Home ಕರ್ನಾಟಕ ಮಲ್ಪೆ ಬೀಚ್ ಜೀವರಕ್ಷಕನಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು

ಮಲ್ಪೆ ಬೀಚ್ ಜೀವರಕ್ಷಕನಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು

30
0

ಮಲ್ಪೆ, ಮೇ 8: ಮಲ್ಪೆ ಬೀಚ್‌ನ ಅಪಾಯಕಾರಿ ಸ್ಥಳಕ್ಕೆ ಈಜುತ್ತಿರುವ ಬಗ್ಗೆ ಆಕ್ಷೇಪಿಸಿದಕ್ಕೆ ಜೀವರಕ್ಷಕರಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಇಂದು ಸಂಜೆ ವೇಳೆ ನಡೆದಿದೆ.

ಆರು ಜನರ ತಂಡವೊಂದು ಮಲ್ಪೆ ಬೀಚ್‌ನ ಸಮುದ್ರದಲ್ಲಿ ಈಜುತ್ತಿದ್ದು, ಈ ವೇಳೆ ಜೀವರಕ್ಷಕ ತೇಜ ಕೋಟ್ಯಾನ್ ಅಪಾಯ ಕಾರಿ ಅಲೆಗಳ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ತಂಡ ನಿರ್ಲಕ್ಷಿಸಿ ಸ್ವಿಮ್ಮಿಂಗ್ ರೆನ್ ದಾಟಿ ಈಜು ಮುಂದುವರೆಸಿ ದರೆನ್ನಲಾಗಿದೆ. ಕೂಡಲೇ ಅಲ್ಲಿಗೆ ತೆರಳಿದ ತೇಜ ಕೋಟ್ಯಾನ್ ಅವರನ್ನು ಮೇಲಕ್ಕೆ ಬರುವಂತೆ ತಾಕೀತು ಮಾಡಿದರು. ಈ ವೇಳೆ ತಂಡ ತೇಜ ಕೋಟ್ಯಾನ್ ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here