Home Uncategorized ಮುರುಘಾಶ್ರೀ ವಿರುದ್ಧ ಪಿತೂರಿ ಪ್ರಕರಣ: ಸೌಭಾಗ್ಯ ಬಸವರಾಜನ್ ಅರೆಸ್ಟ್

ಮುರುಘಾಶ್ರೀ ವಿರುದ್ಧ ಪಿತೂರಿ ಪ್ರಕರಣ: ಸೌಭಾಗ್ಯ ಬಸವರಾಜನ್ ಅರೆಸ್ಟ್

25
0

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ (Murugha Mutt Shivamurthy Sharanaru) ವಿರುದ್ಧ ಪಿತೂರಿ ಪ್ರಕರಣ ಸಂಬಂಧ ಮಾಜಿ ಶಾಸಕರೂ ಆಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ (S.K.Basavarajan) ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಪೊಲೀಸರು ದಾವಣಗೆರೆಯಲ್ಲಿ ಅಧಿಕೃತವಾಗಿ ಬಂಧಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಿಟ್ಟಿದ್ದಾರೆ. ಮುರುಘಾ ಶ್ರೀಗಳ ವಿರುದ್ಧ ಪಿತೂರಿ ನಡೆಸಿರುವುದು ಬಹಿರಂಗಗೊಂಡಿತ್ತು. ಶ್ರೀಗಳ ವಿರುದ್ಧ ಸುಳ್ಳು ಕೇಸ್‌ ದಾಖಲಿಸಲು ಸಂತ್ರಸ್ತೆಗೆ ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರ ಪ್ರಚೋದನೆ ನೀಡಿದ್ದ ಆಡಿಯೋ ವೈರಲ್ (Audio Viral Case) ಆಗಿತ್ತು. ಈ ಸಂಬಂಧ ನ.9ರಂದು ಮುರುಘಾಮಠದ ಉಸ್ತುವಾರಿ ಬಸವಪ್ರಭುಶ್ರೀ ಅವರು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನವೆಂಬರ್ 10ರಂದು ಬಸವರಾಜೇಂದ್ರ ಬಂಧಿಸಿ ಪೊಲೀಸರ ವಿಚಾರಣೆ ಆರಂಭಿಸಿದ್ದು, ಅಂದು ರಾತ್ರಿ ಬಸವರಾಜನ್ ಬಂಧನ ಆಗಿತ್ತು. ಇದೀಗ ಬಸವರಾಜನ್ ಪತ್ನಿ ಸೌಭಾಗ್ಯ ಅವರು ಅರೆಸ್ಟ್ ಆಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ರಿಟ್ ಅರ್ಜಿ: ಪಿ.ಎಸ್.ವಸ್ತ್ರದ್ ನೇಮಕ ರದ್ದತಿಗೆ ಮನವಿ

ಈ ಹಿಂದೆ ಮಠದ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳ ವಿರುದ್ಧ ದೂರು ನೀಡುವಂತೆ ಬಾಲಕಿಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಚಿತ್ರದುರ್ಗ ಪೊಲೀಸರು ಮಠದ ಅಡುಗೆ ಸಹಾಯಕಿಯನ್ನು ಬಂಧಿಸಿದ್ದರು. ಮುರುಘಾಶ್ರೀ ವಿರುದ್ಧ ಎರಡನೇ ಪೋಕ್ಸೋ ದೂರು ನೀಡಿದ್ದ ಈ ಮಹಿಳೆಯನ್ನು ಪೊಲೀಸರು ವಿಚಾರಣೆಗೆಂದು ನವೆಂಬರ್ 10ರಂದು ವಿಚಾರಣೆ ನಡೆಸಿ ನವೆಂಬರ್ 11ರಂದು ಬಂಧಿಸಿದ್ದರು.

ಆಡಿಯೋದಲ್ಲಿ ಮುಖ್ಯವಾಗಿ ಹೇಳಿರುವುದು ಏನು?

ಮುರುಘಾ ಶರಣರ ವಿರುದ್ಧ ಸುಳ್ಳು ದೂರು ನೀಡುವಂತೆ ವ್ಯಕ್ತಿಯೊಬ್ಬರು ಸಂತ್ರಸ್ತೆಗೆ ಕರೆ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಸಂಭಾಷಣೆ 14 ನಿಮಿಷ 15 ಸೆಕೆಂಡ್‌ ಕಾಲ ಇದ್ದು, ಕರೆ ಮಾಡಿದ ವ್ಯಕ್ತಿ ಬಾಲಕಿಗೆ ಸುಳ್ಳು ದೂರು ನೀಡುವಂತೆ ಪ್ರಚೋದನೆ ಮಾಡಿದ್ದಲ್ಲದೆ, ಸಹಾಯ ಮಾಡುವುದಾಗಿ ಆಮಿಷವನ್ನೂ ಒಡ್ಡಿದ್ದನು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here