Home Uncategorized ಮತ್ತೊಂದು ಕ್ಷೇತ್ರದ ವರದಿ ತರಿಸಿಕೊಂಡ ಸಿದ್ದರಾಮಯ್ಯಗೆ ಆಪ್ತರಿಂದ ಮಹತ್ವದ ಸಲಹೆ: ಕೋಲಾರದಿಂದ ವಿಮುಖರಾದ್ರಾ ಸಿದ್ದರಾಮಯ್ಯ?

ಮತ್ತೊಂದು ಕ್ಷೇತ್ರದ ವರದಿ ತರಿಸಿಕೊಂಡ ಸಿದ್ದರಾಮಯ್ಯಗೆ ಆಪ್ತರಿಂದ ಮಹತ್ವದ ಸಲಹೆ: ಕೋಲಾರದಿಂದ ವಿಮುಖರಾದ್ರಾ ಸಿದ್ದರಾಮಯ್ಯ?

33
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರು ಮುಂದಿನ ಚುನಾವಣೆಯಲ್ಲಿ (Karnataka Assembly Election 2023) ಸ್ಪರ್ಧಿಸಲು ನಿರ್ದಿಷ್ಟವಾದ ಕ್ಷೇತ್ರವಿಲ್ಲ. ಮತ್ತೊಂದೆಡೆ ಮುಂದಿನ ಸಿಎಂ ಘೋಷಣೆ ಕೂಗು ನಿಂತಿಲ್ಲ.. ಕೋಲಾರದ ರಾಜಕೀಯ(Kolar Politics) ಸಮಸ್ಯೆ ಕೊನೆಯಾಗಿಲ್ಲ. ವರುಣದಲ್ಲಿ ನಿಲ್ಲಲು ಅಡ್ಡಿಯಿಲ್ಲ. ಆದರೂ ಮಗನ ರಾಜಕೀಯ ಭವಿಷ್ಯ ಹಿನ್ನೆಲೆಯಲ್ಲಿ ಸಿದ್ದುಗೆ ವರುಣಾದಿಂದ (Varuna) ಸ್ಪರ್ಧಿಸಲು ಮನಸ್ಸಿಲ್ಲ. ಇಷ್ಟೆಲ್ಲಾ ಗೊಂದಲದ ಮಧ್ಯೆ ಸಿದ್ದರಾಮಯ್ಯ ಮತ್ತೆ ವರುಣಾದ ಕಡೆಯೇ ಹೆಜ್ಜೆ ಹಾಕ್ತಾರಾ ಅನ್ನೋ ಚರ್ಚೆ ಶುರುವಾಗಿದೆ.

ಕ್ಷೇತ್ರಾನ್ವೇಷಣೆಯಲ್ಲಿ ಸಿದ್ದರಾಮಯ್ಯ

ಹೌದು… ಕ್ಷೇತ್ರ ಹುಡುಕಾಟದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಬಿಟ್ಟು, ಇವರನ್ನ ಬಿಟ್ಟು ಇವರ್ಯಾರು ಅನ್ನೋ ರೀತಿ ಕ್ಷೇತ್ರಗಳ ಪ್ಲಸ್‌, ಮೈನಸ್ ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲಿ ನಿಂತ್ರೆ ಗೆಲ್ಲಬಹುದು ಎಂದು ರಣತಂತ್ರ ರೂಪಿಸುತ್ತಿದ್ದಾರೆ. ಆದ್ರೆ, ಕ್ಷೇತ್ರದ ಗುಟ್ಟು ಬಿಟ್ಟುಕೊಡದ ಸಿದ್ದು, ಸ್ಪರ್ಧೆ ಬಗ್ಗೆ ಕೇಳಿದ್ರೆ ಹೈಕಮಾಂಡ್ ಹೇಳಿದಂತೆ ನಿಲ್ಲುತ್ತೇನೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: Karnataka Assembly Poll 2023: ಕಾಂಗ್ರೆಸ್ ಬಾಗಿಲು ತಟ್ಟಿದ ಬಿಜೆಪಿ ಹಾಲಿ MLC, ರಾಜಾಜಿನಗರ ಕ್ಷೇತ್ರದ ಟಿಕೆಟ್​ಗೆ ಬೇಡಿಕೆ

ಸಿದ್ದರಾಮಯ್ಯ ಅವರೇನೋ, ಹೈಕಮಾಂಡ್ ಹೇಳಿದಂತೆ ಎಂದು ದೆಹಲಿ ಅಂಗಳಕ್ಕೆ ಚೆಂಡು ಎಸೆದು ಕ್ಷೇತ್ರಾನ್ವೇಷಣೆಯಲ್ಲಿ ತೊಡಗಿದ್ದಾರೆ. ಸದ್ಯ ಯಾವ ಕ್ಷೇತ್ರ ಫಿಕ್ಸ್ ಅನ್ನೋದು ಇನ್ನೂ ಪಕ್ಕಾ ಆಗಿಲ್ಲ. ಹೀಗಿದ್ದರೂ ಸಿದ್ದು ಅಭಿಮಾನಿಗಳು ಮಾತ್ರ ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಘೋಷಣೆ ಕೂಗುತ್ತಿದ್ದಾರೆ.

ಸಿದ್ದರಾಮಯ್ಯ ಕಾಲಿಟ್ಟ ಕಡೆ ಮುಂದಿನ ಸಿಎಂ ಸಿದ್ದು ಅನ್ನೋ ಘೋಷಣೆ ಮುಗಿಲು ಮುಟ್ಟುತ್ತೆ, ಇವತ್ತು ಮೈಸೂರಿಗೆ ಭೇಟಿ ನೀಡಿದ್ದ ವೇಳೆಯು ಮುಂದಿನ ಸಿಎಂ ಕೂಗು ಕೇಳಿಬಂದಿದೆ. ಸಿದ್ದು ಸಹ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿ ಗೆಲ್ಲೋ ಕಣವನ್ನ ಸಿದ್ಧ ಮಾಡ್ತಿದ್ದಾರೆ. ಈಗಲೂ ಕೋಲಾರನಾ, ವರುಣಾನಾ ಅನ್ನೋ ಗೊಂದಲದಲ್ಲೇ ಇದ್ದಾರೆ. ಈ ಮಧ್ಯೆ ಆಪ್ತರು ಸಿದ್ದುಗೆ ಸಲಹೆಯೊಂದನ್ನ ನೀಡಿದ್ದಾರೆ.

ವರುಣಾದಿಂದ ಕಣಕ್ಕಿಳಿಯುವಂತೆ ಆಪ್ತರಿಂದ ಸಲಹೆ

ಈಗಾಗಲೇ ಕೋಲಾರದಲ್ಲಿ ಸ್ಪರ್ಧೆ ಮಾಡಲು ಚಿನ್ನದ ಗಣಿಯಲ್ಲಿ ಒಂದು ರೌಂಡ್ ಹಾಕಿಬಂದಿರುವ ಸಿದ್ದರಾಮಯ್ಯಗೆ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಅವರ ಆಪ್ತರು ಸಲಹೆ ನೀಡಿದ್ದಾರಂತೆ. ನಿಮ್ಮ ಸ್ಪರ್ಧೆಗೆ ವರುಣಾ ಕ್ಷೇತ್ರವೇ ಸೂಕ್ತ ಎಂದಿರೋ ಆಪ್ತರು, ಕೆಲ ಕಾರಣವನ್ನು ಕೊಟ್ಟಿದ್ದಾರೆ. ಕೋಲಾರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಿದ್ದು ಬಳಿ ಚರ್ಚೆ ನಡೆಸಿರೋ ಆಪ್ತರು, ಕೋಲಾರದಲ್ಲಿ ಬೂತ್​ ಮಟ್ಟದ ಮಾಹಿತಿ ಸಂಗ್ರಹಿಸಿದ್ದಾರೆ. ಸಿದ್ದರಾಮಯ್ಯ ಪರ ಅಲೆ ಇದ್ಯಾ ಅಥವಾ ಇಲ್ವಾ ಎಂಬ ಬಗ್ಗೆ ವರದಿ ಸಿದ್ದಪಡಿಸಿದ್ದಾರೆ.

ಇದನ್ನೂ ಓದಿ: Rowdy Sheeters Politics : ಸಮಾಜ ಸೇವೆ ಮಂತ್ರ ಜಪಿಸಿದ ಕುಖ್ಯಾತ ರೌಡಿ ಬೆತ್ತನಗೆರೆ ಶಂಕರ ಬಿಜೆಪಿ ಬಾಗಿಲಲ್ಲಿ…!

ಕೋಲಾರದ ಮಾಹಿತಿ ಆಧರಿಸಿ ಉಳಿದ ಕ್ಷೇತ್ರಗಳಲ್ಲಿ ಸಿದ್ದು ಬಗ್ಗೆ ಇರೋ ಆಸಕ್ತಿಯನ್ನ ಸ್ಟಡಿ ಮಾಡಿದ್ದಾರೆ. ಅಲ್ಲದೇ, ಕೋಲಾರ ಹೊರತುಪಡಿಸಿ ಬೇರೆ ಕ್ಷೇತ್ರಗಳ ಬಗ್ಗೆಯೂ ಅಂದ್ರೆ, ಕುಷ್ಟಗಿ ಕ್ಷೇತ್ರದ ಸರ್ವೆ ವರದಿ ತರಿಸಿಕೊಂಡಿರುವ ಸಿದ್ದರಾಮಯ್ಯಗೆ, ಬೇರೆ ಕ್ಷೇತ್ರಗಳಿಗಿಂತ ವರುಣಾ ಕ್ಷೇತ್ರವೇ ಸೂಕ್ತ ಎಂಬ ಅಭಿಪ್ರಾಯವನ್ನ ಆಪ್ತರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಮತ್ತಷ್ಟು ಗೊಂದಲಕ್ಕೀಡಾಗಿದ್ದಾರೆ.

ಕೋಲಾರ ಕ್ಷೇತ್ರ ಸ್ಪರ್ಧೆಯಿಂದ ವಿಮುಖರಾದ್ರಾ ಸಿದ್ದರಾಮಯ್ಯ?

ಆಪ್ತರ ಸಲಹೆ ಮೇರೆಗೆ ಯಾವುದೇ ರಿಸ್ಕ್​ ತೆಗೆದುಕೊಳ್ಳದೇ ಕೋಲಾರನೂ ಬೇಡ, ಕುಷ್ಟಗಿಯೂ ಬೇಡ. ವರುಣಾ ಕ್ಷೇತ್ರಕ್ಕೆ ಸಿದ್ದು ವಾಪಸ್ ಹೋಗ್ತಾರಾ ಎನ್ನುವುದು ಪ್ರಶ್ನೆಯಾಗಿದೆ. ಆದ್ರೆ, ಅತ್ತ ಸಿದ್ದು ಪುತ್ರ, ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ, ಕ್ಷೇತ್ರ ಸಂಚಾರ ಮಾಡಿದ್ದಾರೆ. ಅಷ್ಟೇ ಅಲ್ಲ ತಮ್ಮ ತಂದೆಗೆ ಮತ್ತೊಮ್ಮೆ ಸಿಎಂ ಆಗೋ ಅವಕಾಶ ಇದೆ. ವರುಣಾ ಸಿದ್ದರಾಮಯ್ಯ ಅವರಿಗೆ ಲಕ್ಕಿ ಕ್ಷೇತ್ರ ಅವರು ವರುಣಾ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧಿಸಲಿ ಎಂದಿದ್ದಾರೆ.

ಮತ್ತೊಂದೆಡೆ ಆಪ್ತರು ವರುಣಾ ಕಡೆಯೇ ಒಲವು ತೋರಿದ್ದಾರೆ. ಪುತ್ರ ಯತೀಂದ್ರ ಸಹ ಕ್ಷೇತ್ರ ಬಿಟ್ಟುಕೊಡಲು ಸಿದ್ದವಾದಂತೆ ಕಾಣುತ್ತಿದೆ. ಇವತ್ತು(ನ.30) ಮೈಸೂರು ಪ್ರವಾಸದರುವ ಸಿದ್ದುಗೆ ಮುಂದಿನ ಸಿಎಂ ಸಿದ್ದಾರಮಯ್ಯ ಎಂದು ಬರೆದಿರುವ ಕೇಕ್ ಕಟ್ ಮಾಡಿಸಲಾಗಿದೆ. ಹೀಗಾಗಿ ಸಿದ್ದು ವಾಪಸ್ ತವರು ಕ್ಷೇತ್ರಕ್ಕೆ ಬರ್ತಾರಾ..? ಸಿದ್ದು ನಿರ್ಧಾರವೇನು ಅನ್ನೋದು ನಿಗೂಢವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here