Home Uncategorized ಮಾನವ ಕಳ್ಳಸಾಗಾಣಿಕೆ ಶಂಕಿತ ವಿಮಾನದಲ್ಲಿ ವಾರಸುದಾರರಿಲ್ಲದ 2 ವರ್ಷದ ಮಗು!

ಮಾನವ ಕಳ್ಳಸಾಗಾಣಿಕೆ ಶಂಕಿತ ವಿಮಾನದಲ್ಲಿ ವಾರಸುದಾರರಿಲ್ಲದ 2 ವರ್ಷದ ಮಗು!

20
0

ಅಹ್ಮದಾಬಾದ್: ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ ಫ್ರಾನ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ ವಿಶೇಷ ವಿಮಾನದಲ್ಲಿ ಗುಜರಾತ್ ಮೂಲದ ಎರಡು ವರ್ಷ ಪ್ರಾಯದ ವಾರಸುದಾರರಿಲ್ಲದ ಮಗು ಇತ್ತು ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಮಗು ಈಗ ನಾಪತ್ತೆಯಾಗಿದೆ.

ಮಗುವಿನ ಪೋಷಕರು ಅಥವಾ ಪಾಲಕರನ್ನು ಪತ್ತೆ ಮಾಡಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಮಗು ಮಾನವ ಕಳ್ಳಸಾಗಾಣಿಕೆದಾರರ ಜಾಲದಲ್ಲಿ ಸಿಲುಕಿತ್ತೇ ಎನ್ನುವ ಬಗ್ಗೆಯೂ ವಿಚಾರಣೆ ಆರಂಭಿಸಿದ್ದಾರೆ. ಅಮೆರಿಕ- ಕೆನಡಾ ಗಡಿಯಲ್ಲಿ ಬಿಟ್ಟುಹೋಗಲ್ಪಡುವ ಹಲವಾರು ಅನಾಥ ಮಕ್ಕಳ ಸ್ಥಿತಿ ಈ ಮಗುವಿನದ್ದೂ ಆಗಿರುವ ಸಾಧ್ಯತೆ ಇರಬಹುದೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಉತ್ತರ ಗುಜರಾತ್ ನಿಂದ ಹಲವು ಕುಟುಂಬಗಳು ಮನೆಗಳನ್ನು ತೊರೆದು ಹೋಗಿರುವ ಹಿನ್ನೆಲೆಯಲ್ಲಿ ಮಗು ಮತ್ತು ಆತನ ಪೋಷಕ ಅಥವಾ ಪಾಲಕರನ್ನು ಪತ್ತೆ ಮಾಡುವ ಪ್ರಯತ್ನ ಆರಂಭಿಸಿದ್ದೇವೆ ಎಂದು ಗುಜರಾತ್ ಸಿಐಡಿ ಪೊಲೀಸರು ಹೇಳಿದ್ದಾರೆ.

ನಿಕರಾಗುವಕ್ಕೆ ತೆರಳುತ್ತಿದ್ದ ವಿಮಾನದಲ್ಲಿ 303 ಮಂದಿ ಪ್ರಯಾಣಿಕರಿದ್ದು, ಈ ಪೈಕಿ 96 ಮಂದಿ ಗುಜರಾತ್ ನವರಾಗಿದ್ದರು. ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ ಪೊಲೀಸರು ಫ್ರಾನ್ಸ್ ನಲ್ಲಿ ವಿಮಾನವನ್ನು ವಶಕ್ಕೆ ಪಡೆದಿದ್ದರು. ಡಿಸೆಂಬರ್ 24ರಂದು ನ್ಯಾಯಾಲಯದ ಆದೇಶದಂತೆ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿತ್ತು. ಮುಂಬೈಗೆ ಮರಳಿದ ವಿಮಾನದಲ್ಲಿ ಕೇವಲ 276 ಮಂದಿ ಮಾತ್ರ ಇದ್ದರು.

ವಟ್ರಿ ವಿಮಾನ ನಿಲ್ದಾಣದಿಂದ ಭಾರತಕ್ಕೆ ಕಳುಹಿಸಲಾದ ಪ್ರಯಾಣಿಕರ ಪಟ್ಟಿಯಲ್ಲಿ 2021ರ ಆಗಸ್ಟ್ 2ರಂದು ಹುಟ್ಟಿದ ಗುಜರಾತ್ ನ ವಾರಸುದಾರರಿಲ್ಲದ ಒಂದು ಮಗು ಕೂಡಾ ಇದೆ. ಗುಜರಾತ್ ನ ಮೆಹ್ಸಾನಾ ಮತ್ತು ಗಾಂಧಿನಗರದ ಮಾನವ ಕಳ್ಳಸಾಗಾಣಿಕೆದಾರರು ಸಾಮಾನ್ಯವಾಗಿ ಬೇರೆ ಮಕ್ಕಳನ್ನು ನಿರ್ದಿಷ್ಟ ದಂಪತಿಯ ಮಗು ಎಂದು ಬಿಂಬಿಸಿ ಕಳ್ಳಸಾಗಾಣಿಕೆ ಮಾಡುತ್ತಾರೆ. ಮಕ್ಕಳು ಇರುವ ದಂಪತಿಗಳು ಎಂದು ಬಿಂಬಿಸುವ ಮೂಲಕ ಅಮೆರಿಕದಲ್ಲಿ ಸುಲಭವಾಗಿ ಆಶ್ರಯ ಪಡೆಯುವುದು ಈ ಕಾರ್ಯತಂತ್ರದ ಭಾಗವಾಗಿದೆ ಎಂದು ಮೂಲಗಳು ಹೇಳಿವೆ.

LEAVE A REPLY

Please enter your comment!
Please enter your name here