ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಘಟನೆ ವರದಿಯಾಗಿದ್ದು ಸ್ಥಳೀಯ ಖಾಸಗಿ ವೆಬ್ಸೈಟ್ ಒಂದರ ವರದಿಗಾರನ ಮೇಲೆ ನಗರದ ಕಾವೂರಿನಲ್ಲಿ ಜುಲೈ 28ರ ರಾತ್ರಿ ಹಲ್ಲೆ ನಡೆದಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಘಟನೆ ವರದಿಯಾಗಿದ್ದು ಸ್ಥಳೀಯ ಖಾಸಗಿ ವೆಬ್ಸೈಟ್ ಒಂದರ ವರದಿಗಾರನ ಮೇಲೆ ನಗರದ ಕಾವೂರಿನಲ್ಲಿ ಜುಲೈ 28ರ ರಾತ್ರಿ ಹಲ್ಲೆ ನಡೆದಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.
ಕಾವೂರು ಬಳಿಯ ರೆಸ್ಟೋರೆಂಟ್ಗೆ ಸ್ಥಳೀಯ ಖಾಸಗಿ ವೆಬ್ಸೈಟ್ ವರದಿಗಾರ ಅಭಿಜಿತ್ ಎಂಬವರು ಸ್ನೇಹಿತೆ ಜೊತೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಕೆಲ ಯುವಕರು ಅವರನ್ನು ನೀನು ಮುಸ್ಲಿಂ ಅಲ್ಲವೇ ಎಂದು ಪ್ರಶ್ನಿಸಿ ಹಲ್ಲೆಗೆ ಮುಂದಾಗಿದ್ದರು. ಈ ಸಂಬಂಧ ಕಾವೂರು ಪೊಲೀಸ್ ಠಾಣೆಗೆ ಅಭಿಜಿತ್ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆಯೇ ನೈತಿಕ ಪೊಲೀಸ್ ಗಿರಿ: ಇಬ್ಬರ ಬಂಧನ
ಈ ಪ್ರಕರಣ ಸಂಬಂಧ ಕೋಟೇಕಾರು ನಿವಾಸಿ 37 ವರ್ಷದ ಚೇತನ್ ಹಾಗೂ ಯೆಯ್ಯಾಡಿ ನಿವಾಸಿ 43 ವರ್ಷದ ನವೀನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.