ಉಡುಪಿ, ಜ.19: ಉಳ್ಳಾಲ ಸೆಯ್ಯದ್ ಮದನಿ ಅರಬಿಕ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಮದನೀಸ್ ಅಸೋಸಿಯೇಷನ್ ಕರ್ನಾಟಕ ಇದರ ಉಡುಪಿ, ಉತ್ತರ ಕನ್ನಡ ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಉಡುಪಿಯ ಅಂಜುಮಾನ್ ಮಸೀದಿಯಲ್ಲಿ ಗುರುವಾರ ಜರಗಿತು.
ಮಾವಿನಕಟ್ಟೆ ಉಸ್ತಾದ್ ಬಿ.ಎ.ಇಸ್ಮಾಯಿಲ್ ಮದನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮದನೀಸ್ ರಾಜ್ಯ ಸಮಿತಿ ನಾಯಕ ಮುಫತ್ತಿಶ್ ಸಿದ್ದೀಕ್ ಮದನಿ ನಾಟೆಕಲ್ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ನೌಫಲ್ ಮದನಿ ನೇಜಾರ್ 2021-2024 ಸಾಲಿನ ಲೆಕ್ಕ ಪತ್ರ ವಾಚಿಸಿದರು. ರಿಟೈನರ್ ಆಫೀಸರ್ ಮುಹಿಯದ್ದೀನ್ ಮದನಿ ಕಟ್ಟತ್ತಿಲ ನೂತನ ಸಮಿತಿ ರಚನೆಗೆ ನೇತೃತ್ವ ನೀಡಿದರು.
ಅಧ್ಯಕ್ಷರಾಗಿ ಬಿ.ಎ.ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್ ಮದನಿ ಕಣ್ಣಂಗಾರ್, ಕೋಶಾಧಿಕಾರಿಯಾಗಿ ಮುಹಮ್ಮದ್ ಶರೀಫ್ ಮದನಿ ಹೊಸ್ಮಾರ್, ಉಪಾಧ್ಯಕ್ಷರುಗಳಾಗಿ ಅಬ್ದುರಝಾಕ್ ಮದನಿ ನಿಟ್ಟೆ, ಅಬ್ದುಲ್ ಹಮೀದ್ ಮದನಿ ನಾವುಂದ, ಜೊತೆ ಕಾರ್ಯದರ್ಶಿಗಳಾಗಿ ಎನ್.ಎ.ನೌಫಲ್ ಮದನಿ ನೇಜಾರ್, ಹಾಫಿಲ್ ಹಾರಿಸ್ ಮದನಿ ಕಣ್ಣಂಗಾರ್, ಇಬ್ರಾಹಿಂ ಮದನಿ ಮೂಳೂರು ಹಾಗೂ ಎಂಟು ಜನರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.