ಮುಲ್ಕಿ: ಸುರತ್ಕಲ್ ರೇಂಜ್ ಜಂಇಯ್ಯತುಲ್ ಮುಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಇದರ ಜಂಟಿ ಆಶ್ರಯದಲ್ಲಿ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ “ಮುಸಾಬಖ 2ಕೆ23” ಹಝ್ರತ್ ಸೈಯ್ಯದ್ ಮೌಲಾನ ವಲಿಯುಲ್ಲಾ ಅವರ ದರ್ಗಾ ಶರೀಫ್ ವಠಾರದಲ್ಲಿ ರವಿವಾರ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಬೊಳ್ಳುರು ಉಸ್ತಾದರಂತಹಾ ಮಹಾನರು ಮುಸ್ಲಿಂ ಸಮುದಾಯದ ನೇತೃತ್ವ ವಹಿಸಿರುವುದು ಸಮುದಾಯದ ಭಾಗ್ಯ. ಇಂತಹಾ ಕಾರ್ಯಕ್ರಮಗಳ ಮೂಲಕ ಮಕ್ಕಳ ಎಳವೆಯಲ್ಲೇ ಶಿಸ್ತು ಬದ್ಧ ಜೀವನ, ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶ್ಲಾಘನೀಯ. ಜಂಇಯ್ಯತುಲ್ ಮುಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ನಿಂದ ನಡೆಯುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ಕೇವಲ ಸಮು ದಾಯಕ್ಕೆ ಮಾತ್ರ ಸೀಮಿತವಾಗಿರದೆ ಸಮಾಜದ ಉದ್ದಕಲಕ್ಕೂ ವ್ಯಾಪಿಸುವಂತಾಗಬೇಕು ಎಂದು ಶುಭಹಾರೈಸಿದರು.
ಸಮಾರಂಭವನ್ನು ಎಸ್.ವೈ.ಎಸ್. ದ.ಕ ಜಿಲ್ಲಾಧ್ಯಕ್ಷರಾದ ಆಝೀಝ್ ದಾರಿಮಿ ಚೊಕ್ಕಬೆಟ್ಟು ಉದ್ಘಾಟಿಸಿದರು. “ಮುಸಾಬಖ 2ಕೆ23” ಸ್ವಾಗತ ಸಮಿತಿ ಅಧ್ಯಕ್ಷ ಶಿಹಾಬುದ್ದಿನ್ ಚೊಕ್ಕಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಶೈಖುನಾ ಬೊಳ್ಳೂರು ಉಸ್ತಾದ್ ದುಆ ಆಶೀರ್ವಚನ ಗೈದರು. ಅಬ್ದುಲ್ಲಾ ಝೈನಿ, ಹನೀಫ್ ಮುಸ್ಲಿಯಾರ್ ಮುಫತ್ತಿಶ್, ಸಲೀಂ ಫೈಝಿ ಅಲ್ ಇರ್ಫಾನಿ, ಅಬ್ದುಲ್ಲಾ ಮದನಿ, ರಶೀದ್ ದಾರಿಮಿ ಅಲ್ ಹೈತಮಿ, ಅಬ್ದುಲ್ಲ ದಾರಿಮಿ, ಶಾಹುಲ್ ಹಮೀದ್ ಕದಿಕೆ ಉಪಸ್ಥಿತರಿದ್ದು ಮಾತನಾಡಿದರು.
ಇದೇ ಸಂದರ್ಭ ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ರೇಂಜ್ ನಲ್ಲಿ 10ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸುತ್ತಿರುವ ಬೊಳ್ಳೂರು ಉಸ್ತಾದ್, ಅಝೀಝ್ ದಾರಿಮಿ, ಅಬ್ದುಲ್ಲಾ ದಾರಿಮಿ ಮುಲ್ಕಿ, ಅಬ್ದುರ್ರಶೀದ್ ಮುಸ್ಲಿಯಾರ್ ಸಂತೆಕಟ್ಟೆ, ಅಬ್ದುನ್ನಾಸಿರ್ ಮುಸ್ಲಿಯಾರ್ ಬೊಳ್ಳೂರು, ಮುಹಮ್ಮದ್ ಸಖಾಫಿ ಕೊಳ್ನಾಡ್, ಸಿದ್ದೀಕ್ ಮುಸ್ಲಿಯಾರ್ ಕೊಳ್ನಾಡು ಅವರನ್ನು ಸನ್ಮಾನಿಸಿಸಲಾಯಿತು.
ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಕುಡುಂಬೂರು, ಕಾರ್ಯದರ್ಶಿ ಎಚ್.ಕೆ. ಮುಹಮ್ಮದ್ ಹಾಜಿ, ಹಝ್ರತ್ ಸೈಯ್ಯದ್ ಮೌಲಾನ ವಲಿಯುಲ್ಲಾ ದರ್ಗಾ ಶರೀಫ್ ಇದರ ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಅಬ್ದುಲ್ಲಾ ಝೈನಿ ಉಸ್ತಾದ್ ಅವರನ್ನು ಜಂಇಯ್ಯತುಲ್ ಮುಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
“ಮುಸಾಬಖ 2ಕೆ23″ಯಲ್ಲಿ ಸುರತ್ಕಲ್ ರೇಂಜ್ ಗೆ ಒಳಪಟ್ಟ 17ಮದರಸ ವಿದ್ಯಾರ್ಥಿಗಳ ಸ್ಪರ್ಧಾ ಕೂಟಗಳು ನಡೆದವು. ಪ್ರಥಮ ಸ್ಥಾನವನ್ನು ಅಲ್ ಮದ್ರಸತುಲ್ ಅಝೀಝಿಯಾ ಚೊಕ್ಕಬೆಟ್ಟು ಹಾಗೂ ದ್ವಿತೀಯ ಸ್ಥಾನವನ್ನು ಮದರಸತುಲ್ ಖುಲ್ರಿಯಾ ಇಡ್ಯಾ ಪಡೆದುಕೊಂಡಿತು.
ಸಮಾರಂಭದಲ್ಲಿ ಹಝ್ರತ್ ಸೈಯ್ಯದ್ ಮೌಲಾನ ವಲಿಯುಲ್ಲಾ ದರ್ಗಾ ಶರೀಫ್ ಇದರ ಜಮಾಲುದ್ದೀನ್ ಕದಿಕೆ, ಮಾಜಿ ಅಧ್ಯಕ್ಷ ಬಷೀರ್ ಕಲ್ಲಾಪು, ಅಬೂಬಕರ್ ಹಾಜಿ ಅಜಿಲಮೊಗರು, ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಉಪಾಧ್ಯಕ್ಷ ಇಮ್ತಿಯಾಜ್ ಇಡ್ಯಾ, ಕೊಲ್ನಾಡು ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಎಂ. ಇಸ್ಮಾಯಿಲ್ ಕೊಲ್ನಾಡು, ಹಳೆಯಂಗಡಿ ಗ್ರಾಮ ಪಂ. ಸದಸ್ಯರಾದ ಎಂ.ಎ. ಅಬ್ದುಲ್ ಖಾದರ್, ಅಬ್ದುಲ್ ಅಝೀಝ್ ಐ.ಎ.ಕೆ., ಅಬ್ದುಲ್ ಖಾದರ್ ಕಜಕತೋಟ, ಬಿ.ಇ. ಮುಹಮ್ಮದ್ ಎಂಸಿಎಫ್, ಸರ್ಫರಾಝ್ ಕದಿಕೆ, ಅಬ್ದುಲ್ ಖಾದರ್ ಕದಿಕೆ, ಅಬ್ದುಲ್ ರಹ್ಮಾನ್ ಕದಿಕೆ, ರಿಯಾಝ್ ಕಲ್ಲಾಪು, ಇಸ್ಮಾಯಿಲ್ ಕದಿಕೆ, ಆಶೀರ್ ಕದಿಕೆ , ಶೇಖಬ್ಬ ಕದಿಕೆ, ಹನೀಫ್ ಇಡ್ಯಾ, ಇಲ್ಯಾಸ್ ಕಜಕತೋಟ, ಉಸ್ಮಾನ್ ಇಡ್ಯಾ, ಬಶೀರ್ ಪರಂಗಿಬೋಟ್ಟು, ಖಾದರ್ ಸಾಗ್, ಇಬ್ರಾಹಿಂ ಬೊಳ್ಳೂರು, , ಮುಹಮ್ಮದ್ ಫ್ರೂಟ್, ಯಾಸೀರ್ ಕೊಲ್ನಾಡ್, ಅಝೀಝ್ ಕಾಫಿಕಾಡ್, ಸುಲೈಮಾನ್ ಕಾಫಿಕಾಡ್, ಇಬ್ರಾಹಿಂ ಮೂಲ್ಕಿ, ಬಷೀರ್ ಚೊಕ್ಕಬೆಟ್ಟು, ಕಮಲ್ ಚೊಕ್ಕಬೆಟ್ಟು, ಅಬ್ದುರ್ರಹ್ಮಾನ್ ಬೊಳ್ಳೂರು, ಯೂಸುಫ್ ಇಂದಿರಾನಗರ, ಇರ್ಷಾದ್ ಕೆರೆಕಾಡ್, ನಝೀರ್ ಇಂದಿರಾನಗರ, ಅಬ್ದುಲ್ ರಝಕ್ ಮದನಿ, ಅಬೂಬಕ್ಕರ್ ಮದನಿ, ಇಮ್ರಾನ್ ದಾರಿಮಿ, ಮುಝಮ್ಮಿಲ್, ಹನೀಫ್ ಫೈಝಿ, ಶಾಫಿ ಫೈಝಿ, ನಾಸಿರ್ ಮುಸ್ಲಿಯಾರ್, ರಿಯಾಝ್ ಫೈಝಿ ಮೊದಲಾದವರು ಉಪಸ್ಥಿತರಿದ್ದರು. ಇಸ್ಮಾಯಿಲ್ ದಾರಿಮಿ ಚೊಕ್ಕಬೆಟ್ಟು ಕಿರಾಅತ್ ಪಠಿಸಿದರು. ತ್ವಯ್ಯಿಬ್ ಫೈಝಿ ಸ್ವಾಗತಿಸಿದರು. ಇಮ್ರಾನ್ ಮಖ್ದೂಮಿ ವಂದಿಸಿದರು.