ಬೆಂಗಳೂರು : ಸ್ವಚ್ಚ ಬೆಂಗಳೂರಿನ ಅಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಒಂದು ಸಾವಿರ ಕೋಟಿ ರೂ.ಗಳ ಅನುದಾನವನ್ನು ಬಿಬಿಎಂಪಿ ಬಜೆಟ್ ನಲ್ಲಿ ಮೀಸಲಿರಿಸಲಾಗಿದ್ದು, ಮಹಿಳೆಯರ ನೈರ್ಮಲ್ಯಕ್ಕೆ ಪ್ರಾಮುಖ್ಯತೆ ನೀಡಿ 100 ‘ಶಿ ಟಾಯ್ಲೆಟ್’ ನಿರ್ಮಿಸುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ.
ನಗರದಲ್ಲಿ ತ್ಯಾಜ್ಯವನ್ನು ಸಂಸ್ಕರಿಸಲು 50 ರಿಂದ 100 ಎಕರೆಗಳಷ್ಟನ್ನು ನಗರದ 4 ದಿಕ್ಕುಗಳಲ್ಲಿ ಜಮೀನುಗಳನ್ನು ಗುರುತಿಸಿ ಅದರ ಖರೀದಿಗಾಗಿ 100 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಸ್ವಚ್ಛತೆಯನ್ನು ಉತ್ತೇಜಿಸಲು 2024-25 ಸಾಲಿನಲ್ಲಿ ಒಬ್ಬ ಪೌರಕಾರ್ಮಿಕರಿಗೆ ‘ಶರಣೆ ಸತ್ಯಕ್ಕ’ ಪ್ರಶಸ್ತಿಗಳನ್ನು ನೀಡಲು ಉದ್ದೇಶಿಸಿದ್ದು, ಪಾಲಿಕೆಯಿಂದ ಆಚರಿಸುವ ಪೌರ ಕಾರ್ಮಿಕ ದಿನಾಚರಣೆಯಂದು ನೀಡಿ ಗೌರವಿಸಲು ಯೋಜಿಸಲಾಗಿದೆ.