Home Uncategorized ಮಿಸ್ಸೌರಿಯಲ್ಲಿನ ಮನೆಯೊಂದರಿಂದ 30 ವರ್ಷಗಳ ಹಿಂದೆ ರಾತ್ರೋರಾತ್ರಿ ಕಣ್ಮರೆಯಾದ ಮೂವರು ಮಹಿಳೆಯರು ಇನ್ನೂ ಪತ್ತೆಯಾಗಿಲ್ಲ!

ಮಿಸ್ಸೌರಿಯಲ್ಲಿನ ಮನೆಯೊಂದರಿಂದ 30 ವರ್ಷಗಳ ಹಿಂದೆ ರಾತ್ರೋರಾತ್ರಿ ಕಣ್ಮರೆಯಾದ ಮೂವರು ಮಹಿಳೆಯರು ಇನ್ನೂ ಪತ್ತೆಯಾಗಿಲ್ಲ!

41
0

ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವು ಮತ್ತೊಂದು ಇತ್ಯರ್ಥಗೊಳ್ಳದ ಕೊಲೆಗಳ ಪ್ರಕರಣವನ್ನು ನಿಮಗೆ ಹೇಳುತ್ತಿದ್ದೇವೆ. ಜೂನ್ 7, 1992 ಬೆಳಗಿನ ಜಾವ ಅಮೆರಿಕ ಮಿಸ್ಸೌರಿಯ ಸ್ಪ್ರಿಂಗ್ ಫೀಲ್ಡ್ ನಲ್ಲಿನ ಮನೆಯೊಂದರಿಂದ ಮೂವರು ಮಹಿಳೆಯರು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಹಿಂದಿನ ದಿನ ಅಂದರೆ ಜೂನ್ 6 ರಂದು 19-ವರ್ಷ-ವಯಸ್ಸಿನ ಸುಜೇನ್ ಸ್ಟ್ರೀಟರ್ ಮತ್ತು 18-ವರ್ಷ-ವಯಸ್ಸಿನ ಸ್ಟೇಸಿ ಮ್ಯಾಕ್ ಗಿಲ್ ತಮ್ಮ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗ್ರಾಜುಯೇಷನ್ ಡೇ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿ ಪಾರ್ಟಿ ಮಾಡಲು ಸ್ನೇಹಿತೆಯೊಬ್ಬಳ ಮನೆಗೆ ತೆರಳಿದ್ದರು. ಅದರೆ, ಸ್ನೇಹಿತೆಯ ಮನೆಯಲ್ಲಿ ಜನ ಜಾಸ್ತಿಯಾಗಿ ಅಲ್ಲಿನ ವಾತಾವರಣ ಗಲಾಟೆಮಯ ಅನಿಸಿದ್ದರಿಂದ ಅವರು ಸ್ಟ್ರೀಟರ್ ಮನೆಗೆ ವಾಪಸ್ಸಾದರು. ಸ್ಟ್ರೀಟರ್ ಅಮ್ಮ 47-ವರ್ಷ-ವಯಸ್ಸಿನ ಶೆರಿಲ್ ಎಲಿಜಬೆತ್ ಲೆವಿಟ್ ಅವರಿಗಾಗಿ ಕಾಯುತ್ತಿದ್ದಳು.

ಮರುದಿನ ಬೆಳಗ್ಗೆ ಸ್ಟ್ರೀಟರ್ ಮತ್ತು ಸ್ಟೇಸಿ ತಮ್ಮ ಇನ್ನಿತರ ಸ್ನೇಹಿತರೊಂದಿಗೆ ವಾಟರ್ ಪಾರ್ಕ್ ಗೆ ಹೋಗಬೇಕಿತ್ತು. ಹಾಗಾಗಿ, ಅವರನ್ನು ಪಿಕಪ್ ಮಾಡಲು ಸ್ನೇಹಿತರು ಸ್ಟ್ರೀಟರ್ ಮನೆಗೆ ಬಂದಾಗ ಮನೆಯಲ್ಲಿದ್ದ ಎಲ್ಲ ಮೂರು ಮಹಿಳೆಯರು ನಾಪತ್ತೆಯಾಗಿದ್ದರು. ಮನೆಯಲ್ಲಿ ಎಲ್ಲ ವಸ್ತುಗಳು ಯಥಾಸ್ಥಿತಿಯಲ್ಲಿದ್ದವು ಯಾವುದೂ ಚೆಲ್ಲಾಪಿಲ್ಲಿಯಾಗಿರಲಿಲ್ಲ. ಅವರ ಪರ್ಸ್ ಗಳು, ಮನೆಯ ಬೀಗದ ಕೈ, ನೀಟಾಗಿ ಮಡಿಚಿಟ್ಟಿದ್ದ ಬಟ್ಟೆಗಳು, ಸಿಗರೇಟುಗಳು-ಎಲ್ಲವೂ ತಮ್ಮ ತಮ್ಮ ಸ್ಥಾನದಲ್ಲಿದ್ದವು. ಕಾರುಗಳನ್ನು ಸಹ ಪಾರ್ಕಿಂಗ್ ಸ್ಥಳದಿಂದ ಹೊರತಂದು ಡ್ರೈವ್ ವೇನಲ್ಲಿ ನಿಲ್ಲಿಸಲಾಗಿತ್ತು. ಅಸಹಜವಾಗಿ ಕಂಡ ಒಂದೇ ಒಂದು ವಸ್ತುವೆಂದರೆ ಬಾಲ್ಕನಿಯ ಲ್ಯಾಂಪ್ ಶೇಡ್. ಅದು ಒಡೆದು ಕೆಳಗೆ ಬಿದ್ದಿತ್ತು. ಸ್ಟ್ರೀಟರ್ ಗೆಳತಿಯರಲ್ಲಿ ಒಬ್ಬಳ ಬಾಯ್ ಫ್ರೆಂಡ್ ಆಗಿದ್ದ ಯುವಕನೊಬ್ಬ ಅದನ್ನು ಗುಡಿಸಿ ಗಾರ್ಬೇಜ್ ಬಾಕ್ಸ್ ನಲ್ಲಿ ಹಾಕಿದ.

ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ಅಸಹಾಯಕ ಪುರುಷರನ್ನು ಬೇಟೆಯಾಡುತ್ತಿದ್ದ ಡೆನಿಸ್ ನಿಲ್ಸನ್, ಅವರನ್ನು ಕೊಂದು ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ!

ಸ್ಟ್ರೀಟರ್ ಮನೆಯ ಮುಖ್ಯದ್ವಾರ ತೆರೆದುಕೊಂಡೇ ಇತ್ತು. ಸ್ನೇಹಿತರನ್ನು ನೋಡಿದ ಸ್ಟ್ರೀಟರ್ ಸಾಕುನಾಯಿ ಸಿಡಿಮಿಡಿಗೊಂಡಿದ್ದು ನಿಜವಾದರೂ, ಅವರು ಅದರೆಡೆ ಗಮನ ಹರಿಸಲಿಲ್ಲ. ಮನೆಯಲ್ಲಿ ಎಲ್ಲ ಸರಿಯಾಗಿತ್ತು, ಆದರೆ ರಾತ್ರಿ ಅಲ್ಲೇ ಇದ್ದ ಮೂವರು ಮಹಿಳೆಯರು ಮಾತ್ರ ಎಲ್ಲೂ ಕಾಣಲಿಲ್ಲ.
ಅವರು ಇನ್ನೇನು ಅಲ್ಲಿಂದ ಹೊರಡಬೇಕು ಅನ್ನುವಾಗ ಮನೆಯಲ್ಲಿದ್ದ ಪೋನ್ (ಲ್ಯಾಂಡ್ ಲೈನ್) ರಿಂಗುಣಿಸತೊಡಗಿತ್ತು. ಸ್ಟ್ರೀಟರ್ ಗೆಳತಿ ಜೆನೆಲ್ ಹೆಸರಿನ ಯುವತಿ ಕರೆ ಫೋನ್ ಅಟೆಂಡ್ ಮಾಡಿದಳು.

ಸುಜೇನ್ ಸ್ಟ್ರೀಟರ್ ಮತ್ತು ಸ್ಟೇಸಿ ಮ್ಯಾಕ್​ಗಿಲ್

ಫೋನ್ ಮಾಡಿದವನು ತನ್ನ ಗುರುತು ಹೇಳದೆ ಸೆಕ್ಸ್ ಬಗ್ಗೆ ಮಾತಾಡಲಾರಂಭಿಸಿದ. ಅದೊಂದು ಪ್ರ್ಯಾಂಕ್ ಕಾಲ್ ಎಂದು ಭಾವಿಸಿದ ಜೆನೆಲ್ ಫೋನ್ ಡಿಸ್ಕನೆಕ್ಟ್ ಮಾಡಿದಳು. ನಂತರ ಸ್ನೇಹಿತರೆಲ್ಲ ಅಲ್ಲಿಂದ ಹೊರಟರು.
ಸ್ಟ್ರೀಟರ್, ಸ್ಟೇಸಿ ಮತ್ತು ಲೆವಿಟ್ ನಾಪತ್ತೆಯಾಗಿ ವಾರ, ತಿಂಗಳುಗಳು ಕಳೆದವು ಅದರೆ ಅವರು ಎಲ್ಲಿದ್ದಾರೆ, ಎಲ್ಲಿಗೆ ಹೋದರು ಅನ್ನೋದು ಮಾತ್ರ ಗೊತ್ತಾಗಲಿಲ್ಲ. ಡಿಸೆಂಬರ್ 1992ರಲ್ಲಿ ಒಬ್ಬ ಅನಾಮಧೇಯ ಮಾಹಿತಿದಾರನೊಬ್ಬ ಅಮೆರಿಕದ ಮೋಸ್ಟ್ ವಾಂಟೆಡ್ ಹಾಟ್ ಲೈನ್ ಗೆ ಫೋನ್ ಮಾಡಿ ಆ ಇತ್ಯರ್ಥಗೊಳ್ಳದ ಕೊಲೆಗಳ ಪ್ರಕರಣದ ಬಗ್ಗೆ ತನ್ನಲ್ಲಿ ಮಾಹಿತಿಯಿದೆ ಅಂತ ಹೇಳಿದ.

ಇದನ್ನೂ ಓದಿ: ಉತ್ತರ ಪ್ರದೇಶದ ಸನ್ವರ್ ಅಲಿ ಎಲ್ಲಾ ಅಡೆತಡೆಗಳನ್ನು ಹಿಂದಟ್ಟಿ ಇಂಡೋನೇಷ್ಯಾದ ಜನ್ನಾಹ್ ಳನ್ನು ಮದುವೆಯಾದ!

ಅವನ ಕರೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸುವಷ್ಟರಲ್ಲಿ ಅವನು ಪೋನ್ ಇಟ್ಟುಬಿಟ್ಟಿದ್ದ. 1997ರಲ್ಲಿ ಅಪಹರಣ, ದರೋಡೆ ಮತ್ತು ಫ್ಲೋರಿಡ ಕೊಲೆ ಪ್ರಕರಣದಲ್ಲಿ ಶಂಕಿತನಾಗಿ ಸೆರೆವಾಸದಲ್ಲಿದ್ದ ರಾಬರ್ಟ ಕ್ರೇಗ್ ಕಾಕ್ಸ್ ಹೆಸರಿನ ಅಪರಾಧಿಯು ಅ ಮೂವರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮದವರಿಗೆ ಹೇಳಿದ. ಆದರೆ ಅವನ ಹೇಳಿಕೆಗಳಲ್ಲಿ ಸ್ಥಿರತೆ ಕಂಡಿರಲ್ಲಲ್ಲ. ಅವನು ಹೇಳುತ್ತಿದ್ದಿದ್ದು ಸತ್ಯವೋ ಸುಳ್ಳೋ ಅಂತ ನಿರ್ಧರಿಸುವುದು ಕಷ್ಟವಾಗಿತ್ತು.

ಆಸ್ಪತ್ರೆಯೊಂದರ ಪಾರ್ಕಿಂಗ್ ಲಾಟ್ ಅಡಿಯಲ್ಲಿ ಮೂವರು ಮಹಿಳೆಯರ ದೇಹಗಳನ್ನು ಹೂತು ಹಾಕಲಾಗಿದೆ ಎಂದು ಮತ್ಯಾವುನೋ ಪೊಲೀಸರಿಗೆ ಸುಳಿವು ನೀಡಿದ್ದ. ಒಬ್ಬ ಕ್ರೈಮ್ ರಿಪೋರ್ಟರ್ ಮತ್ತು ಒಬ್ಬ ಮೆಕ್ಯಾಮಿಕಲ್ ಎಂಜಿನೀಯರ್ ಪಾರ್ಕಿಂಗ್ ಲಾಟನ್ನು ಭೂಮಿ ತಳಭಾಗವನ್ನು ಸ್ಕ್ಯಾನ್ ಮಾಡುವ ಮಶೀನ್ ನಿಂದ ತಡಕಾಡಿದರೂ ದೇಹದ ಅವಶೇಷಗಳು ಕಾಣಲಿಲ್ಲ. ಸ್ಕ್ಯಾನ್ ವರದಿಯಲ್ಲಿ ಏನೂ ಕಾಣಿಸದ ಕಾರಣ ಕಾಂಕ್ರೀಟ್ ಅಗಿಯುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದ ಸ್ಪ್ರಿಂಗ್ ಫೀಲ್ಡ್ ಪೊಲೀಸ್ ಹೇಳಿಕೆ ನೀಡಿತು.

ಅಲ್ಲಿಗೆ ತನಿಖಾಧಿಕಾರಿಗಳು ಸಹ ಪ್ರಕರಣದಿಂದ ಕೈಚೆಲ್ಲಿದರು.

ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here