Home Uncategorized ಮಿತ್ತಬೈಲು: ಉಚಿತ ವೈದ್ಯಕೀಯ ತಪಾಸಣೆ, ಹಿಜಾಮ ಮತ್ತು ರಕ್ತದಾನ ಶಿಬಿರ

ಮಿತ್ತಬೈಲು: ಉಚಿತ ವೈದ್ಯಕೀಯ ತಪಾಸಣೆ, ಹಿಜಾಮ ಮತ್ತು ರಕ್ತದಾನ ಶಿಬಿರ

42
0

ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಶಾಂತಿಅಂಗಡಿಯ ಇಮ್ದಾದ್ ಹೆಲ್ಫ್ ಲೈನ್ ಚಾರಿಟೇಬಲ್ ಟ್ರಸ್ಟ್ ಇದರ 7 ನೇ ವಾರ್ಷಿಕೋತ್ಸವದ ಅಂಗವಾಗಿ ಯೆನೆಪೋಯ ವೈದ್ಯಕೀಯ ಮತ್ತು ಡೆಂಟಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಿಗೆ ಬಂಟ್ವಾಳ ವಲಯ, ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಹಿಜಾಮ ಮತ್ತು ರಕ್ತದಾನ ಶಿಬಿರವು ಡಿ.31 ರಂದು ಮಿತ್ತಬೈಲು ಮುಹಿಯುದ್ದೀನ್ ಸಮುದಾಯ ಭವನದಲ್ಲಿ ಬೆಳಿಗ್ಗೆ 9 ರಿಂದ ನಡೆಯಲಿದೆ ಎಂದು ಇಮ್ದಾದ್ ಹೆಲ್ಫ್ ಲೈನ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಮುಸ್ತಫಾ ಪಿ.ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಬಿರದಲ್ಲಿ ಸಾಮಾನ್ಯ ಪರೀಕ್ಷೆ, ದಂತ, ಕಣ್ಣು, ಕಿವಿ, ಮೂಗು ಗಂಟಲು, ಎಲುಬು, ಹೆರಿಗೆ ಮತ್ತು ಪ್ರಸೂತಿ, ಹಾಗೂ ಮಕ್ಕಳ ತಜ್ಞ ವೈದ್ಯರುಗಳು ಭಾಗವಹಿಸಲಿದ್ದು ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲಾಗುವುದು. ಅಗತ್ಯ ಇರುವವರಿಗೆ ಔಷದಿ ಮತ್ತು ಕನ್ನಡದ ಉಚಿತವಾಗಿ ವಿತರಿಸಲಾಗುವುದು.

ಮಹಿಳೆಯರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಕ್ಲಿನಿಕ್ ಬಸ್ ನಲ್ಲಿ ತಪಾಸಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇದಲ್ಲದೇ ಈ ಕಾರ್ಯಕ್ರಮದಲ್ಲಿ ಹೆಲ್ತ್ ಕಾರ್ಡ್, ಅಭಾ ಕಾರ್ಡ್, ಆಧಾರ್ ನವೀಕರಣ, ತಿದ್ದುಪಡಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ವೋಟರ್ ಐಡಿ ಹಾಗೂ ಇನ್ನಿತರ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ, ಅರ್ಜಿಯನ್ನು ಉಚಿತವಾಗಿ ಸಲ್ಲಿಸಲಾಗುವುದು ಎಂದವರು ವಿವರಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here