ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ಫಿನ್‌ಲ್ಯಾಂಡ್ ಮತ್ತು ನ್ಯೂಝಿಲ್ಯಾಂಡ್ ಕ್ರಮವಾಗಿ 87 ಮತ್ತು 85 ಅಂಕಗಳೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿವೆ. ಸೊಮಾಲಿಯಾ ಕೊನೆಯ ಸ್ಥಾನದಲ್ಲಿದೆ. ವೆನೆಝುವೆಲಾ, ಸಿರಿಯಾ, ದಕ್ಷಿಣ ಸುಡಾನ್ ಮತ್ತು ಯೆಮೆನ್ ದೇಶಗಳು ಅತ್ಯಂತ ಕೆಳಮಟ್ಟದಲ್ಲಿದೆ. ಈ ದೇಶಗಳು ದೀರ್ಘಕಾಲದ ಸಶಸ್ತ್ರ ಸಂಘರ್ಷ ಬಿಕ್ಕಟ್ಟುಗಳಿಂದ ಪ್ರಭಾವಿತವಾಗಿದೆ.

ನೆರೆಯ ಪಾಕಿಸ್ತಾನವು 133 ನೇ ಸ್ಥಾನ ಗಳಿಸಿದೆ.

LEAVE A REPLY

Please enter your comment!
Please enter your name here