ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಲ್ಯಾಡಿ ಪಕ್ಷಿಧಾಮದ ಜೌಗು ಪ್ರದೇಶದಲ್ಲಿ ಭಾರತೀಯ ನೀರುನಾಯಿಯೊಂದು ಕಾಣಿಸಿಕೊಂಡಿರುವುದು ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಲ್ಯಾಡಿ ಪಕ್ಷಿಧಾಮದ ಜೌಗು ಪ್ರದೇಶದಲ್ಲಿ ಭಾರತೀಯ ನೀರುನಾಯಿಯೊಂದು ಕಾಣಿಸಿಕೊಂಡಿರುವುದು ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಸ್ಥಳೀಯವಾಗಿ ‘ನೀರು ನಾಯಿ’ ಎಂದು ಕರೆಯುವ ಇಂಡಿಯನ್ ಒಟ್ಟರ್ ಪ್ರಾಣಿಗಳು ಇತ್ತೀಚಿನ ತಿಂಗಳುಗಳಲ್ಲಿ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿವೆ. ಈ ಹಿಂದೆ ಈ ಅಭಯಾರಣ್ಯವು ಈಗ್ರೆಟ್ಸ್ (ಬೆಳ್ಳಕ್ಕಿ), ಕ್ರೆಸ್ಟೆಡ್ ಲಾರ್ಕ್ಸ್, ಲಿಟಲ್ ಕಾರ್ಮೊರೆಂಟ್ಸ್ (ನೀರುಕಾಗೆ), ಸ್ಪಾಟ್-ಬಿಲ್ಡ್ ಡಕ್ (ವರಟೆ ಅಥವಾ ಬಾತುಕೋಳಿ), ಕಾಮನ್ ಕೂಟ್, ಬಾಚಣಿಗೆ ಬಾತುಕೋಳಿ ಮತ್ತು ಯುರೇಷಿಯನ್ ಟೀಲ್ ಮುಂತಾದ ವಿವಿಧ ಜಾತಿಯ ಪಕ್ಷಿಗಳ ಆಗಮನಕ್ಕೆ ಸಾಕ್ಷಿಯಾಗಿತ್ತು.
ಇದನ್ನೂ ಓದಿ: ಕಾಸರಕೋಡು ಕಡಲತೀರದಲ್ಲಿ ಅಪರೂಪದ ‘ಗಿಟಾರ್ ಫಿಶ್’ ಪತ್ತೆ
ಆದಾಗ್ಯೂ, ನೀರುನಾಯಿಗಳು ಪಕ್ಷಿಗಳಿಗೆ ಅಪಾಯವನ್ನುಂಟುಮಾಡುತ್ತವೆಯೇ ಎಂಬ ಶಂಕೆ ಇದ್ದು, ನೀರುನಾಯಿಗಳು ಮೀನುಗಳನ್ನು ಮಾತ್ರ ತಿನ್ನುತ್ತವೆ ಮತ್ತು ಪಕ್ಷಿಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ನಿವಾಸಿಗಳು ಭರವಸೆ ನೀಡಿದ್ದಾರೆ. ಅದಾಗ್ಯೂ 1.5 ಚದರ ಕಿಲೋಮೀಟರ್‌ನಲ್ಲಿ ಹರಡಿರುವ ನಿರ್ವಹಣೆ ಕೈಬಿಟ್ಟ ಮಣ್ಣಿನ ಕ್ವಾರಿಯಾಗಿರುವ ಪಕ್ಷಿಧಾಮಕ್ಕೆ ಅವು ಅಡ್ಡಿಪಡಿಸಿದರೆ ತಜ್ಞರು ಅಧ್ಯಯನ ಮಾಡಬೇಕಾಗಬಹುದು.
ಪಕ್ಷಿ ವೀಕ್ಷಕರಿಗೆ ಅಥವಾ ಕುತೂಹಲಕಾರಿ ಪ್ರವಾಸಿಗರಿಗೆ, ಮಲ್ಯಾಡಿ ಪಕ್ಷಿಧಾಮವು ತೆಕ್ಕಟ್ಟೆಯಿಂದ (NH 66) ಕೇವಲ ಐದು ನಿಮಿಷಗಳ ದೂರ ಪ್ರಯಾಣದ ಅಂತರದಲ್ಲಿದೆ. ಸೆಪ್ಟೆಂಬರ್ ಮತ್ತು ಜನವರಿಯ ನಡುವಿನ ಮುಂಜಾನೆಯ ಭೇಟಿಯು (ಸಂತಾನೋತ್ಪತ್ತಿ ಅವಧಿ) ಕಣ್ಣುಗಳಿಗೆ ಹಬ್ಬವನ್ನು ನೀಡುತ್ತದೆ, ಪಕ್ಷಿಗಳು ಮೀನುಗಳನ್ನು ಹಿಡಿಯಲು ಕೆಳಗೆ ಹಾರುತ್ತವೆ.
ಇದನ್ನೂ ಓದಿ: 10 ವರ್ಷಗಳ ನಂತರ, ಆಂಧ್ರ ಪ್ರದೇಶದ ನಲ್ಲಮಲ ಅರಣ್ಯದಲ್ಲಿ ಭಾರತೀಯ ತೋಳಗಳು ಪತ್ತೆ!
ಆನಗಳ್ಳಿ, ವಂಡ್ಸೆ, ಹೆಮ್ಮಾಡಿ ಸೇರಿದಂತೆ ಇತರೆಡೆ ಸೌಪರ್ಣಿಕಾ ನದಿಯ ಹಿನ್ನೀರಿನಲ್ಲಿ ಈ ಹಿಂದೆ 8-10 ಗುಂಪುಗಳಲ್ಲಿ ಭಾರತೀಯ ನೀರುನಾಯಿಗಳು ಕಾಣಿಸಿಕೊಂಡಿದ್ದವು ಎಂದು ಆರು ತಿಂಗಳ ಹಿಂದೆ ಕುಂದಾಪುರದಲ್ಲಿ ಕೆಲಸ ಮಾಡುತ್ತಿದ್ದ ರೇಂಜ್ ಫಾರೆಸ್ಟ್ ಆಫೀಸರ್ ಪ್ರಭಾಕರ ಕುಲಾಲ್ TNIE ಗೆ ತಿಳಿಸಿದರು.
ಬೈಂದೂರು ಮತ್ತು ಕುಂದಾಪುರ ತಾಲೂಕಿನಲ್ಲಿ ಒಟ್ಟು 40 ರಿಂದ 50 ಭಾರತೀಯ ನೀರುನಾಯಿಗಳು ಇವೆ… ಆದರೆ ಅವು ಉಡುಪಿ ಜಿಲ್ಲೆಯ ಬೇರೆ ಯಾವುದೇ ಭಾಗಗಳಲ್ಲಿ ಕಂಡುಬಂದಿಲ್ಲ. ಭಾರತೀಯ ನೀರುನಾಯಿಗಳನ್ನು ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಅಡಿಯಲ್ಲಿ ರಕ್ಷಿಸಲಾಗಿದೆ,” ಎಂದು ಅವರು ಹೇಳಿದರು.
ಇದನ್ನೂ ಓದಿ: ಅಳಿವಿನಂಚಿನಲ್ಲಿರುವ ‘ಕೊಯ್ಲೆ ಮೀನು’: ರಕ್ಷಣೆಗೆ ‘ಕೊಯ್ಲೆಮೀನ್ ಪ್ರಾಜೆಕ್ಟ್’ ಪ್ರಾರಂಭ
2021ರಲ್ಲಿ ಕುಂದಾಪುರ ತಾಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಭಾರತೀಯ ನೀರುನಾಯಿ ಕಾಣಿಸಿಕೊಂಡಿದ್ದು, ಕಳೆದ ವರ್ಷ ಕೊಲ್ಲೂರಿನ ಅನೇಜಾರಿ ಬಳಿ ಹಾಗೂ ಹಳ್ನಾಡು ಗ್ರಾಮದ ವಾರಾಹಿ ನದಿಯಲ್ಲಿ ಕಾಣಿಸಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.