ಟಾಲಿವುಡ್ನಲ್ಲಿ ನಿರ್ದೇಶಕ ಅಜಯ್ ಭೂಪತಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. ‘ಆರ್ಎಕ್ಸ್ 100’ ಚಿತ್ರದಿಂದ ಅವರಿಗೆ ಅಂತಹ ಜನಪ್ರಿಯತೆ ಸಿಕ್ಕಿದೆ. ಈಗ ಅವರು ‘ಮಂಗಳವಾರಂ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಮಾತ್ರವಲ್ಲದೇ ದೇಶಾದ್ಯಂತ ಹವಾ ಮಾಡಲು ಹೊರಟಿದ್ದಾರೆ. ಸ್ವಾತಿ ಗುಣಪತಿ ಹಾಗೂ ಸುರೇಶ್ ವರ್ಮಾ ಅವರ ‘ಮುದ್ರಾ ಮೀಡಿಯಾ ವರ್ಕ್ಸ್’ ಮತ್ತು ಅಜಯ್ ಭೂಪತಿ ಒಡೆತನದ ‘ಎ ಕ್ರಿಯೇಟಿವ್ ವರ್ಕ್ಸ್’ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.
ಪಾಯಲ್ ರಜಪೂತ್ ಜೊತೆ ಶ್ರೀತೇಜ್, ಅಜಯ್ ಘೋಷ್, ಚೈತನ್ಯ ಕೃಷ್ಣ, ಲಕ್ಷ್ಮಣ್ ಸೇರಿದಂತೆ ಹಲವು ಕಲಾವಿದರು ‘ಮಂಗಳವಾರಂ’ ಸಿನಿಮಾದಲ್ಲಿ ನಟಿಸಿದ್ದಾರೆ. ದಶರಥಿ ಶಿವೇಂದ್ರ ಅವರ ಛಾಯಾಗ್ರಹಣ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಾಯಿಕುಮಾರ್ ಯಡವಲ್ಲಿ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೊಂದು ರಗಡ್ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದೆ. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
The post ‘ಮಂಗಳವಾರಂʼ ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಪಾಯಲ್ appeared first on Ain Live News.