Home Uncategorized ಮಂಡ್ಯ: ಬಾತ್‍ರೂಂನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಮೃತದೇಹ ಪತ್ತೆ

ಮಂಡ್ಯ: ಬಾತ್‍ರೂಂನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಮೃತದೇಹ ಪತ್ತೆ

28
0

ಮಂಡ್ಯ: ಪಾಂಡವಪುರ ಪಟ್ಟಣದ ತನ್ನ ಮನೆಯ ಬಾತ್‍ರೂಂನಲ್ಲಿ (ಸ್ನಾನದ ಕೋಣೆ) ನಗ್ನ ಸ್ಥಿತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಶವ ಪತ್ತೆಯಾಗಿದ್ದು, ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಮೃತರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಟ್ಟಣದ ನಿವಾಸಿ ದಿವಂಗತ ಶಿವಣ್ಣ ಅವರ ಪುತ್ರ ಟಿ.ಎಸ್.ಗಂಗಾಧರ್(42) ಮೃತ ವ್ಯಕ್ತಿ. ತಮಿಳುನಾಡು ಮೂಲದ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮೃತ ಗಂಗಾಧರ್ ಮೂಲತಃ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದವರಾಗಿದ್ದು, ಅದೇ ಗ್ರಾಮದ ನಿವಾಸಿ ಭವ್ಯ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗಳಿಗೆ ಒಂದು ಹೆಣ್ಣು ಮಗುವಿದೆ.

ಗಂಗಾಧರ್ ಹಾಗೂ ಪತ್ನಿ ಭವ್ಯ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಕೋರ್ಟ್ ಮೂಲಕ ರಾಜಿಸಂಧಾನ ಮಾಡಿಕೊಂಡು ಕಳೆದ ಆರು ತಿಂಗಳಿಂದ ಪಟ್ಟಣದ ಶಾಂತಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ತನ್ನ ಮಗ ಗಂಗಾಧರ್ ನನ್ನು ಪತ್ನಿ ಭವ್ಯ, ಆಕೆಯ ತಂದೆ ಬಸವೇಗೌಡ ಮತ್ತು ಕುಟುಂಬದವರು ಕೊಲೆ ಮಾಡಿರುವ ಸಂಶಯವಿದ್ದು, ಅವರನ್ನು ಬಂಧಿಸಿ ವಿಚಾರಣೆ ಮಾಡಬೇಕು ಎಂದು ಗಂಗಾಧರ್ ತಾಯಿ ಸರಸ್ವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರತಿಭಟನೆ: ಗಂಗಾಧರ್ ಪತ್ನಿ ಭವ್ಯ ಮತ್ತು ಆಕೆಯ ಕುಟುಂಬದವರನ್ನು ಬಂಧಿಸುವವರೆಗೂ ಶವ ಪರೀಕ್ಷೆಗೆ ಅವಕಾಶ ನೀಡುವುದಿಲ್ಲವೆಂದು ಗಂಗಾಧರ್ ತಾಯಿ ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಶವಪರೀಕ್ಷೆ ವರದಿ ಬಂದ ನಂತರ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here