Home Uncategorized ಮಂಗಳೂರು : ಮಾಸ್ಟರ್ ಶೆಫ್ ಮುಹಮ್ಮದ್ ಆಶಿಕ್, ರಾಷ್ಟ್ರೀಯ ಪಲ್ಸರ್ ಮೇನಿಯಾ ಚಾಂಪಿಯನ್ ನೌಮಾನ್‌ಗೆ ಸನ್ಮಾನ

ಮಂಗಳೂರು : ಮಾಸ್ಟರ್ ಶೆಫ್ ಮುಹಮ್ಮದ್ ಆಶಿಕ್, ರಾಷ್ಟ್ರೀಯ ಪಲ್ಸರ್ ಮೇನಿಯಾ ಚಾಂಪಿಯನ್ ನೌಮಾನ್‌ಗೆ ಸನ್ಮಾನ

17
0

ಮಂಗಳೂರು‌ : ಮಾಸ್ಟರ್ ಶೆಫ್ ಚಾಂಪಿಯನ್ ಮುಹಮ್ಮದ್ ಆಶಿಕ್ ಮತ್ತು ರಾಷ್ಟ್ರೀಯ ಪಲ್ಸರ್ ಮೇನಿಯಾ 2.0 ಬೈಕ್ ಸ್ಟಂಟ್ ಮತ್ತು ಡ್ರೈವಿಂಗ್ ಸ್ಕಿಲ್ಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ ನೌಮಾನ್ ಪಜೀರ್ ಅವರನ್ನು ಬ್ಯಾರೀಸ್‌ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಎಸ್‌ಎಂ ರಶೀದ್ ಹಾಜಿ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಹಮ್ಮದ್ ಆಶಿಕ್ ಮತ್ತು ನೌಮಾನ್ ಪಜೀರ್ ತಮ್ಮ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡುವ ಮೂಲಕ ಬ್ಯಾರಿ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಅಧ್ಯಕ್ಷ ರಶೀದ್ ಹಾಜಿ ನುಡಿದರು.

ಸನ್ಮಾನ ಸ್ವೀಕರಿಸಿದ ಮುಹಮ್ಮದ್ ಆಶಿಕ್ ಚಿಕ್ಕಂದಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಶಿಕ್ಷಣ ಪಡೆಯವ ಕನಸು ಕಂಡಿದ್ದೆ. ಆದರೆ ತಮ್ಮ ಕುಟುಂಬ ಆರ್ಥಿಕವಾಗಿ ಹಿಂದುಳಿದಿರುವ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಕಠಿಣ ಪರಿಶ್ರಮದ ಮೂಲಕ ತಮಗೆ ಮಾಸ್ಟರ್ ಶೆಫ್ ಚಾಂಪಿಯನ್ ಎನಿಸಿಕೊಳ್ಳಲು ಸಾಧ್ಯವಾಯಿತು. ತಾಯಿಯ ಬೆಂಬಲ ತಮಗೆ ಯಶಸ್ಸನ್ನು ತಂದುಕೊಟ್ಟಿತು ಎಂದರು.

ಬೈಕ್ ಸ್ಟಂಟ್ ಮತ್ತು ಡ್ರೈವಿಂಗ್ ಸ್ಕಿಲ್ಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ‌ ನೌಮಾನ್ ಪಜೀರ್ ಮಾತನಾಡಿ, ತನ್ನನ್ನು ಗುರುತಿಸಿ, ಗೌರವಿಸಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಉಪಾಧ್ಯಕ್ಷ ಝಕರಿಯಾ ಜೋಕಟ್ಟೆ, ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಅಝಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಮ್ತಿಯಾಝ್ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.‌

LEAVE A REPLY

Please enter your comment!
Please enter your name here