ಮಣಿಪಾಲ, ಜ.2: ಆ್ಯಂಬುಲೆನ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿರಸ್ತೆ ಬದಿಯ ಜನೌಷಧಿ ಕೇಂದ್ರಕ್ಕೆ ನುಗ್ಗಿದ ಘಟನೆ ಮಣಿಪಾಲ ಲಕ್ಷ್ಮೀಂದ್ರ ನಗರದ ಬಳಿ ಇಂದು ಮುಂಜಾನೆ ನಡೆದಿದೆ.
ಮಣಿಪಾಲದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಅಂಬುಲೆನ್ಸ್, ಲಕ್ಷ್ಮೀಂದ್ರ ನಗರದ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿತ್ತೆನ್ನಲಾಗಿದೆ. ಇದರ ಪರಿಣಾಮ ಅಂಬುಲೆನ್ಸ್, ರಸ್ತೆಯ ಪಕ್ಕದಲ್ಲಿದ್ದ ಜನೌಷಧಿ ಕೇಂದ್ರದೊಳಗೆ ನುಗ್ಗಿದೆ. ಇದರಿಂದ ಸಮೀಪದ ಅಂಗಡಿಗಳಿಗೂ ಹಾನಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.