ಬ್ರಹ್ಮಾವರ: ಮನೆಯ ಡೈನಿಂಗ್ ಟೇಬಲ್ನಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಕಳವಾಗಿರುವ ಘಟನೆ ಜ.17ರಂದು ಸಂಜೆ ವೇಳೆ ವಾರಂಬಳ್ಳಿ ಗ್ರಾಮದ ಬಾಳ್ತಾರು ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ.
ಉಪ್ಪಿನಕೋಟೆಯ ಯಶೋಧ(50) ಎಂಬವರು ಮನೆಯ ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದ ಸುಮಾರು 4.50 ಗ್ರಾಂ ಚಿನ್ನದ ಕನಕ ಹಾರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ. ಇದರ ಮೌಲ್ಯ 1,49,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
