Home Uncategorized ಮಾರ್ಚ್ ಒಂದೇ ತಿಂಗಳಲ್ಲಿ 79,000 ಪಾಸ್'ಪೋರ್ಟ್ ವಿತರಣೆ, ದಾಖಲೆ

ಮಾರ್ಚ್ ಒಂದೇ ತಿಂಗಳಲ್ಲಿ 79,000 ಪಾಸ್'ಪೋರ್ಟ್ ವಿತರಣೆ, ದಾಖಲೆ

16
0

ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಈ ವರ್ಷದ ಮಾರ್ಚ್‌ ಒಂದೇ ತಿಂಗಳಿನಲ್ಲಿ ರಾಜ್ಯಾದ್ಯಂತ 79,027 ಪಾಸ್‌ಪೋರ್ಟ್‌ಗಳನ್ನು ವಿತರಿಸಿದೆ, ಇದು ಈವರೆಗಿನ ಗರಿಷ್ಠವಾಗಿದೆ. ಬೆಂಗಳೂರು: ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಈ ವರ್ಷದ ಮಾರ್ಚ್‌ ಒಂದೇ ತಿಂಗಳಿನಲ್ಲಿ ರಾಜ್ಯಾದ್ಯಂತ 79,027 ಪಾಸ್‌ಪೋರ್ಟ್‌ಗಳನ್ನು ವಿತರಿಸಿದೆ, ಇದು ಈವರೆಗಿನ ಗರಿಷ್ಠವಾಗಿದೆ.

2022 ರ ವರ್ಷದಲ್ಲಿ ಒಟ್ಟಾರೆ 7.27 ಲಕ್ಷ ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (RPO) ಕೆ ಕೃಷ್ಣ ಅವರು ಮಾತನಾಡಿ, “ಮಾರ್ಚ್‌ನಲ್ಲಿ ಬೇಡಿಕೆ ಸ್ವಲ್ಪ ಹೆಚ್ಚಾಗಿತ್ತು. ಇದೇ ತಿಂಗಳಿನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕೂಡ ತೆರವುಗೊಳಿಸಲಾಗಿದ್ದು, ಇದು ಈ ದಾಖಲೆಯ ಅಂಕಿಅಂಶವನ್ನು ಮುಟ್ಟಲು ನಮಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಪಾಸ್‌ಪೋರ್ಟ್ ಕಚೇರಿಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಮಾರು 70,000 ಮತ್ತು ಜನವರಿಯಲ್ಲಿ 71,000 ಕ್ಕೂ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ವಿತರಿಸಿತ್ತು. ಫೆಬ್ರವರಿ ತಿಂಗಳಿನಲ್ಲಿ ಕಡಿಮೆ ದಿನಗಳಿರುವುದರಿಂದ ಮಾರ್ಚ್ ತಿಂಗಳಿನಲ್ಲಿ ಸಾರ್ವಕಾಲಿಕ ಗರಿಷ್ಠ 79,027 ಪಾಸ್ ಪೋರ್ಟ್ ಗಳನ್ನು ವಿತರಿಸಲಾಗಿದೆ. 2019 ರ ಜೂನ್‌ನಲ್ಲಿ ಸುಮಾರು 74,000 ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿತ್ತು.

ಒಟ್ಟಾರೆಯಾಗಿ 8,03,714 ಪಾಸ್ ಪೋರ್ಟ್ ಗಳನ್ನು ವಿತರಿಸಲಾಗಿದ್ದು, ಇದರಲ್ಲಿ 4,63,766 ಪುರುಷರು, 3,39,946 ಮಹಿಳೆಯರು ಮತ್ತು ಇಬ್ಬರು ಟ್ರಾನ್ಸ್‌ಜೆಂಡರ್‌ಗಳಿಗೆ ನೀಡಲಾಗಿದೆ ಎಂದು ಆರ್‌ಪಿಒ ಮಾಹಿತಿ ನೀಡಿದ್ದಾರೆ.

ಕರ್ನಾಟಕದಾದ್ಯಂತ ಪ್ರತಿನಿತ್ಯ ಸರಾಸರಿ 3,700 ಅರ್ಜಿಗಳು ಬರುತ್ತಿದ್ದು, ಬೆಂಗಳೂರಿನಿಂದ ಗರಿಷ್ಠ ಅರ್ಜಿಗಳು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ, ಕಲಬುರಗಿ ಮತ್ತು ಮಂಗಳೂರಿನಲ್ಲಿರುವ ಐದು ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (ಪಿಎಸ್‌ಕೆ), ಬೆಂಗಳೂರಿನ ಎರಡು (ಲಾಲ್ ಬಾಗ್ ಮತ್ತು ಮಾರ್ತಹಳ್ಳಿ) ಜೊತೆಗೆ 23 ಪೋಸ್ಟಲ್ ಪಿಎಸ್‌ಕೆಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಪಾಸ್ ಪೋರ್ಟ್ ವಿತರಣೆ ಮಾಡಲು ಸರಾಸರಿ ಸಮಯವನ್ನು 9 ದಿನಗಳಿಗೆ ಇಳಿಸಲಾಗಿದೆ. ಬೇಡಿಕೆ ಕಡಿಮೆ ಇರುವ ಜಿಲ್ಲೆಗಳಲ್ಲಿ ಅತ್ಯಂತ ಶೀಘ್ರಗತಿಯಲ್ಲಿ ತಲುಪಿಸುವ ಕೆಲಸವಾಗುತ್ತಿದೆ. ಹುಬ್ಬಳ್ಳಿ ಅಥವಾ ಮಂಗಳೂರಿನಲ್ಲಿ ಬೇಡಿಕೆ ತೀರಾ ಕಡಿಮೆಯಿದ್ದು, ಅಲ್ಲಿ ಒಂದು ಅಥವಾ ಎರಡು ದಿನಗಳಲ್ಲಿ ಪಾಸ್‌ಪೋರ್ಟ್ ಪಡೆಯಬಹುದಾಗಿದೆ  ಎಂದು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here