Home Uncategorized ಮಹಿಳೆಯರಿಗೆ ಚುನಾವಣೆ ಟಿಕೆಟ್ ನೀಡಿದವರು ಇಸ್ಲಾಂ ವಿರೋಧಿ: ಅಹಮದಾಬಾದ್‌ನ ಜಾಮಾ ಮಸೀದಿಯ ಶಾಹಿ ಇಮಾಮ್

ಮಹಿಳೆಯರಿಗೆ ಚುನಾವಣೆ ಟಿಕೆಟ್ ನೀಡಿದವರು ಇಸ್ಲಾಂ ವಿರೋಧಿ: ಅಹಮದಾಬಾದ್‌ನ ಜಾಮಾ ಮಸೀದಿಯ ಶಾಹಿ ಇಮಾಮ್

30
0

ಮುಸ್ಲಿಂ ಮಹಿಳೆಯರಿಗೆ(Muslim women) ಚುನಾವಣೆ ಟಿಕೆಟ್ ನೀಡಿದವರನ್ನು ಇಸ್ಲಾಂ ವಿರೋಧಿ (anti-Islamic)ಎನ್ನುವ ಮೂಲಕ ಗುಜರಾತ್‌ನ ಅಹಮದಾಬಾದ್‌ನ ಜಾಮಾ ಮಸೀದಿಯ ಶಾಹಿ ಇಮಾಮ್ ಶಬ್ಬೀರ್ ಅಹ್ಮದ್ ಸಿದ್ದಿಕಿ (Shabbir Ahmed Siddiqui) ವಿವಾದ್ಕಕೀಡಾಗಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆ ಯೊಂದಿಗೆ ಮಾತನಾಡಿದ ಅವರು, “ನೀವು ಇಸ್ಲಾಂ ಧರ್ಮದ ಬಗ್ಗೆ ಮಾತನಾಡುತ್ತಿದ್ದೀರಿ ಹಾಗಾಗಿ ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ. ಇಸ್ಲಾಂ ಮಹಿಳೆಯರಿಗೆ ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವಕಾಶ ನೀಡಿದರೆ,ಅವರನ್ನು ಮಸೀದಿ ಆವರಣದಿಂದ (ನಮಾಜ್ ಮಾಡುವುದಕ್ಕೆ) ನಿಷೇಧಿಸಲಾಗುವುದಿಲ್ಲ.ಮಸೀದಿಗಳಲ್ಲಿ ಅವರಿಗೆ ಅವಕಾಶವಿಲ್ಲ ಏಕೆಂದರೆ ಮಹಿಳೆಯರು ಇಸ್ಲಾಂನಲ್ಲಿ ಒಂದು ನಿರ್ದಿಷ್ಟ ಸ್ಥಾನವನ್ನು ಹೊಂದಿದ್ದಾರೆ. ಆದ್ದರಿಂದ ಮಹಿಳೆಯರಿಗೆ (ಚುನಾವಣೆ) ಟಿಕೆಟ್ ನೀಡುವವರು ಇಸ್ಲಾಮಿಕ್ ಮೌಲ್ಯಗಳ ವಿರುದ್ಧ ಬಂಡಾಯವೆದ್ದವರು. ನಿಮಗೆ ಯಾಕೆ ಮಹಿಳೆಯರು ಬೇಕು? ಪುರುಷರು (ರಾಜಕೀಯದಲ್ಲಿ) ಇಲ್ಲವೇ? ಇದು ನಮ್ಮ ಧರ್ಮವನ್ನು ದುರ್ಬಲಗೊಳಿಸುತ್ತದೆ.ನೀವು ಮಹಿಳೆಯರನ್ನು ಎಂಎಲ್‌ಎ, ಕೌನ್ಸಿಲರ್‌ಗಳನ್ನಾಗಿ ಮಾಡುವುದನ್ನು ಮುಂದುವರಿಸಿದರೆ ನಾವು ಹಿಜಾಬ್ ಅನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ ಅವರು ಕರ್ನಾಟಕದ ಹಿಜಾಬ್ ವಿವಾದವನ್ನೂ ಉಲ್ಲೇಖಿಸಿದ್ದಾರೆ. ಮಹಿಳೆಯರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದರಿಂದ ಅಂತಹ ವಿಷಯಗಳಲ್ಲಿ ನ್ಯಾಯಾಲಯದಲ್ಲಿ ನಮ್ಮ ವಾದವನ್ನು ದುರ್ಬಲಗೊಳಿಸುತ್ತದೆ ಏಕೆಂದರೆ ಮುಸ್ಲಿಂ ಮಹಿಳೆಯರು ಅಸೆಂಬ್ಲಿ ಹಾಲ್‌ಗಳು, ಸಂಸತ್ತು, ಪುರಸಭೆಗಳ ಭಾಗವಾಗುತ್ತಿದ್ದಾರೆ ಎಂದು ನ್ಯಾಯಾಲಯವು ಹೇಳುತ್ತದೆ.

#WATCH | Those who give election tickets to Muslim women are against Islam, weakening the religion. Are there no men left?: Shabbir Ahmed Siddiqui, Shahi Imam of Jama Masjid in Ahmedabad#Gujarat pic.twitter.com/5RpYLG7gqW

— ANI (@ANI) December 4, 2022

“ನಮ್ಮ ದೇಶದಲ್ಲಿ ನಿರ್ದಿಷ್ಟ ಕ್ಷೇತ್ರದಿಂದ ಮಹಿಳೆಯರು ಮಾತ್ರ ಸ್ಪರ್ಧಿಸಬಹುದು ಎಂದು ಕಡ್ಡಾಯಗೊಳಿಸುವ ಕೆಲವು ಕಾನೂನು ಇದ್ದಿದ್ದರೆ ಬಲವಂತದಿಂದ ಅದನ್ನು ಅನುಮತಿಸಬಹುದಿತ್ತು. ಆದರೆ ಅನಗತ್ಯವಾಗಿ ಮಹಿಳೆಯರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಶಾಹಿ ಇಮಾಮ್ ದೆಹಲಿ ಎಂಸಿಡಿ ಚುನಾವಣೆಯನ್ನು ಉಲ್ಲೇಖಿಸಿದ್ದು ಪಕ್ಷಗಳು ಮಹಿಳೆಯರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತವೆ ಮತ್ತು ಟೋಕನಿಸಂಗಾಗಿ ಮಾತ್ರ ಅವರಿಗೆ ಟಿಕೆಟ್ ನೀಡುತ್ತವೆ ಎಂದು ಆರೋಪಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

LEAVE A REPLY

Please enter your comment!
Please enter your name here