Home Uncategorized ಮಲ್ಪೆ: ಸಮುದ್ರಪಾಲಾಗಿದ್ದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿಯ ಮೃತದೇಹ ಪತ್ತೆ

ಮಲ್ಪೆ: ಸಮುದ್ರಪಾಲಾಗಿದ್ದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿಯ ಮೃತದೇಹ ಪತ್ತೆ

41
0

ಮಲ್ಪೆ : ಎರಡು ದಿನಗಳ ಹಿಂದೆ ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ಎಂಬಲ್ಲಿ ಸಮುದ್ರ ಪಾಲಾಗಿದ್ದ ದೆಹಲಿ ಮೂಲದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ನಿತೀನ್(35) ಎಂಬವರ ಮೃತದೇಹವು ಇಂದು ಮಧ್ಯಾಹ್ನ ವೇಳೆ ಸಮುದ್ರದಲ್ಲಿ ಪತ್ತೆಯಾಗಿದೆ.

ಜ.26 ರಂದು ಇಬ್ಬರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ನಿತೀನ್, ಜ.27ರಂದು ಅಪರಾಹ್ನ 3.30ರ ಸುಮಾರಿಗೆ ಡೆಲ್ಟಾ ಬೀಚ್ ನಲ್ಲಿ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗಳಿಂದ ಕೊಚ್ಚಿಕೊಂಡು ಹೋದ ನಿತೀನ್ ನಾಪತ್ತೆಯಾಗಿದ್ದರು. ಇವರ ಮೃತದೇಹಕ್ಕಾಗಿ ಎರಡು ದಿನಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು.

ಇವರ ಪತ್ನಿ ಮಕ್ಕಳು ಹಾಗೂ ಮನೆಯವರು ಮಲ್ಪೆಗೆ ಆಗಮಿಸಿದ್ದರು. ಬೋಟಿನವರ ಮೂಲಕ ದೊರೆತ ಮಾಹಿತಿಯಂತೆ 12 ಮಾರು ದೂರದ ಸಮುದ್ರದಲ್ಲಿ ಮೃತದೇಹ ಪತ್ತೆಯಾಗಿದ್ದು, ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ತೆರಳಿ ಮೃತದೇಹವನ್ನು ತೀರಕ್ಕೆ ತರುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here