Home Uncategorized ಮಂಗಳೂರಿನಲ್ಲಿ  MDMA ಸಾಗಿಸುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ಸೇರಿ ಮೂವರ ಬಂಧನ

ಮಂಗಳೂರಿನಲ್ಲಿ  MDMA ಸಾಗಿಸುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ಸೇರಿ ಮೂವರ ಬಂಧನ

17
0

ಮಂಗಳೂರು ಸಿಸಿಬಿ ಪೊಲೀಸರು ಇಂದು ಎಂಡಿಎಂಎ (MDMA) ಸಾಗಿಸುತ್ತಿದ್ದ  ಕುಖ್ಯಾತ ಡ್ರಗ್ ಪೆಡ್ಲರ್ ಸೇರಿ ಮೂವರನ್ನು ಬಂಧಿಸಿದ್ದಾರೆ. ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಇಂದು ಎಂಡಿಎಂಎ (MDMA) ಸಾಗಿಸುತ್ತಿದ್ದ  ಕುಖ್ಯಾತ ಡ್ರಗ್ ಪೆಡ್ಲರ್ ಸೇರಿ ಮೂವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 9 ಲಕ್ಷ ರೂಪಾಯಿ ಮೌಲ್ಯದ 170 ಗ್ರಾಂ ಎಂಡಿಎಂಎ, ಕಾರು ಮತ್ತು 6 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮೂಡುಶೆಡ್ಡೆಯ ಇಮ್ರಾನ್, ಮಂಜನಾಡಿಯ ಅಬ್ದುಲ್ ಬಶೀರ್ ಅಬ್ಬಾಸ್,​ ಉಡುಪಿಯ ಬಡಗಬೆಟ್ಟು ನಿವಾಸಿ ಅಮ್ಜತ್ ಖಾನ್ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಂಗಳೂರು: ಡ್ರಗ್ ಪೆಡ್ಲರ್ ಬಂಧನ, 2.5 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶ

ಆರೋಪಿಗಳು ಎಂಡಿಎಂಎ ಅನ್ನು ಬೆಂಗಳೂರಿನಲ್ಲಿ ಖರೀದಿಸಿ ಮಂಗಳೂರಿಗೆ ತಂದಿದ್ದು ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಬಂಧಿತ ಇಮ್ರಾನ್ ವಿರುದ್ಧ ಈಗಾಗಲೇ 9 ಪ್ರಕರಣಗಳು ದಾಖಲಾಗಿವೆ. ವಾರದ ಹಿಂದಷ್ಟೇ ಜಾಮೀನಿನ ಮೇಲೆ ಜೈಲ್​ನಿಂದ ಹೊರಬಂದಿದ್ದನು. ಡ್ರಗ್ಸ್​ ಜಪ್ತಿ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

LEAVE A REPLY

Please enter your comment!
Please enter your name here