Home Uncategorized ಮಳೆ ಅವಾಂತರಕ್ಕೆ ಮೂವರ ಸಾವು: ಕರಾವಳಿಯಲ್ಲಿ ಇಂದಿನಿಂದ 4 ದಿನ ಯೆಲ್ಲೋ ಅಲರ್ಟ್

ಮಳೆ ಅವಾಂತರಕ್ಕೆ ಮೂವರ ಸಾವು: ಕರಾವಳಿಯಲ್ಲಿ ಇಂದಿನಿಂದ 4 ದಿನ ಯೆಲ್ಲೋ ಅಲರ್ಟ್

21
0

ಮಳೆಯಿಂದಾಗಿ ಸೃಷ್ಟಿಯಾದ ಅವಾಂತರಕ್ಕೆ ಉಡುಪಿಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಈ ನಡುವಲ್ಲೇ ಕರಾವಳಿಯಲ್ಲಿ ಇಂದಿನಿಂದ 4 ದಿನ ಹವಾಮಾನ ಇಲಾಖೆ ಯೆಲ್ಲೋ ಘೋಷಣೆ ಮಾಡಿದೆ ಎಂದು ತಿಳಿದುಬಂದಿದೆ. ಉಡುಪಿ: ಮಳೆಯಿಂದಾಗಿ ಸೃಷ್ಟಿಯಾದ ಅವಾಂತರಕ್ಕೆ ಉಡುಪಿಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಈ ನಡುವಲ್ಲೇ ಕರಾವಳಿಯಲ್ಲಿ ಇಂದಿನಿಂದ 4 ದಿನ ಹವಾಮಾನ ಇಲಾಖೆ ಯೆಲ್ಲೋ ಘೋಷಣೆ ಮಾಡಿದೆ ಎಂದು ತಿಳಿದುಬಂದಿದೆ.

ಕುಂದಾಪುರದ ಹೊಟೇಲ್ ಉದ್ಯೋಗಿ ಬಿಜೂರಿನ ಸತೀಶ್ (33) ಬುಧವಾರದಂದು ಮಡದಬೆಟ್ಟು ಬಳಿ ಸೇತುವೆಯಿಂದ ಹೊಳೆಗೆ ಬಿದ್ದು ಸಾವನ್ನಪ್ಪಿದ್ದರು. ಗುರುವಾರ ತೆಕ್ಕಟ್ಟೆಯ ಹೆದ್ದಾರಿಯಲ್ಲಿ ತೆರೆದ ಚರಂಡಿಗೆ ಬಿದ್ದು ಬಾರ್ಕೂರು ನಿವಾಸಿ 67 ವರ್ಷದ ಸಂಜೀವ ಮೊಗವೀರ ಮೃತಪಟ್ಟಿದ್ದರು. ಹೆಬ್ರಿ ತಾಲೂಕಿನ ಮುದ್ರಾಡಿಯಲ್ಲಿ ಭಾರತಿ ಪೂಜಾರಿ (49) ಅವರು ಹೊಳೆಗೆ ಜಾರಿ ಬಿದ್ದು ಮೃತಪಟ್ಟಿದ್ದರು.

ಮೇ. 11 ರಂದು ಭಾರೀ ಮಳೆಯಿಂದಾಗಿ ಆಟೋರಿಕ್ಷಾ ಮೇಲೆ ಮರ ಬಿದ್ದ ಪರಿಣಾಮ ಪುಷ್ಪಾ (45) ಹಾಗೂ ಕೃಷ್ಣ (48) ಎಂಬುವವರು ಸಾವನ್ನಪ್ಪಿದ್ದರು.

ಈ ಸಂಬಂಧ ಸಿಆರ್‌ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಕೋಟಾ ಮತ್ತು ಹೆಬ್ರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಘಟನೆಗಳ ಸಂಬಂಧ ತಹಶೀಲ್ದಾರ್‌ಗಳ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದು, ಸಾವುಗಳು ಇನ್ನೂ ಮಳೆ ಸಂಬಂಧಿತ ಸಾವಿನ ಪಟ್ಟಿಗೆ ಸೇರ್ಪಡೆಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಮಳೆಯಿಂದಾಗಿ ಇದೂವರೆಗೆ 59 ಮನೆಗಳು ಭಾಗಶಃ ಹಾನಿಯಾಗಿದ್ದು, ಒಂದು ಮನೆ ಸಂಪೂರ್ಣ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಂಜಿಬೆಟ್ಟುವಿನ ಸಗ್ರಿಬೈಲ್ ಬಳಿಯ ಸೇತುವೆಯೂ ಇತ್ತೀಚೆಗೆ ಭಾಗಶಃ ಹಾನಿಗೊಳಗಾಗಿತ್ತು. ರೈತರು ಗೊಬ್ಬರವನ್ನು ಗದ್ದೆಗಳಿಗೆ ಸ್ಥಳಾಂತರಿಸಲು ಈ ಸೇತುವೆಯನ್ನು ಬಳಸುತ್ತಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದರು.

LEAVE A REPLY

Please enter your comment!
Please enter your name here