ಬೆಂಗಳೂರು:
ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಬೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಮತ್ತಿಬ್ಬರು ಶಂಕಿತರನ್ನು ಬಂಧಿಸಿದೆ.
ದೆಹಲಿ ಎನ್ ಐಎ ಅಧಿಕಾರಿಗಳ ತಂಡ ನಗರದ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ವಶಕ್ಕೆ ಪಡೆದಿದೆ.
ಕಳೆದ ಆಗಸ್ಟ್ ನಲ್ಲಿ ಸಿಲಿಕಾನ್ ಸಿಟಿಯಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಬ್ರೇವ್ ಬಸವನಗುಡಿ ಅಲಿಯಾಸ್ ಅಬ್ದುಲ್ ರೆಹಮಾನ್ ನನ್ನು ಎಎನ್ ಐ ಬಂಧಿಸಿತ್ತು. ನಂತರ ನೀಡಿದ ಮಾಹಿತಿ ಆಧರಿಸಿ ಇನ್ನಿಬ್ಬರು ಶಂಕಿತ ಉಗ್ರರಾದ ಅಬ್ದುಲ್ ಖಾದರ್, ಇರ್ಫಾನ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಆರೋಪಿಗಳು ವಾಟ್ಸಾಪ್ ಗ್ರೂಪ್ ವೊಂದನ್ನು ಮಾಡಿಕೊಂಡುಅದರಲ್ಲಿ ನಗರದ ಕೆಲ ಯುವಕರನ್ನು ಐಸಿಸ್ ಗೆ ಸೇರುವಂತೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದೆ.
ಅಲ್ಲದೇ, ಬಂಧಿತ ಆರೋಪಿಗಳು ಏಳು ಯುವಕರನ್ನು ಸಿರಿಯಾಗೆ ಕಳುಹಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿತ್ತು. ಇದೀಗ ಎನ್‌ಐಎ ತಂಡ ಇನ್ನಿಬ್ಬರು ಶಂಕಿತ ಉಗ್ರರನ್ನು ಬಂಧಿಸಿ, ವಿಚಾರಣೆ ಒಳಪಡಿಸಿದ್ದಾರೆ.