Home Uncategorized ಮಹದೇವ್ ಬೆಟ್ಟಿಂಗ್ ಪ್ರಕರಣ: ಕಂಗನಾ ರಣಾವತ್ ಅಚ್ಚರಿಯ ಹೇಳಿಕೆ

ಮಹದೇವ್ ಬೆಟ್ಟಿಂಗ್ ಪ್ರಕರಣ: ಕಂಗನಾ ರಣಾವತ್ ಅಚ್ಚರಿಯ ಹೇಳಿಕೆ

35
0

ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್  (Kangana Ranaut)ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಮಹದೇವ್ ಬೆಟ್ಟಿಂಗ್ ಆಪ್ ಮಾಲೀಕರ ಮದುವೆಯಲ್ಲಿ ಪಾಲ್ಗೊಂಡಿರುವ ಮತ್ತು ಆ ಆಪ್ ಗೆ ಪ್ರಮೋಟ್ ಮಾಡಿದವರ ವಿರುದ್ಧ ಇಡಿ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಕರೆಯುತ್ತಿದೆ. ಈ ಕುರಿತು ಕಂಗನಾ ಮಾತನಾಡಿದ್ದಾರೆ. ಈ ಬೆಟ್ಟಿಂಗ್ ಆಪ್ ನವರು ನನ್ನನ್ನೂ ಅದರ ಭಾಗವಾಗುವಂತೆ ಕೇಳಿದ್ದರು. ನಾನು ಹೋಗಲಿಲ್ಲ ಎಂದಿದ್ದಾರೆ ಕಂಗನಾ.

ಖ್ಯಾತ ನಟ ರಣಬೀರ್ ಕಪೂರ್, ಹಾಸ್ಯ ನಿರೂಪಕ ಕಪಿಲ್ ಶರ್ಮಾ (Kapil Sharma) ಸೇರಿದಂತೆ ಬಿಟೌನ್‍ನ ಒಟ್ಟು 34 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಮಹದೇವ್ ಆನ್ ಲೈನ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ (Notice) ಜಾರಿ ಮಾಡಿದ್ದು, ಮೊನ್ನೆಯಿಂದಲೇ ಹಲವರಿಗೆ ವಿಚಾರಣೆಗೆ ಕರೆದಿದೆ.

ಕೇವಲ ಕಪಿಲ್ ಶರ್ಮಾಗೆ ಮಾತ್ರವಲ್ಲ, ರಣಬೀರ್ ಕಪೂರ್, ಶ್ರದ್ಧಾ ಕಪೂರ್ (Shraddha Kapoor), ಹುಮಾ ಖುರೇಷಿ ಹಾಗೂ ಹೀನಾ ಖಾನ್ ಸೇರಿದಂತೆ ಹಲವರಿಗೆ ಇಡಿ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ಒಟ್ಟು 17 ಬಾಲಿವುಡ್ ಸಿಲಿಬ್ರಿಟಿಗಳಿಗೆ ನೋಟಿಸ್ ನೀಡಿದ್ದಾರೆ ಎಂದು ನಿನ್ನೆ ತಿಳಿದು ಬಂದಿತ್ತು. ಆದರೆ, ಈವರೆಗೂ 34 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಂತ ಹಂತವಾಗಿ ಇವರನ್ನು ವಿಚಾರಣೆಗೆ ಕರೆಯಲಾಗುತ್ತಿದೆ.

The post ಮಹದೇವ್ ಬೆಟ್ಟಿಂಗ್ ಪ್ರಕರಣ: ಕಂಗನಾ ರಣಾವತ್ ಅಚ್ಚರಿಯ ಹೇಳಿಕೆ appeared first on Ain Live News.

LEAVE A REPLY

Please enter your comment!
Please enter your name here