Home Uncategorized ಮಳೆ, ಚಳಿ ಗಾಳಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಜ್ವರ, ಡೆಂಗ್ಯೂ ಪ್ರಕರಣಗಳು

ಮಳೆ, ಚಳಿ ಗಾಳಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಜ್ವರ, ಡೆಂಗ್ಯೂ ಪ್ರಕರಣಗಳು

12
0

ಕಳೆದ ಕೆಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸಹ ಧಾರಾಕಾರ ಮಳೆ, ಮೋಡ ಕವಿದ ವಾತಾವರಣ, ಶೀತ ಹೀಗಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ, ಜ್ವರ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಬರುತ್ತಿವೆ.  ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸಹ ಧಾರಾಕಾರ ಮಳೆ, ಮೋಡ ಕವಿದ ವಾತಾವರಣ, ಶೀತ ಹೀಗಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ, ಜ್ವರ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಬರುತ್ತಿವೆ. 

ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಸಂಪರ್ಕಾಧಿಕಾರಿ ಡಾ.ಶ್ರೀಕಾಂತ ಹೆಳವಾರ ಅವರ ಪ್ರಕಾರ, ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ಜುಲೈ 1 ರಿಂದ 4,795 ರೋಗಿಗಳು ಹೊರರೋಗಿ ವಿಭಾಗಕ್ಕೆ (OPD) ಭೇಟಿ ನೀಡಿದ್ದಾರೆ. 700 ಡೆಂಗೆ ಪ್ರಕರಣಗಳು ಕಳೆದ 26 ದಿನಗಳಲ್ಲಿ ವರದಿಯಾಗಿದೆ.

ಚಳಿ ಶೀತ ವಾತಾವರಣ ಮತ್ತು ಮಳೆಯಿಂದಾಗಿ ರೋಗಿಗಳು ಜ್ವರ, ಶೀತ ಮತ್ತು ಕೆಮ್ಮಿನ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ 40 ಡೆಂಗೆ ಒಳರೋಗಿಗಳಿದ್ದು, ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಡಾ.ಹೆಳವಾರ ತಿಳಿಸಿದರು.

ಅದೇ ರೀತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಿನನಿತ್ಯದ ಸರಾಸರಿ 350 ಹೊರ ರೋಗಿಗಳು ಹೆಚ್ಚಾಗುತ್ತಿದ್ದು, ಹವಾಮಾನ ಮತ್ತು ಮಳೆ ಇದಕ್ಕೆ ಕಾರಣವಾಗಿರಬಹುದು ಎಂದು ನಿವಾಸಿ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಹೇಳಿದ್ದಾರೆ. ಜ್ವರ ಮತ್ತು ಡೆಂಗ್ಯೂ ಪ್ರಕರಣಗಳು ಸ್ವಲ್ಪ ಹೆಚ್ಚಿವೆ ಆದರೆ ಇದು ಇನ್ನೂ ಆತಂಕಕಾರಿಯಾಗಿಲ್ಲ ಎಂದು ಶ್ರೀನಿವಾಸ್ ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ರೆಫರಲ್ ಆಸ್ಪತ್ರೆಗಳನ್ನು ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಜ್ವರ ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚಳವನ್ನು ಕಂಡಿದೆ. ರೋಗಿಗಳು ಚಿಕಿತ್ಸೆಗೆ ದಾಖಲಾಗಬೇಕಾದ ಸಂದರ್ಭಗಳು ಬಂದಾಗ ಬೌರಿಂಗ್, ವಿಕ್ಟೋರಿಯಾ ಮತ್ತು ಕೆಸಿ ಜನರಲ್‌ನಂತಹ ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.

ಹೆಚ್ಚಿನ ರೋಗಿಗಳು ಖಾಸಗಿ ಕ್ಲಿನಿಕ್‌ಗಳಿಗೆ ಹೋಗುತ್ತಾರೆ ಕೆಲವರು ಪುರಸಭೆಯ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳಿಗೆ ಬರುತ್ತಾರೆ. ಅದಕ್ಕೆ ತಕ್ಕಂತೆ ಔಷಧಗಳನ್ನು ನೀಡುತ್ತೇವೆ. ರೋಗಿಗಳನ್ನು ದೊಡ್ಡ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಿದ್ದೇವೆ ಎಂದು ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್ ತಿಳಿಸಿದರು.

ಜನರಿಗೆ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುದ್ಧ ಆಹಾರ ಮತ್ತು ಬಿಸಿನೀರನ್ನು ಸೇವಿಸಿ

ಜ್ವರ ತರಹದ ಲಕ್ಷಣಗಳು, ತಲೆನೋವು, ದೇಹದ ನೋವು ಮತ್ತು ಕೆಮ್ಮು ಕಂಡುಬಂದಲ್ಲಿ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ
ಸ್ವಯಂ-ಔಷಧಿ ಮಾಡಬೇಡಿ

ಜ್ವರದ ಸಂದರ್ಭದಲ್ಲಿ, ಮೂರು ದಿನಗಳ ವಿಶ್ರಾಂತಿ ಮತ್ತು ಮೃದುವಾದ ಆಹಾರ

ಡೆಂಗ್ಯೂಗೆ, ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳು ಸೂಚಿಸಿದ ಔಷಧಿಗಳು, ದ್ರವ ಪದಾರ್ಥಗಳ ಸೇವನೆ 

LEAVE A REPLY

Please enter your comment!
Please enter your name here