Home Uncategorized ಮಂಡ್ಯ: ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆಂದು ಸಿದ್ದಪಡಿಸಿದ್ದ ಟನ್ ಗಟ್ಟಲೆ ಆಹಾರ ಮಣ್ಣುಪಾಲು!

ಮಂಡ್ಯ: ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆಂದು ಸಿದ್ದಪಡಿಸಿದ್ದ ಟನ್ ಗಟ್ಟಲೆ ಆಹಾರ ಮಣ್ಣುಪಾಲು!

64
0

ಮಂಡ್ಯದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗಾಗಿ ತಯಾರಿಸಿದ್ದ ಅಪಾರ ಪ್ರಮಾಣದ ಆಹಾರ ಪದಾರ್ಥವನ್ನು ಗುಂಡಿಗೆ ಎಸೆದಿರುವುದು ಪತ್ತೆಯಾಗಿದೆ.  ಮೈಸೂರು: ಮಂಡ್ಯದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗಾಗಿ ತಯಾರಿಸಿದ್ದ ಅಪಾರ ಪ್ರಮಾಣದ ಆಹಾರ ಪದಾರ್ಥವನ್ನು ಗುಂಡಿಗೆ ಎಸೆದಿರುವುದು ಪತ್ತೆಯಾಗಿದೆ. 

15 ಬೃಹತ್ ಸ್ಟೀಲ್ ಬಕೆಟ್‌ಗಳು, 250 ಕೆಜಿ ತರಕಾರಿ ಬಾತ್, ಏಳು ಬಕೆಟ್ ಮೊಸರನ್ನ, 50,000 ಸಿಹಿತಿಂಡಿಗಳನ್ನು ಗುಂಡಿಯಲ್ಲಿ ಎಸೆದು ಮಣ್ಣಿನಿಂದ ಮುಚ್ಚಲಾಗಿದೆ. ಮಂಡ್ಯದ ಬಾಲಕರ ಕಾಲೇಜು ಬಳಿಯ ತೆರೆದ ಮೈದಾನದಲ್ಲಿ ಸಂಘಟಕರು ಅಗೆಯುವ ಯಂತ್ರ ಬಳಸಿ ಗುಂಡಿ ತೋಡಿದ್ದಾರೆ.

ಪಕ್ಷದ ಜನಸಂಕಲ್ಪ ಯಾತ್ರೆಗೆ ಶುಕ್ರವಾರ ಬಿಜೆಪಿ ಮುಖಂಡರು ಮಂಡ್ಯ ಮತ್ತು ನೆರೆಯ ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚು ಜನರನ್ನು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಲ್ಲಿ ಸ್ಥಳಕ್ಕೆ ಕರೆತಂದರು. ಸಂಘಟಕರು 1.5 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಊಟ ಬಡಿಸಲು ಆರಂಭಿಸಿದ್ದರು. ಕೆಲವೇ ನಿಮಿಷಗಳಲ್ಲಿ, ಆಹಾರ ಕೌಂಟರ್‌ಗಳಲ್ಲಿ ಜನರ ಸರತಿ ಸಾಲುಗಳು ಇದ್ದವು.

ಆದರೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಿಂದ ಡೇರಿ ಉದ್ಘಾಟನೆ ಮುಗಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಶಾ ತೆರಳುತ್ತಿದ್ದಂತೆ ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡರು ಪಕ್ಷದ ಕಾರ್ಯಕರ್ತರಿಗೆ ಊಟ ಬಡಿಸುವುದನ್ನು ನಿಲ್ಲಿಸಿ ಜನರನ್ನು ಕುರ್ಚಿಗೆ ಮರಳುವಂತೆ ಸೂಚಿಸಿದರು.

ಕಾರ್ಯಕ್ರಮದ ನಂತರ, ಹೆಚ್ಚಿನ ಜನರು ತಮ್ಮ ಹಳ್ಳಿಗಳಿಗೆ ಹಿಂತಿರುಗಲು ತಮ್ಮ ಬಸ್‌ಗಳತ್ತ ನಡೆದರು.

LEAVE A REPLY

Please enter your comment!
Please enter your name here