ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಶಾಂತಿಅಂಗಡಿಯ ಇಮ್ದಾದ್ ಹೆಲ್ಫ್ ಲೈನ್ ಚಾರಿಟೇಬಲ್ ಟ್ರಸ್ಟ್ ಇದರ 7 ನೇ ವಾರ್ಷಿಕೋತ್ಸವದ ಅಂಗವಾಗಿ ಯೆನೆಪೋಯ ವೈದ್ಯಕೀಯ ಮತ್ತು ಡೆಂಟಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಿಗೆ ಬಂಟ್ವಾಳ ವಲಯ, ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಹಿಜಾಮ ಮತ್ತು ರಕ್ತದಾನ ಶಿಬಿರವು ಮಿತ್ತಬೈಲು ಮುಹಿಯುದ್ದೀನ್ ಸಮುದಾಯ ಭವನದಲ್ಲಿ ನಡೆಯಿತು.
ಶಿಬಿರವನ್ನು ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹಾಜಿ ಎಂ.ವೈ. ಅಶ್ರಫ್ ಫೈಝಿ ಉದ್ಘಾಟಿಸಿದರು, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಕೆ.ಪಿ. ಇರ್ಶಾದ್ ದಾರಿಮಿ ಅಲ್ ಜಝ್ಹರಿ ದು:ಹಾ ನೆರವೇರಿಸಿ, ಇಮ್ದಾದ್ ಹೆಲ್ಫ್ ಲೈನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ.ಬಿ.ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು.
ಮಿತ್ತಬೈಲು ಎಂ.ಜೆ.ಎಂ ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ, ಅದ್ಯಕ್ಷ ಅಬ್ದುಲ್ ರಹಿಮಾನ್ ಎಸ್.ಎಚ್, ಉದ್ಯಮಿ ಲತೀಫ್ ಗುರುಪುರ, ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯರಾದ ಹಸೈನಾರ್ ತಾಳಿಪಡ್ಪು, ಲುಕ್ಮಾನ್ ಕೈಕಂಬ, ಅಖಿಲ ಭಾರತ ಬ್ಯಾರಿ ಪರಿಷತ್ ಉಪಾಧ್ಯಕ್ಷ ಇ.ಕೆ.ಎ. ಸಿದ್ದೀಕ್ ಅಡ್ಡೂರು, ಮಂಗಳೂರು ಸೀ ಫುಡ್ ಬೈಯರ್ಸ್ ಎಸೋಸಿಯೇಶನ್ ಅದ್ಯಕ್ಷ ಇಬ್ರಾಹಿಂ ಎಸ್.ಎಂ, ವೈದ್ಯರುಗಳಾದ ಡಾ.ರಶ್ಮಿ ಜೈನ್, ಡಾ.ಅಶ್ವಿನಿ ಶೆಟ್ಟಿ, ಡಾ.ಇಮ್ರಾನ್ ಪಾಷಾ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟ್ ಕಾರ್ಯದರ್ಶಿ ಆದಂ ಪಲ್ಲ, ಪ್ರಮುಖರಾದ ಇಬ್ರಾಹಿಂ ಪಲ್ಲ, ರಫೀಕ್ ಪರ್ಲಿಯ, ಜಮಾಲ್ ಎ.ವನ್, ಮುಹಮ್ಮದ್ ಅದ್ದೇಡಿ. ಎಸ್.ಎಂ.ಮುಹಮ್ಮದ್ ಅಲಿ, ಇಬ್ರಾಹಿಂ , ಮನ್ಸೂರ್ ಮಜಲ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಮಂಗಳೂರಿನ ಯುವ ಉದ್ಯಮಿ ಲತೀಫ್ ಗುರುಪುರ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ 55 ಮಂದಿ ರಕ್ತದಾನ ಮಾಡುವ ಮೂಲಕ ಜೀವದಾನಿ ಗಳಾದರು, 225 ಮಂದಿ ಹಿಜಾಮಾ, 410 ಮಂದಿ ಜನರು ಉಚಿತ ವೈದ್ಯಕೀಯ ತಪಾಸಣೆಯ ಪ್ರಯೋಜನವನ್ನು ಪಡೆದುಕೊಂಡರು. ಭದ್ರಾ ಗ್ಯಾಸ್ ಏಜೆನ್ಸಿಯವರಿಂದ ಭಾರತ್ ಅನಿಲ ಸಂಪರ್ಕದ ಕೆವೈಸಿ ಮಾಡಲಾಯಿತು.
ಹೆಲ್ತ್ ಕಾರ್ಡ್, 50 ಅಭಾ ಕಾರ್ಡ್, ಆಧಾರ್ ನವೀಕರಣ, ತಿದ್ದುಪಡಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ವೋಟರ್ ಐಡಿ ಹಾಗೂ ಇನ್ನಿತರ ಸರಕಾರಿ ಯೋಜನೆಗಳ ಬಗ್ಗೆ ಅರ್ಜಿಯನ್ನು ಸಲ್ಲಿಸಲಾಯಿತು.
ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಸ್ವಾಗತಿಸಿ, ಮನ್ಸೂರ್ ಬಿ.ಸಿ. ರೋಡ್ ವಂದಿಸಿದರು. ಎಸ್ಕೆಎಸ್ಸೆಸ್ಸೆಫ್ ಕ್ಲಸ್ಟರ್ ಕಾರ್ಯದರ್ಶಿ ಖಲಂದರ್ ಕಾರ್ಯಕ್ರಮ ನಿರೂಪಿಸಿದರು.