Home ಮೈಸೂರು ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಮೋಸದಾಟ ಬಯಲು: ಮೋದಿ, ಬೊಮ್ಮಾಯಿಗೆ 9 ಪ್ರಶ್ನೆ ಕೇಳಿದ ಸುರ್ಜೆವಾಲ

ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಮೋಸದಾಟ ಬಯಲು: ಮೋದಿ, ಬೊಮ್ಮಾಯಿಗೆ 9 ಪ್ರಶ್ನೆ ಕೇಳಿದ ಸುರ್ಜೆವಾಲ

48
0
Randeep Surjewala
Randeep Surjewala

ಮೈಸೂರು:

ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಮೋಸದಾಟ ಬಯಲಾಗಿದೆ. ಇದು ಡಬಲ್‌ ಇಂಜಿನ್ ಸರ್ಕಾರದ ದ್ರೋಹವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ ಅವರು ಬುಧವಾರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರ್ಜೆವಾಲ ಅವರು, ಮೀಸಲಾತಿ ವಿಚಾರದಲ್ಲಿ ಬಿಜೆಪಿ ಎಲ್ಲಾ ಸಮುದಾಯದವರನ್ನು ವಂಚಿಸುತ್ತಿದೆ ಎಂದು ಕಾಂಗ್ರೆಸ್ ಸದಾ ಹೇಳುತಿತ್ತು. ಒಕ್ಕಲಿಗ ಮತ್ತು ಲಿಂಗಾಯತರಿಗೆ ಲಾಲಿಪಾಪ್ ಕೊಟ್ಟಂತೆ ಆಗಿದೆ. ಚುನಾವಣೆವರೆಗೂ ಈ ರೀತಿ ಸುಳ್ಳು ಭರವಸೆ ಕೊಡುವುದಾಗಿತ್ತು. ಇದೀಗ ಸುಪ್ರೀಂಕೋರ್ಟ್‌ನಲ್ಲಿ ಅವರ ಮೋಸದಾಟ ಬಯಲಾಗಿದೆ ಎಂದು ಹೇಳಿದರು.

ಮೀಸಲಾತಿ ಪರಿಷ್ಕರಣೆ ಹೆಸರಿನಲ್ಲಿ ಬಿಜೆಪಿ ವಂಚನೆ ಮಾಡುತ್ತಿದೆ. ಮೀಸಲಾತಿ ಪರಿಷ್ಕರಣೆ ಸಂಬಂಧ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಸುಪ್ರೀಂಕೋರ್ಟ್​​ಗೆ ಅಫಿಡೆವಿಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ. ಮೀಸಲಾತಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಏಕೆ ಮೋಸದಾಟ ಆಡಿದ್ದಾರೆ ಎಂದು ಪ್ರಶ್ನಿಸಿದರು.

40 ಪರ್ಸೆಂಟ್ ಬಿಜೆಪಿ ಸರ್ಕಾರ ಈ ಬಾರಿ 40 ಸ್ಥಾನಗಳಿಗೆ ಕುಸಿಯಲಿದೆ ಎಂದು ಕಾಂಗ್ರೆಸ್ ನಾಯಕ ವಾಗ್ದಾಳಿ ನಡೆಸಿದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ​ ಸುರ್ಜೆವಾಲ ಅವರು 9 ಪ್ರಶ್ನೆಗಳನ್ನು ಕೇಳಿದ್ದಾರೆ.

  1. ನೀವು ಲಿಂಗಾಯತರು, ಒಕ್ಕಲಿಗರು, ಎಸ್‌ಸಿ ಮತ್ತು ಎಸ್‌ಟಿಗಳ ಮೇಲೆ “ಮೀಸಲಾತಿಯ ವಂಚನೆ ಆಟ ಏಕೆ ಆಡಿದ್ದೀರಿ?
  2. ನೀವು ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿಯನ್ನು ಏಕೆ ಸಮರ್ಥಿಸಲಿಲ್ಲ ?
  3. ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಬೊಮ್ಮಾಯಿ-ಮೋದಿ ಸರ್ಕಾರ ಏಕೆ ವಿಫಲವಾಯಿತು ?
  4. ಮಾರ್ಚ್ 14, 2023 ರಂದು ಸಂಸತ್ತಿನಲ್ಲಿ ಎಸ್​ಸಿ-ಎಸ್​ಟಿಗಳಿಗೆ ಹೆಚ್ಚಿದ ಮೀಸಲಾತಿಯನ್ನು ಮೋದಿ ಸರ್ಕಾರ ಏಕೆ ತಿರಸ್ಕರಿಸಿತು ?
  5. ಎಸ್​ಸಿ-ಎಸ್​ಟಿಗಾಗಿ ಹೆಚ್ಚಿದ ಮೀಸಲಾತಿಯ ಕಾನೂನನ್ನು ಕೇಂದ್ರ ಸರ್ಕಾರವು ಸಂವಿಧಾನದ IX ನೇ ಶೆಡ್ಯೂಲ್‌ನಲ್ಲಿ ಏಕೆ ಹಾಕಲಿಲ್ಲ ?
  6. ಎಸ್​ಸಿ, ಎಸ್​ಟಿಗಳ ಆಕಾಂಕ್ಷೆಗಳನ್ನು ಪೂರೈಸಲು ನೀವು ಮೀಸಲಾತಿಯ ಶೇ 50 ಸೀಲಿಂಗ್ ಅನ್ನು ಹೆಚ್ಚಿಸಲು ಏಕೆ ನಿರಾಕರಿಸುತ್ತಿದ್ದೀರಿ ?
  7. ಧ್ರುವೀಕರಣಕ್ಕಾಗಿ ನೀವು ಏಕೆ ಅನ್ಯಾಯವಾಗಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಗುರಿಯಾಗಿಸಿಕೊಂಡಿದ್ದೀರಿ?
  8. ಬೊಮ್ಮಾಯಿ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡುವ ಮೂಲಕ ಮೀಸಲಾತಿ ಕುರಿತಾದ ತನ್ನದೆ ಆದ ಸರ್ಕಾರಿ ಆದೇಶವನ್ನು ಏಕೆ ತಡೆಹಿಡಿದಿದೆ ?
  9. ಪ್ರಧಾನಮಂತ್ರಿಯವರು SC, ST ಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರಾ ? ಲಿಂಗಾಯತರು, ಒಕ್ಕಲಿಗರು ಮತ್ತು ಇತರರು ಮೀಸಲಾತಿ ಹೆಸರಿನಲ್ಲಿ ಬಿಜೆಪಿ ಮಾಡಿದ ದ್ರೋಹಕ್ಕಾಗಿ?

LEAVE A REPLY

Please enter your comment!
Please enter your name here