ಬೆಂಗಳೂರು: ಹಳ್ಳಿ ಕಡೆ ಮಳೆ ಬಂದ್ರೆ ಹೊಸ ಕಳೆ ಬರುತ್ತೆ. ಆದ್ರೆ ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದ್ರೆ ಇರೋ ಕಳೆನೂ ಮಾಯವಾಗಿ ಅವಾಂತರದ ದರ್ಶನವಾಗುತ್ತೆ. ನಿನ್ನೆಯು ಕೆಲಸ ಮುಗಿಸಿ ನೆಮ್ಮದಿಯಲ್ಲಿ ಮನೆ ಸೇರೋಣ ಅಂತ ಹೊರಟಿದ್ದ ಸಿಲಿಕಾನ್ ಸಿಟಿ ಮಂದಿಗೆ ಎದುರಾದ ವರುಣ ಗಂಟೆಗಟ್ಟಲೇ ಟ್ರಾಫಿಕ್ನಲ್ಲಿ ಸಿಲುಕಿಸಿ ಶಾಕ್ ಕೊಟ್ಟಿಟ್ಟು. ಅಷ್ಟ ಅಲ್ಲದೆ ಎಲ್ಲೆಂದ್ರಲ್ಲಿ ಸಿಕ್ಕಾಪಟ್ಟೆ ಮಳೆ ಸುರಿದು ಅವಾಂತರಗಳನ್ನೇ ಸೃಷ್ಟಿಸಿದ್ದಾನೆ ಮಳೆರಾಯ. ಹಾಗಾದ್ರೆ ರಾತ್ರಿ ಸುರಿದ ಮಳೆ ಎಲ್ಲೆಲ್ಲೆ ಅವಾಂತರ ಸೃಷ್ಟಿಸಿದ್ದಾನೆ ಬನ್ನಿ ಹೇಳ್ತಿವಿ
CM Siddaramaiah: ಪಟಾಕಿ ಸಿಡಿಸುವಾಗ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡ ಕವಿಯಲು ಆರಂಭಿಸಿತು ಅಂದ್ರೆ ತಗ್ಗು ಪ್ರದೇಶದ ಜನರಿಗತೆ ಢವ ಢವ ಶುರುವಾಗುತ್ತೆ. ಇನ್ನೂ ರಾತ್ರಿ ವೇಳೆ ಮಳೆ ಶುರುವಾದ್ರೆ ಅವ್ರಗೆ ನಿದ್ರೆ ಅಂತೂ ಕನಸಿನ ಮಾತು. ಹೌದು ಕಳೆದ ರಾತ್ರಿಯೂ ಆಗಿದ್ದು ಸಹ ಇದೇ. ನಿನ್ನೆ ರಾತ್ರಿ ನಗರದಲ್ಲಿ ಮಳೆ ಸೃಷ್ಟಿಸಿರೋ ಅವಾಂತರ ಅಷ್ಟಿಷ್ಟಲ್ಲ. ರಾತ್ರಿ ಪೂರ್ತಿ ಗುಡುಗು-ಮಿಂಚಿನ ಅಬ್ಬರದ ಜೊತೆಗೆ ಧಾರಾಕಾರವಾಗಿ ಮಳೆಯಾಗಿದ್ದು, ಮಳೆಯ ಹೊಡೆತಕ್ಕೆ ಬೆಂಗಳೂರು ಜನತೆ ತತ್ತರಗೊಂಡಿದ್ದಾರೆ. ಇನ್ನೂ ಎಡೆಬಿಡದೇ ಸುರಿದ ಮಳೆಗೆ ಪ್ರಮುಖ ರಸ್ತೆಗಳೆಲ್ಲವೂ ಹೊಳೆಯಂತಾಗಿದ್ದು, ಟ್ರಾಫಿಕ್‌ಜಾಮ್ ಉಂಟಾಗಿ ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪೋಲಿಸರು ಸಹ ಹರಸಾಹಸ ಪಟ್ಟಿದ್ದಾರೆ.
ಫ್ಲೋ..
ನಗರದಲ್ಲಿ ಎಡಬಿಡದ ಸುರಿದ ಮಳೆಯಿಂದ ನಗರದ ರಸ್ತೆಗಳಲ್ಲಿ, ಚರಂಡಿ, ಅಂಡರ್ ಪಾಸ್ ಸೇರಿದಂತೆ ಎಲ್ಲಿ ನೋಡಿದ್ರೂ ನೀರು ತುಂಬಿತ್ತು. ಮಳೆ ಬಂದ್ರೆ ಇಳೆಗೆ ಜೀವ ಕಳೆ. ಆದ್ರೆ ಅದೇ ಮಳೆ ಸಿಲಿಕಾನ್ ಸಿಟಿ, ಐಟಿ ಹಬ್ ಅಂತೆಲ್ಲ ಕರೆಸಿಕೊಳ್ಳೋ ಬೆಂಗಳೂರಲ್ಲಿ ಬಂದ್ರೆ ಇರೋ ಕಳೆನೂ ಮಾಯವಾಗಿ ಹೋಗುತ್ತೆ. ತಡರಾತ್ರಿ ರಾಜ್ಯ ರಾಜಧಾನಿಯಲ್ಲಿ ಎಡೆಬಿಡದೇ ಸುರಿದ ಮಳೆ ಬೆಂಗಳೂರಿಗರ ನಿದ್ದೆಗೆಡಿಸಿದೆ.ನಿನ್ನೆ ಸಂಜೆ ಹೊತ್ತಿಗೆ ರಾಜಧಾನಿಗೆ ಎಂಟ್ರಿಕೊಟ್ಟ ಮಳೆರಾಯ ಹೊಸ ಇನ್ನಿಂಗ್ಸ್ ಶುರುಮಾಡಿದ್ದ. ಅರ್ಧ ಅರ್ಧ ಗಂಟೆ ರೆಸ್ಟ್ ತಗೆದುಕೊಂಡು ಮತ್ತೆ ಫೀಲ್ಡ್ಗಿಳಿಯುತ್ತಿದ್ದ ವರುಣಾ ಧೋ ಅಂತ ಅಬ್ಬರಿಸಿದ್ದ. ಹೋಗುವಷ್ಟು ಹೋಗಿ ಇನ್ನೆಲ್ಲಿದೆ ದಾರಿ ಅಂತ ಚರಂಡಿಗಳು ಬಂದ್ ಆದ ಬಳಿಕ ಮಳೆ ನೀರು ರಸ್ತೆಗಳಿಗೆ ಲಗ್ಗೆ ಇಟ್ಟಿತ್ತು. ರಾತ್ರೋರಾತ್ರಿ ಹೊಳೆಯಾಗಿ ಪ್ರಮೋಷನ್ ಪಡೆದ ಬೆಂಗಳೂರಿನ ಹಲವು ರಸ್ತೆಗಳು, ವಾಹನ ಸಾವರರನ್ನ ಇನ್ನಿಲ್ಲಂದಂತೆ ಕಾಡಿದ್ವು. ಆ ರಸ್ತೆಯಲ್ಲಿ ಉಂಟಾದ ಅದ್ವಾನವನ್ನ ಒನ್ ಬೈ ಒನ್ ತೋರಿಸ್ತೀವಿ ನೋಡಿ.
ಏರ್ಪೋರ್ಟ್ ರಸ್ತೆ, ಹೆಬ್ಬಾಳ ನೀರಿನಿಂದ ಜಲಾವೃತವಾದರೆ, ಶೇಷಾದ್ರಿಪುರಂ ಅಂಡರ್ ಪಾಸ್ ಜನರಿಗೆ ಓಡಾಡಲು ಆಗದ ರೀತಿ ನೀರಿನಿಂದ ಭರ್ತಿಯಾಗಿತ್ತು. ಮಾರತ್ತಹಳ್ಳಿ, AECS ಲೇಔಟ್ ರಸ್ತೆಯಲ್ಲಿ ಜಲಧಾರೆ ಧುಮ್ಮುಕ್ಕಿತು. ಜಲಯಮಯವಾದ ಔಟರ್ ರಿಂಗ್ ರೋಡ್, ದೇವರಬಿಸನಹಳ್ಳಿ, ನೈಸ್ ರೋಡ್ ಜಂಕ್ಷನ್ ನದಿಯಂತೆ ಆಗಿದ್ದವು. ಇದು ರಸ್ತೆಗಳ ಕತೆ ಆದ್ರೆ, ಇನ್ನೂ ಕಟ್ಟಡಗಳಿಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಳೆರಾಯ ಸೃಷ್ಟಿಸಿದ ಅವಾಂತರ ನಿನ್ನೆ ಹಲವೆಡೆ ಬೆಂಗಳೂರಿಗರ ಚಳಿ ಬಿಡಿಸಿತ್ತು. ಸುಮಾರು ಮೂರ್ನಾಲ್ಕು ತಾಸುಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಮುಖ್ಯರಸ್ತೆಗಳು, ಅಂಡರ್‌ಪಾಸ್ ಹಾಗೂ ಮೇಲ್ಸೇತುವೆಗಳಲ್ಲಿ ಅಡಿಗಟ್ಟಲೇ ನಿಂತಿದ್ದ ಮಳೆ ನೀರನ್ನು ತಗ್ಗಿಸಲು ಸಂಚಾರ ಪೊಲೀಸರು ಹರಸಾಹಸಪಟ್ಟರು. ಸುರಿಯುತ್ತಿದ್ದ ಮಳೆಯಲ್ಲಿಯೇ ನೀರು ಹರಿವಿಗೆ ಅಡ್ಡಿಯಾಗಿದ್ದ ಕಸ-ಕಡ್ಡಿಯನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ..?=
ಇನ್ನೂ ನಗರದಲ್ಲಿ ನಗರದೆಲ್ಲಡೆ ಭಾರಿ ಮಳೆ ಆಯ್ತು. ನಗರದ ಚೌಡೇಶ್ವರಿನಗರದಲ್ಲಿ 36 ಮಿ.ಮೀ, ಅಟ್ಟೂರು 27 ಮಿ.ಮೀ, ಯಲಹಂಕ 25 ಮಿ.ಮೀ, ಹೊರಮಾವು 40 ಮಿ.ಮೀ , ಬಾಗಲಗುಂಟೆ 43 ಮಿ.ಮೀ, ದೊಡ್ಡಬಿದರಕಲ್ಲು42 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 54 ಮಿ.ಮೀ, ಕೆಂಗೇರಿ 65 ಮಿ.ಮೀ, ನಾಗಪುರ 50 ಮಿ.ಮೀ, ಕೊಟ್ಟಿಗೆಪಾಳ್ಯ48 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 25 ಮಿ.ಮೀ, ವಿ.ವಿ.ಪುರಂ 20 ಮಿ.ಮೀ, ಆರ್.ಆರ್.ನಗರ 35 ಮಿ.ಮೀ, ಉತ್ತರಹಳ್ಳಿ 27 ಮಿ.ಮೀ, ಎಚ್.ಗೊಲ್ಲಹಳ್ಳಿ62 ಮಿ.ಮೀ, ಹೊರಮಾವು 38 ಮಿ.ಮೀ, ವಿದ್ಯಾಪೀಠ 27 ಮಿ.ಮೀ, ಬಿಟಿಎಂ ಲೇಔಟ್ 30 ಮಿ.ಮೀ, ಕೋಣನಕುಂಟೆ 27 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 28 ಮಿ.ಮೀ ಮಳೆಯಾಗಿದೆ. ಇನ್ನೂ ನೆರೆ ರಾಜ್ಯ ಆಂಧ್ರ ಪ್ರದೇಶದ ರಾಯಲ್ ಸೀಮಾ ಭಾಗದಿಂದ ತಮಿಳುನಾಡು ಮಾರ್ಗವಾಗಿ ಕನ್ಯಾಕುಮಾರಿ 1.5 ಕಿ.ಮೀ ಮೇಲ್ಮೈ ಸುಳಿಗಾಳಿ ಹಾದು ಹೋಗಿದೆ. ಇದರ ಪ್ರಭಾವದಿಂದ ಕರ್ನಾಟಕದ ದಕ್ಷಿಣ ಒಳನಾಡಿನ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭಾರಿ ಮಳೆ ಆಗಲಿದೆ ಅಂತ ಹವಮಾನ ಇಲಾಖೆ ತಿಳಿಸಿದೆ.
ನಗರದಲ್ಲಡೆ ಮಳೆ ನಿಂತರೂ ಸಹ ಮಳೆ ಹನಿ ಮಾತ್ರ ನಿಂತಿಲ್ಲ. ಕಳೆದ ರಾತ್ರಿಯ ಮಳೆ ಅವಾಂತರಗಳನ್ನ ಸೃಷ್ಟಿಮಾಡಿದ್ದಾನೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಅಂದ್ರೆ ಬ್ರ್ಯಾಂಡ್ ಬೆಂಗಳೂರು ಕಥೆ ಅಂತರಾಷ್ಟ್ರಿಯ ಮಟ್ಟದಲ್ಲಿ ಹರಾಜು ಆಗೋದು ಅಂತೂ ಸತ್ಯ
The post ಮಹಾ ಮಳೆಗೆ ಮತ್ತೆ ಬೆಚ್ಚಿಬಿದ್ದ ಬೆಂಗಳೂರು: BBMP ಇನ್ನಾದ್ರೂ ಗುಂಡಿಗಳನ್ನ ಮುಚ್ಚುತ್ತಾ? appeared first on Ain Live News.