ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಕಾಡಾನೆಯೊಂದು ದಾಳಿ ನಡೆಸಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರಂಜಿತಾ (21) ಮತ್ತು ರಮೇಶ್ ರೈ ನೈಲಾ (55) ಎಂದು ಗುರುತಿಸಲಾಗಿದೆ. ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಕಾಡಾನೆಯೊಂದು ದಾಳಿ ನಡೆಸಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ರಂಜಿತಾ (21) ಮತ್ತು ರಮೇಶ್ ರೈ ನೈಲಾ (55) ಎಂದು ಗುರುತಿಸಲಾಗಿದೆ.
#mangaluru #elephants #mananimalconflict Two persons – Ranjitha (21) & Ramesh Rai (55) were killed by an elephant at Renjiladi village in Kadaba tq, DK. Ranjitha was first attacked by elephant. Rai who rushed her rescue was also killed @XpressBengaluru @Cloudnirad @ramupatil_TNIE pic.twitter.com/vvYDsVucZJ
— vincent dsouza (@vinndz_TNIE) February 20, 2023
ರಂಜಿತಾ ಅವರು ತಾವು ಕೆಲಸ ಮಾಡುತ್ತಿರುವ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಪೇರಡ್ಕ ಹಾಲು ಸೊಸೈಟಿಗೆ ತೆರಳುತ್ತಿದ್ದಾಗ ಅವರ ಮನೆಯ ಸಮೀಪವೇ ಆನೆ ದಾಳಿ ನಡೆಸಿದೆ. ಆಕೆಯ ಕಿರುಚಾಟ ಕೇಳಿ ರಕ್ಷಿಸಲು ಹೋದ ನೈಲಾ ಅವರ ಮೇಲೂ ಆನೆ ದಾಳಿ ಮಾಡಿದೆ.
ಇದನ್ನೂ ಓದಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ವೀಕ್ಷಕನ ಮೇಲೆ ಆನೆ ದಾಳಿ, ಸಾವು
ಗಂಭೀರವಾಗಿ ಗಾಯಗೊಂಡಿದ್ದ ನೈಲಾ ಸ್ಥಳದಲ್ಲೇ ಮೃತಪಟ್ಟರೆ, ರಂಜಿತಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ತಿಂಗಳಿಂದ ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಂದ ದಾಳಿ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.