Home ಕರ್ನಾಟಕ ಮನೆಗೆ ನುಗ್ಗಿ ನಗ-ನಗದು ಕಳ್ಳತನ

ಮನೆಗೆ ನುಗ್ಗಿ ನಗ-ನಗದು ಕಳ್ಳತನ

28
0

ಉಡುಪಿ, ಮೇ 12: ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ಉಡುಪಿ ಬೈಲೂರಿನಿಂದ ವರದಿಯಾಗಿದೆ.

ಬೈಲೂರಿನ ನಳಿನಿ ಪ್ರಭಾವತಿ ಎಂಬವರು ಮೇ 9ರಂದು ಮಡಿಕೇರಿ, ಮೈಸೂರು ಕಡೆ ಪ್ರವಾಸ ಹೋಗಿದ್ದರು. ಮೇ 11ರಂದು ಮೈಸೂರಿನಲ್ಲಿದ್ದಾಗ ಅವರ ಸಂಬಂಧಿ ಅಭಿಷೇಕ್ ಕರೆ ಮಾಡಿ ಮನೆಯ ಮೇಲಿನ ಅಂತಸ್ತಿನ ಬಾಗಿಲಿನ ಚಿಲಕ ವನ್ನು ಹೊರಗಡೆಯಿಂದ ಯಾರೋ ಕಳ್ಳರು ತೆಗೆದು ಕಳ್ಳತನ ಮಾಡಿದ್ದಾರೆ ಎಂದು ತಿಳಿಸಿದ್ದರು.

ಸುದ್ದಿ ತಿಳಿದು ಪ್ರಭಾವತಿ ಮೈಸೂರಿನಿಂದ ಆಗಮಿಸಿ ನೋಡಿದಾಗ ಬೆಡ್ ರೂಮ್‌ನಲ್ಲಿನ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, 1,74,200 ರೂ. ಮೌಲ್ಯದ ಚಿನ್ನ ಹಾಗೂ 3000 ರೂ. ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು.

ಈ ಬಗ್ಗೆ ಪ್ರಭಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here