ಬೆಂಗಳೂರು: ಬರುವ ವಿಧಾನಸಭೆ ಚುನಾವಣೆಯಲ್ಲಿ (Assembly election) ಗೆಲ್ಲುವ ಅವಕಾಶ ಹೆಚ್ಚು ಇರುವುದರಿಂದ 23 ರಿಂದ 24 ಮಂದಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ನ (Congress) ಮುಸ್ಲಿಂ ಶಾಸಕರು, ಮಾಜಿ ಶಾಸಕರು ಆಗ್ರಹಿಸಿದ್ದಾರೆ.
ಇಂದು (ಡಿ.13) ನಗರದಲ್ಲಿ ನಡೆದ ಕಾಂಗ್ರೆಸ್ನ ಮುಸ್ಲಿಂ ಶಾಸಕರು, ಮಾಜಿ ಶಾಸಕರ ಸಭೆಯಲ್ಲಿ ಕಳೆದ ಬಾರಿ 17 ಮಂದಿ ಮುಸ್ಲಿಮರಿಗೆ ಟಿಕೆಟ್ ನೀಡಲಾಗಿತ್ತು. ಈ ಪೈಕಿ 7 ಮಂದಿ ಗೆಲುವು ಸಾಧಿಸಿದ್ದಾರೆ. ಈ ವಿಚಾರವನ್ನು ಹೈಕಮಾಂಡ್ ಮುಂದೆ ಇಡಲು ಮುಸ್ಲಿಂ ಮುಖಂಡರು ಸಭೆಯಲ್ಲಿ ನಿರ್ಧರಿಸಿದ್ದಾರೆ.
2023ರ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ವಿಶೇಷ ಆಗಿರಲಿದೆ
2023ರ ವಿಧಾನಸಭೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ವಿಶೇಷ ಆಗಿರಲಿದೆ ಎಂದು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಳಾಗಿವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಬಾರಿ ಆಯಾ ಜಿಲ್ಲಾವಾರು ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಬಿಜೆಪಿ ಜಾತಿಗಳನ್ನು ಒಡೆದಿದೆ, ಧರ್ಮಗಳನ್ನ ಸಹ ಒಡೆದಾಯ್ತು. ಈಗ ಬಿಜೆಪಿಯವರು ರೈತರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಸಿದರು.
ಕಾಂಗ್ರೆಸ್ ಇದ್ದಾಗ ಸಲಕರಣೆ ನೀಡಲು ಸಬ್ಸಿಡಿ ಕೊಡಲಾಗುತ್ತಿತ್ತು. ಅದೇ ಬಿಜೆಪಿ ಸರ್ಕಾರದಲ್ಲಿ ಸಬ್ಸಿಡಿಯನ್ನ ತೆಗೆದು ಹಾಕುತ್ತಿದ್ದಾರೆ. ಬಿಜೆಪಿಯವರಿಗೆ ವ್ಯಾಪಾರೀಕರಣ ದೃಷ್ಟಿ ಜಾಸ್ತಿಯಿದೆ. ರೈತರಿಗೆ ಉಚಿತ ವಿದ್ಯುತ್ ಕೊಡಬೇಕು, ಈಗ ಮೀಟರ್ ಅಳವಡಿಸುವ ಯೋಜನೆ ಹೊಂದಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಗಡಿ ವಿವಾದ ವಿಚಾರ ಇದ್ದೇ ಇರುತ್ತದೆ
ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಮಾತನಾಡಿದ ಅವರು ಕರ್ನಾಟಕದ ಯಾವುದೇ ಜಾಗವು ಬಿಟ್ಟುಕೊಡುವ ಪ್ರಶ್ನೇಯೇ ಇಲ್ಲ. ನಮ್ಮ ದೇಶದಲ್ಲಿ ಕಾನೂನು ಅಂತ ಇದೇ, ಕೋರ್ಟ್ ಕಚೇರಿ ಅಂತ ಇದೆ. ಅದನ್ನು ಗಡಿ ವಿವಾದ ಈಗ ಕೋರ್ಟಿನಲ್ಲಿ ಇದೆ. ಗಡಿ ವಿವಾದವನ್ನು ಪ್ರಣಾಳಿಕೆಯಲ್ಲಿ ತರಲು ನಮ್ಮ ನಾಯಕರು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಗಡಿ ವಿವಾದ ವಿಚಾರ ಇದ್ದೇ ಇರುತ್ತದೆ. ನಮ್ಮ ತಂದೆ ಬಂಗಾರಪ್ಪ ಅವರೇ ಬೆಳಗಾವಿಯಲ್ಲಿ ಕನ್ನಡ ಮೇಯರ್ ಮಾಡಿದರು. ಕಾಂಗ್ರೆಸ್ ಪಕ್ಷದಿಂದಲೇ ಮೊದಲು ಕನ್ನಡ ಮೇಯರ್ ಮಾಡಲಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕನ್ನಡಿಗರ ಮೇಲೆ ಅನ್ಯಾಯವಾಗಿರುವ ವಿಚಾರವಾಗಿ ಮಾತನಾಡಿದ ಅವರು ಮಹಾರಾಷ್ಟ್ರ ಕನ್ನಡಿಗರ ಪರ ಕಾಂಗ್ರೆಸ್ ಪಕ್ಷದ ಧ್ವನಿ ಯಾವಾಗಲು ಗಟ್ಟಿಯಾಗಿ ಇರುತ್ತೆ. ಸರ್ಕಾರ ಸತ್ತಾಗ ಅದು ಜನರಿಗೆ ಕೇಳಿಸುವುದಿಲ್ಲ. ಗೋವಾದಲ್ಲೂ ಇದೇ ರೀತಿ ಆಗಿದೆ. ಇದನ್ನ ಕಾನೂನು ಬದ್ಧವಾಗಿ ಪರಿಹಾರಕ್ಕೆ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು. ಅದರ ಜೊತೆಗೆ ಮಾನವೀಯತೆಯಿಂದಲು ನೋಡಬೇಕು. ಗಡಿ ವಿವಾದ ಯಾವಾಗಲೂ ಚುನಾವಣೆ ಸಂದರ್ಭದಲ್ಲಿ ಬರುತ್ತದೆ. ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕು. ಈ ವಿಚಾರದಲ್ಲಿ ವರಿಷ್ಠರನ್ನ ಕೇಳಿಕೊಂಡು ಮಾತನಾಡುವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
