ಮೈಸೂರು: ಮಹಿಷಾ ದಸರಾ ಸಂಬಂಧ ಮೈಸೂರಲ್ಲಿ ದಿನದಿಂದ ದಿನಕ್ಕೆ ವಾಗ್ಯುದ್ಧ ಜೋರಾಗಿದೆ. ಅಕ್ಚೋಬರ್ 13ರಂದು ನಡೆಸಲು ಉದ್ದೇಶಿಸಿರುವ ಮಹಿಷಾ ದಸರಾ ಆಚರಣೆ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ಹಮ್ಮಿ ಕೊಂಡಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ಡೋಂಗಿ ರಾಜಕಾರಣಿ.
ಕಿಡಿ ಹತ್ತಿಸುವ ಕೆಲಸ ಮಾಡುವ ರಾಜಕಾರಣಿ. ಲೋಕಸಭಾ ಚುನಾವಣೆ ಬರುತ್ತಿದೆ. ಅವರು ಕ್ಷೇತ್ರಕ್ಕೆ ಮಾಡಿರುವ ಕೆಲಸ ಶೂನ್ಯ. ಈಗ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೈಸೂರಿಗೆ 400 ಆರ್ ಎಸ್ಎಸ್ ಕಾರ್ಯಕರ್ತರು ವಿವಿಧ ರಾಜ್ಯದಿಂದ ಬಂದಿದ್ದಾರೆ. ಬೇರೆ ಕಡೆಯಿಂದ ಮೈಸೂರಿಗೆ ಕರೆದುಕೊಂಡು ಬಂದಿದ್ದು ಯಾಕೆ? ಮಹಿಷಾ ಪೂಜೆ ಮಾಡಬೇಡ ಅಂತ ಹೇಳಲು ನೀನ್ಯಾರು? ಹಿಂದುಳಿದ ದಲಿತ ಸಮುದಾಯದವರು ಮಹಿಷಾ ಪೂಜೆ ಮಾಡಿದರೆ ನಿಮ್ಮ ಸಮಸ್ಯೆ ಏನು ಎಂದು ಪ್ರಶ್ನಿಸಿದರು.
Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್ ಅಪೆ ಡೇಟ್: ಏನಂತೀರಾ?!
ಚಾಮುಂಡೇಶ್ವರಿ ವಿರುದ್ಧ ಏನಾದ್ರು ಮಾಡಿದ್ರೆ ಹೇಳಿ ಆಗ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಮ ಸರ್ಕಾರ ಇದ್ದಾಗ ಮಹಿಷಾಸುರನ ಪ್ರತಿಮೆ ತೆಗೆಸಬೇಕಾಗಿತ್ತು. ಮಹಿಷಾ ಟೆರರಿಸ್ಟಾ? ಮಹಿಷಾ ನಿಮ್ಮ ಫ್ಯಾಮಿಲಿಗೆ, ಬಿಜೆಪಿಗೆ ಏನು ಸಮಸ್ಯೆ ಮಾಡಿದ್ರು.? ಮಹಿಷಾ ಒಬ್ಬ ರಾಜನಾಗಿದ್ದ, ಈಗ ಯಾಕೆ ಗೊಂದಲ ಸೃಷ್ಟಿ ಮಾಡ್ತಿದ್ದೀರಿ. ದಸರಾಕ್ಕೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ಲಾನ್ ಮಾಡಿದ್ದಾರೆ ಎಂದು ಎಂ ಲಕ್ಷ್ಮಣ್ ಗುಡುಗಿದರು.
The post ಮಹಿಷಾ ಪೂಜೆ ಮಾಡಬೇಡ ಅಂತ ಹೇಳಲು ನೀನ್ಯಾರು?: ಪ್ರತಾಪ್ ಸಿಂಹ ವಿರುದ್ಧ ಲಕ್ಷ್ಮಣ್ ವಾಗ್ದಾಳಿ appeared first on Ain Live News.