ಉಡುಪಿ: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ರಾಷ್ಟ್ರೀಯ ಕೃಷಿ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ಪ್ರಾಯೋಜಕತ್ವ ದಲ್ಲಿ ಮಾರ್ಚ್ ತಿಂಗಳಲ್ಲಿ 10 ದಿನಗಳ ಕಾಲ ನಡೆಯುವ ವಿವಿಧ ಹೋಮ್‌ಮೇಡ್ ಚಾಕಲೇಟ್ ಮತ್ತು ಬೇಕರಿ ತಿನಿಸುಗಳ ತಯಾರಿಕೆಯ ಉತ್ಪನ್ನಗಳ ಉಚಿತ ತರಬೇತಿಯನ್ನು ಮಣಿಪಾಲದ ಬಿವಿಟಿಯಲ್ಲಿ ಆಯೋಜಿಸಿದೆ.
ಸ್ವ-ಸಹಾಯ ಸಂಘದ ಸದಸ್ಯರಾಗಿದ್ದು, ಉದ್ಯೋಗ ಮಾಡಲು ಆಸಕ್ತಿ ಇರುವ ಮಹಿಳೆಯರು / ಯುವತಿಯರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು. ತರಬೇತಿಯ ಅವಧಿ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ. 18ರಿಂದ 45 ವರ್ಷ ವಯೋಮಿತಿಯ ಆಸಕ್ತ ಅಭ್ಯರ್ಥಿಗಳು ಫೆ.15ರೊಳಗೆ ಮೊಬೈಲ್ ಸಂಖ್ಯೆ: 9986425537ನ್ನು ಸಂಪರ್ಕಿಸುವ ಮೂಲಕ ಭಾಗವಹಿಸುವಿಕೆಯನ್ನು ದೃಢೀಕರಿಸಬಹುದು ಎಂದು ಬಿವಿಟಿ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಇದೆ ಹಾಗೂ ತರಬೇತಿಯ ನಂತರ ಸ್ವ-ಉದ್ಯೋಗ ಕೈಗೊಳ್ಳಲು ಭಾರತೀಯ ಕಾಸ ಟ್ರಸ್ಟ್ ಮತ್ತು ನಬಾರ್ಡ್ ಯೋಜನೆಗಳಡಿಯಲ್ಲಿ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ- ಸೌಲಭ್ಯ ಪಡೆದು ಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.