ಮಂಗಳೂರು: ನಗರದ ಪಂಪ್‌ವೆಲ್‌ನ ಅಪಾರ್ಟ್‌ಮೆಂಟ್‌ವೊಂದರ ಹೊರಗೆ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ ಕಳವಾದ ಬಗ್ಗೆ ಕಂಕನಾಡಿ ನಗರ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ.
ತಾನು ತನ್ನ ಸ್ನೇಹಿತನ ಸ್ಕೂಟರ್‌ನ್ನು ಪ್ರತಿದಿನ ವಾಸ್ತವ್ಯವಿರುವ ಪಂಪ್‌ವೆಲ್‌ನ ಅಪಾರ್ಟ್‌ಮೆಂಟ್‌ನ ಹೊರಗೆ ಪಾರ್ಕ್ ಮಾಡುತ್ತಿದ್ದೆ. ಡಿ.18ರಂದು ಪಾರ್ಕ್ ಮಾಡಿ ಸಂಬಂಧಿಕರ ಮದುವೆ ಪ್ರಯುಕ್ತ ಕಾಸರಗೋಡಿಗೆ ಹೋಗಿದ್ದೆ. ಡಿ.22ರಂದು ರಾತ್ರಿ ವಾಪಸ್ ಬಂದ್ ನೋಡಿದಾಗ ಅಂದಾಜು 40,000 ರೂ. ಮೌಲ್ಯದ ಸ್ಕೂಟರ್ ಕಳವಾಗಿದೆ ಎಂದು ಮುಹಮ್ಮದ್ ಫಾಝೀಝ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.