Home Uncategorized ಮತ್ತೊಮ್ಮೆ ಶಿವಾಜಿ ಪ್ರತಿಮೆ ಉದ್ಘಾಟಿಸಲು ಲಕ್ಷ್ಮೀ ಹೆಬ್ಬಾಳ್ಕರ್ ಮುಂದು: ಸಿಎಂ ಬೊಮ್ಮಾಯಿಗೆ ಆಹ್ವಾನ

ಮತ್ತೊಮ್ಮೆ ಶಿವಾಜಿ ಪ್ರತಿಮೆ ಉದ್ಘಾಟಿಸಲು ಲಕ್ಷ್ಮೀ ಹೆಬ್ಬಾಳ್ಕರ್ ಮುಂದು: ಸಿಎಂ ಬೊಮ್ಮಾಯಿಗೆ ಆಹ್ವಾನ

23
0

ಕುಂದಾನಗರಿಯಲ್ಲಿ ಶಿವಾಜಿ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್ ಜೋರಾಗಿದೆ. ಕ್ರೆಡಿಟ್​​ಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್​​ ನಡುವೆ ಭಾರೀ ಪೈಪೋಟಿ  ನಡೆಯುತ್ತಿದೆ. ಬೆಳಗಾವಿ: ಕುಂದಾನಗರಿಯಲ್ಲಿ ಶಿವಾಜಿ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್ ಜೋರಾಗಿದೆ. ಕ್ರೆಡಿಟ್​​ಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್​​ ನಡುವೆ ಭಾರೀ ಪೈಪೋಟಿ  ನಡೆಯುತ್ತಿದೆ.

ರಾಜಹಂಸಗಡ ಕೋಟೆಯಲ್ಲಿರುವ ಶಿವಾಜಿ ಪ್ರತಿಮೆಯನ್ನು ಮಾ.2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅನಾವರಣಗೊಳಿಸಿದ್ದರು. ಆದರೆ, ಈಗ ಮತ್ತೊಮ್ಮೆ ಪ್ರತಿಮೆ ಉದ್ಘಾಟನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಇಂದು ಶಾಸ್ತ್ರೋಸ್ತಕವಾಗಿ ಪ್ರತಿಮೆ ಉದ್ಘಾಟಿಸಲು ಹೆಬ್ಬಾಳ್ಕರ್ ತಯಾರಿ ನಡೆಸಿದ್ದು, ರಾಜಹಂಸಗಢ ಗ್ರಾಮದಲ್ಲಿ ಹಾಕಲಾಗಿದ್ದ ಬಿಜೆಪಿ ಬ್ಯಾನರ್​ಗಳನ್ನು ಕಿತ್ತೆಸೆದಿದ್ದಾರೆ. ಇಂದು ನಡೆಯುವ ಪ್ರತಿಮೆ ಅನಾವರಣಕ್ಕೆ ಲಕ್ಷ್ಮೀ ಹೆಬ್ಪಾಳ್ಕರ್ ಅವರು ಸಿಎಂಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದಾರೆಂದು ತಿಳಿದುಬಂದಿದೆ.

ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಸತೇಜ್ ಪಾಟೀಲ್, ಮರಾಠಿ ನಟ ಮತ್ತು ಮಹಾರಾಷ್ಟ್ರದ ಸಂಸದ ಡಾ. ಅಮೋಲ್ ಕೋಲೆ, ಲಾತೂರ್ ಶಾಸಕ ಧೀರಜ್ ದೇಶಮುಖ್, ನಟ ರಿತೇಶ್ ದೇಶಮುಖ್ ಮತ್ತು ಇತರ ಗಣ್ಯರು ಇರುವುದು ಕಂಡು ಬಂದಿದೆ.

ಹೆಬ್ಬಾಳ್ಕರ್ ಅವರ ಸಹೋದರ, ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ ಮತ್ತು ಅವರ ಪುತ್ರ ಮೃಣಾಲ್ ಭಾನುವಾರದ ಕಾರ್ಯಕ್ರಮಕ್ಕೂ ಮುನ್ನ ಶನಿವಾರ ರಾಜ್‌ಹುಣಸಗಡದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಸಮಾರಂಭದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here