Home Uncategorized ಮತ್ತೆ 5 ರಾಜ್ಯಗಳಲ್ಲಿ ಇಸ್ರೇಲ್ ಉದ್ಯೋಗ ಅಭಿಯಾನ: 5,600 ಮಂದಿ ಆಯ್ಕೆ

ಮತ್ತೆ 5 ರಾಜ್ಯಗಳಲ್ಲಿ ಇಸ್ರೇಲ್ ಉದ್ಯೋಗ ಅಭಿಯಾನ: 5,600 ಮಂದಿ ಆಯ್ಕೆ

37
0

ಹೊಸದಿಲ್ಲಿ: ಇಸ್ರೇಲ್ ನಲ್ಲಿ ಉದ್ಯೋಗಕ್ಕಾಗಿ ಉತ್ತರ ಪ್ರದೇಶ ಹಾಗೂ ಹರ್ಯಾಣದ 5.6 ಲಕ್ಷ ಮಂದಿ ಆಯ್ಕೆಯಾದ ಬೆನ್ನಲ್ಲೇ ಮತ್ತೆ ಐದು ರಾಜ್ಯಗಳು ಈ ಇಸ್ರೇಲ್ ಉದ್ಯೋಗ ಅಭಿಯಾನವನ್ನು ಆರಂಭಿಸಿವೆ.

ಮಿಜೋರಾಂ, ತೆಲಂಗಾಣ, ರಾಜಸ್ಥಾನ, ಬಿಹಾರ ಹಾಗೂ ಹಿಮಾಚಲ ಪ್ರದೇಶದಿಂದ ಕೂಡಾ ಇಸ್ರೇಲ್ ಗೆ ನೇಮಕಾತಿ ಅಭಿಯಾನ ನಡೆಸುವಂತೆ ಎನ್ಎಸ್ ಡಿಸಿಐ(National Skill Development Corporation International) ಗೆ ಮನವಿ ಬಂದಿದೆ.

ಇಸ್ರೇಲ್-ಹಮಾಸ್ ಸಂಘರ್ಷದ ಬಳಿಕ ಇಸ್ರೇಲ್ ನಲ್ಲಿ ಫೆಲಸ್ತೀನಿಯನ್ನರನ್ನು ಕಟ್ಟಡ ನಿರ್ಮಾಣ ಉದ್ಯೋಗದಿಂದ ತೆಗೆದುಹಾಕಲಾಗಿದ್ದು, ಭಾರತ ಹಾಗೂ ಇತರ ದೇಶಗಳಿಂದ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಇಸ್ರೇಲ್ ಉದ್ದೇಶಿಸಿದೆ. ಬಾರ್ ಬೆಂಡರ್, ಮೇಸ್ತ್ರಿ, ಟೈಲ್ಸ್ ಹಾಕುವವರು, ಬಡಗಿಗಳಿಗೆ ಮಾಸಿಕ 1.37 ಲಕ್ಷ ರೂಪಾಯಿ ವೇತನ, ವೈದ್ಯಕೀಯ ವಿಮೆ, ಆಹಾರ ಮತ್ತು ವಸತಿ ಸೌಕರ್ಯಗಳನ್ನು ನೀಡಲಾಗುತ್ತಿದೆ. ಈ ಅಭ್ಯರ್ಥಿಗಳಿಗೆ ಮಾಸಿಕ 16,515 ರೂಪಾಯಿ ಬೋನಸ್ ಕೂಡಾ ದೊರಕುತ್ತದೆ.

ಈಗಾಗಲೇ ವರದಿಯಾಗಿರುವಂತೆ 15 ಮಂದಿ ಇಸ್ರೇಲಿಗಳ ತಂಡ ನೇಮಕಾತಿಗಾಗಿ ಭಾರತಕ್ಕೆ ಆಗಮಿಸಿದೆ. ಜನವರಿ 16 ರಿಂದ 20ರವರೆಗೆ ಹರ್ಯಾಣದಲ್ಲಿ ನಡೆದ ಅಭಿಯಾನದಲ್ಲಿ 1370 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 530 ಮಂದಿ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ 7182 ಮಂದಿಯ ಪೈಕಿ 5087 ಮಂದಿ ಆಯ್ಕೆಯಾಗಿದ್ದರೆ. ಎನ್ಎಸ್ ಡಿಸಿ ಮೂಲಗಳ ಪ್ರಕಾರ, 5000 ಅಭ್ಯರ್ಥಿಗಳು ಐದು ವರ್ಷ ಕಾಲ ಇಸ್ರೇಲ್ ನಲ್ಲಿ ಉದ್ಯೋಗ ಮಾಡಿದಲ್ಲಿ ಭಾರತ 5000 ಕೋಟಿ ರೂಪಾಯಿ ಸ್ವೀಕೃತಿಯನ್ನು ಪಡೆಯಲಿದೆ.

ಭಾರತವನ್ನು ಜಾಗತಿಕ ಮಟ್ಟದಲ್ಲಿ ಕೌಶಲಯುಕ್ತ ಶ್ರಮಶಕ್ತಿಯ ಜಾಗತಿಕ ಕೇಂದ್ರವಾಗಿ ಮಾರ್ಪಡಿಸುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯೋಜನೆ ಪ್ರಗತಿಯಲ್ಲಿದೆ ಎಂದು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಇಸ್ರೇಲ್ ಗೆ ಮಾತ್ರವಲ್ಲದೇ ಇತರ ದೇಶಗಳಿಗೆ ಕೂಡಾ ಭಾರತ ಕೌಶಲಯುಕ್ತ ಕಾರ್ಮಿಕರನ್ನು ಪೂರೈಕೆ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here