Home Uncategorized ಮಂಗಳೂರು: ಅಜ್ವಾ ಡ್ರೈ ಫ್ರೂಟ್ಸ್ ಆ್ಯಂಡ್ ಸ್ಪೈಸಸ್ ನ ನೂತನ ಮಳಿಗೆ ಶುಭಾರಂಭ

ಮಂಗಳೂರು: ಅಜ್ವಾ ಡ್ರೈ ಫ್ರೂಟ್ಸ್ ಆ್ಯಂಡ್ ಸ್ಪೈಸಸ್ ನ ನೂತನ ಮಳಿಗೆ ಶುಭಾರಂಭ

24
0

ಮಂಗಳೂರು, ಫೆ.29: ಅಜ್ವಾ ಡ್ರೈ ಫ್ರೂಟ್ಸ್ ಆ್ಯಂಡ್ ಸ್ಪೈಸಸ್ ನ ನೂತನ ಮಳಿಗೆ ಮಂಗಳೂರಿನ ಬಿಕರ್ನಕಟ್ಟೆಯ ಅಹ್ಸಾನುಲ್ ಮಸಾಜಿದ್ ಕಟ್ಟಡದಲ್ಲಿ ಯಹ್ಯಾ ತಂಙಳ್ ಮದನಿ ಅವರು ಉದ್ಘಾಟಿಸಿದರು.

ದುಆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಅಜ್ವಾ ಡ್ರೈ ಫ್ರೂಟ್ಸ್ ಆ್ಯಂಡ್ ಸ್ಪೈಸಸ್ ನ ಮಾಲಕ ಪಿ ಎಸ್ ಹುಸೈನ್ ಅವರು ಈ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಮಾತ್ರವಲ್ಲದೆ ನಗರದ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಈ ಮಳಿಗೆ ತೆರೆಯುವ ಮೂಲಕ ಜನರಿಗೆ ಇನ್ನಷ್ಟು ಸೇವೆ ನೀಡಲಿ ಎಂದವರು ಹಾರೈಸಿದರು.

ಸಂಸ್ಥೆಯ ಮಾಲಕ ಪಿ.ಎಸ್ ಹುಸೈನ್ ಮಾತನಾಡಿ, ಅಜ್ವಾ ಡ್ರೈ ಫ್ರೂಟ್ಸ್ ಆ್ಯಂಡ್ ಸ್ಪೈಸಸ್ ನಲ್ಲಿ ವಿವಿಧ ಗುಣಮಟ್ಟದ ಡ್ರೈ ಫ್ರೂಟ್ಸ್ ಗಳಿದ್ದು ವಿದೇಶಿ ಬ್ರಾಂಡ್ ಗಳು ಲಭ್ಯವಿದೆ. ಸಂಸ್ಥೆಯು ಜನರ ಮನೆ ಬಾಗಿಲಿಗೆ ಸೇವೆ ನೀಡಲಿದ್ದು ರಂಝಾನ್ ತಿಂಗಳ ವಿಶೇಷ ಕಿಟ್ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಕರ್ನಕಟ್ಟೆ ಅಹ್ಸನುಲ್ ಮಸಾಜಿದ್ ನ ಅಧ್ಯಕ್ಷ ಸಯ್ಯದ್ ಮಹಮ್ಮದ್ ಸಯೀದ್, ಮಹಾನಗರ ಪಾಲಿಕೆ ಮಾಜಿ ಇಂಜಿನಿಯರ್ ಡಿ. ಅಬ್ದುಲ್ ಖಾದರ್, ಅಹ್ಸನುಲ್ ಮಸಾಜಿದ್ ನ ಇಮಾಮರಾದ ಮೌಲಾನಾ ಒಸಾಮ ಹಸನ್, ಉಮರ್ ಫಾರೂಕ್ ಪುತ್ತಿಗೆ ಮತ್ತಿತರರು ಉಪಸ್ಥಿತರಿದ್ದರು.

 

 

 

 

 

LEAVE A REPLY

Please enter your comment!
Please enter your name here