Home Uncategorized ಮನೆ ಮಂದಿಯನ್ನೆಲ್ಲ ಸೋಂಬೇರಿ ಎಂದು ಜರಿಯುವ ಆರ್ಯವರ್ಧನ್​ಗೆ ಸುದೀಪ್ ಸಖತ್ ಕ್ಲಾಸ್

ಮನೆ ಮಂದಿಯನ್ನೆಲ್ಲ ಸೋಂಬೇರಿ ಎಂದು ಜರಿಯುವ ಆರ್ಯವರ್ಧನ್​ಗೆ ಸುದೀಪ್ ಸಖತ್ ಕ್ಲಾಸ್

29
0

ಆರ್ಯವರ್ಧನ್ (Aryavardhan) ಅವರು ‘ಬಾಸ್ ಬಾಸ್ ಒಟಿಟಿ’ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು. ಟಿವಿ ಸೀಸನ್​ಗೆ ಬಂದ ನಂತರದಲ್ಲಿ ಅವರು ಮತ್ತಷ್ಟು ಗುರುತಿಸಿಕೊಂಡರು. ದೊಡ್ಮನೆಯಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳೋದು ಅಡುಗೆ ಮನೆಯಲ್ಲಿ. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಅಡುಗೆ ಮಾಡುವುದರಲ್ಲೇ ಬ್ಯುಸಿ ಆಗಿರುತ್ತಾರೆ. ತಮ್ಮನ್ನು ಬಿಟ್ಟು ಬೇರಾರು ಕೆಲಸ ಮಾಡುವುದಿಲ್ಲ ಎನ್ನುವ ಭ್ರಮೆಯೂ ಅವರಲ್ಲಿದೆ. ಈ ಬಗ್ಗೆ ಸುದೀಪ್ (Sudeep) ಅವರು ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೀಗೆ ಹೇಳದಂತೆ ಎಚ್ಚರಿಕೆ ನೀಡಿದ್ದಾರೆ.

ಆರ್ಯವರ್ಧನ್ ಅವರು ಡಬಲ್​ಗೇಮ್ ಆಡುತ್ತಾರೆ ಅನ್ನೋದು ಅನೇಕರ ವಾದ. ಅವರು ನಡೆದುಕೊಳ್ಳುವ ರೀತಿಯೂ ಅದೇ ರೀತಿ ಇರುತ್ತದೆ. ಮನೆ ಮಂದಿ ಯಾರೂ ಕೆಲಸ ಮಾಡುವುದಿಲ್ಲ ಎನ್ನುವ ಮಾತನ್ನು ಆರ್ಯವರ್ಧನ್ ಹೇಳುತ್ತಲೇ ಬಂದಿದ್ದರು. ಇದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

‘ಪ್ರಶಾಂತ್ ಸಂಬರ್ಗಿ ಜತೆ ಮಾತನಾಡುವಾಗ ಕಾವ್ಯಾ ಸೋಂಬೇರಿ ಎನ್ನುವ ಮಾತನ್ನು ಹೇಳಿದ್ರಿ. ದೋಸೆ ಮಗುಚಿ ಹಾಕುವಾಗ ಇದೇ ಪ್ರಶಾಂತ್ ಸಂಬರ್ಗಿ ಬಗ್ಗೆ ಮಾತನಾಡಿ, ಅವರು ಏನು ಕೆಲಸ ಮಾಡಲ್ಲ ಎಂದು ಹೇಳಿದ್ರಿ. ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ಅನುಪಮಾ ಗೌಡ ಬಗ್ಗೆಯೂ ಇದೇ ಮಾತನ್ನು ಆಡಿದ್ರಿ. ನಿಮ್ಮ ಪ್ರಕಾರ ನೀವೊಬ್ರೇ ಕೆಲಸ ಮಾಡೋದಾ’ ಎಂದು ಪ್ರಶ್ನೆ ಮಾಡಿದರು ಸುದೀಪ್.

ಇದಕ್ಕೆ ಉತ್ತರಿಸಿದ ಆರ್ಯವರ್ಧನ್​, ‘ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ, ನಾನು ರೂಪೇಶ್ ಶೆಟ್ಟಿ ಕೆಲಸ ಮಾಡೋದು ನನಗೆ ಹೆಚ್ಚಾಗಿ ಕಾಣುತ್ತದೆ. ಅದಕ್ಕೆ ಆ ರೀತಿ ಹೇಳಿದೆ. ಅಡುಗೆ ಮನೆಯಲ್ಲಿ ಹೆಚ್ಚು ಕೆಲಸ ಇರುತ್ತದೆ. ಅದಕ್ಕೆ ಆ ರೀತಿ ಕಾಣುತ್ತದೆಯೋ ಏನೋ. ಅಡುಗೆ ಮನೆ ಅಲ್ಲದೆ ಬೇರೆ ಕೆಲಸ ನೀಡಿದಾಗಲೂ ನಾನು ಮಾಡಿ ತೋರಿಸಿದ್ದೇನೆ’ ಎಂದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ​ ಕುಟುಂಬದವರು; ಹೇಗಿತ್ತು ಸ್ಪರ್ಧಿಗಳ ರಿಯಾಕ್ಷನ್?

ಆದರೆ, ಮನೆ ಮಂದಿಯವರು ಆರ್ಯವರ್ಧನ್ ಅವರ ಮಾತನ್ನು ಒಪ್ಪಲಿಲ್ಲ. ಆರ್ಯವರ್ಧನ್ ಅವರಂತೆ ಉಳಿದವರೂ ಕೆಲಸ ಮಾಡುತ್ತಾರೆ ಎಂಬುದನ್ನು ಹೇಳಿದರು. ಕೆಲಸದ ವಿಚಾರದಲ್ಲಿ ಸುದೀಪ್ ಅವರು ಆರ್ಯವರ್ಧನ್​ಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಆರ್ಯವರ್ಧನ್ ಅವರು ‘ಉಳಿದವರು ಮಾತನಾಡುವಾಗ ಕೆಲಸ ಮಾಡುತ್ತಾರೆ. ನಾನು ಹಾಗೆ ಮಾಡಲ್ಲ’ ಎಂದರು. ಇದಕ್ಕೆ ಮನೆ ಮಂದಿ ನಕ್ಕರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

LEAVE A REPLY

Please enter your comment!
Please enter your name here