ಮಂಡ್ಯ: ಮನ್ಮುಲ್ ಮೆಗಾಡೈರಿ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಡಿಸಿ ಡಾ.ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮನ್ಮುಲ್ ನಲ್ಲಿ ವಿದ್ಯುತ್ ಅವಘಡ ನಡೆದಿದ್ದು, ಅಗ್ನಿಶಾಮಕ ತುರ್ತು ಆಗಮಿಸಿ ಬೆಂಕಿ ಆರಿಸುವ ಕೆಲಸ ಮಾಡಿದ್ದಾರೆ. ನಾವು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.
ಇನ್ನೂ ಯಾವ ಕಾರಣಕ್ಕೆ ಅವಘಡ ನಡೆದಿದೆ ಅನ್ನೋದನ್ನ ತಿಳಿಯಲು ತನಿಖಾ ತಂಡ ರಚನೆಗೆ ಸೂಚನೆ ನೀಡಲಾಗಿದ್ದು, ತನಿಖೆ ವರದಿ ಬಂದ ಮೇಲೆ ಸೂಕ್ತ ಮಾಹಿತಿ ತಿಳಿಯಲಿದೆ. ಅದಲ್ಲದೆ ಅವಘಡ ಸಂದರ್ಭದಲ್ಲಿ ವಸ್ತುಗಳ ಹಾನಿ ಬಗ್ಗೆ ಪರಿಶೀಲನೆ ನಡೆಸಿ 90 ಲಕ್ಷಕ್ಕೂ ಹೆಚ್ಚು ನಷ್ಟದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಎನ್.ಓ.ಸಿ ಬಗ್ಗೆ ಮಾಹಿತಿ ಪಡೆದಿದ್ದೇನೆ.
ಈಗಾಗಲೇ ಅಗ್ನಿಶಾಮಕದಳಕ್ಕೆ ವರದಿ ನೀಡಲು ಸೂಚನೆ ಕೊಟ್ಟಿದ್ದೇನೆ. ಅಗ್ನಿಶಾಮಕ ದಳದಿಂದ ಅನುಮತಿ ಪಡೆಯುವುದು ಅವಶ್ಯಕತೆ ಇದೆ ಎಂದರು. ಮನ್ಮುಲ್ ಲೋಪಾ ಎದ್ದು ಕಾಣುತ್ತಿದ್ದು, ತನಿಖಾ ವರದಿ ಬಳಿಕ ಕ್ರಮಕೈಗೊಳ್ಳತ್ತೇನೆ. ಈ ಪ್ರಕರಣ ಸರ್ಕಾರದ ಗಮನದಲ್ಲಿದ್ದು, ಸರ್ಕಾರಕ್ಕೂ ವರದಿ ಸಲ್ಲಿಸಿದ್ದೇನೆ ಎಂದು ಡಿಸಿ ಡಾ.ಕುಮಾರ್ ಹೇಳಿದರು.
The post ಮನ್ಮುಲ್ ಮೇಗಾ ಡೇರಿ ಬೆಂಕಿ ಅವಘಡ: 90 ಲಕ್ಷಕ್ಕೂ ಹೆಚ್ಚು ನಷ್ಟ.! appeared first on Ain Live News.